ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ 370 ನೇ ವಿಧಿಯನ್ನು ಇತ್ತೀಚಿಗೆ ರದ್ದುಪಡಿಸಿದ ವಿಷಯದಲ್ಲಿ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಯಶಸ್ಸು ಸಿಕ್ಕಿದೆ, ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿ “ಕಾಶ್ಮೀರದ ವಿಷಯ ಭಾರತದ ಆಂತರಿಕ ವಿಷಯ’ ಎಂದಿದೆ.
“ಭಾರತ ಸರ್ಕಾರವು 370 ನೇ ವಿಧಿಯನ್ನು ರದ್ದುಪಡಿಸುವುದು ಭಾರತದ ಆಂತರಿಕ ವಿಷಯವಾಗಿದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಅಭಿವೃದ್ಧಿಯು ಎಲ್ಲ ದೇಶಗಳಿಗೂ ಆದ್ಯತೆಯಾಗಿರಬೇಕು ಎಂದು ಬಾಂಗ್ಲಾದೇಶ ಯಾವಾಗಲೂ ತಾತ್ವಿಕವಾಗಿ ಪ್ರತಿಪಾದಿಸುತ್ತದೆ”ಎಂದು ಹೇಳಿಕೆಯಲ್ಲಿ ಅದು ತಿಳಿಸಿದೆ.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಭಾರತದ ನಿಲುವನ್ನು ಬೆಂಬಲಿಸಿದ ಇತರ ರಾಷ್ಟ್ರಗಳ ಪಟ್ಟಿಗೆ ಈಗ ಬಾಂಗ್ಲಾದೇಶವೂ ಸೇರ್ಪಡೆಯಾಗಿದೆ. ಈ ಹಿಂದೆ, ಮಾಲ್ಡೀವ್ಸ್, ಅಫ್ಘಾನಿಸ್ತಾನ, ಶ್ರೀಲಂಕಾ, ಭೂತಾನ್ ಮತ್ತು ನೇಪಾಳಗಳು ಕಾಶ್ಮೀರ ವಿಷಯವು ಭಾರತದ ಆಂತರಿಕ ವ್ಯವಹಾರಗಳ ಭಾಗವಾಗಿದೆ ಎಂಬ ಭಾರತದ ನಿಲುವಿಗೆ ತಮ್ಮ ಸಹಮತಿಯನ್ನು ವ್ಯಕ್ತಪಡಿಸಿದ್ದವು.
ಮತ್ತೊಂದೆಡೆ, ಪಾಕಿಸ್ತಾನವು ಈ ವಿಷಯವನ್ನು ಅಂತಾರಾಷ್ಟ್ರೀಕರಿಸುವ ಯಾವ ಪ್ರಯತ್ನವನ್ನೂ ಕೈಚೆಲ್ಲುತ್ತಿಲ್ಲ. ಅದರ ಸರ್ಕಾರಿ ಅಧಿಕಾರಿಗಳು ಮತ್ತು ಮಾಧ್ಯಮ ವ್ಯಕ್ತಿಗಳು ಆನ್ಲೈನ್ ಮೂಲಕ ಈ ವಿಷಯವನ್ನು ಕೆಣಕಿ ಅಂತಾರಾಷ್ಟ್ರೀಯವಾಗಿ ಭಾರತವನ್ನು ನಕಾರಾತ್ಮಕವಾಗಿ ಬಿಂಬಿಸುವ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಅನೇಕ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.