ಜಮ್ಮು: ಜಮ್ಮು ಮತ್ತು ಕಾಶ್ಮೀರದ ತಾವಿ ನದಿಯ ಏರುತ್ತಿರುವ ಪ್ರವಾಹದ ನಡುವೆ ಸಿಲುಕಿಕೊಂಡಿದ್ದ ಇಬ್ಬರು ವ್ಯಕ್ತಿಗಳ ಪ್ರಾಣ ಉಳಿಸಲು ಭಾರತೀಯ ವಾಯುಪಡೆ ಇಂದು ಸಾಹಸಮಯ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ.
ಮೀನುಗಾರರಾದ ಇಬ್ಬರು ಪ್ರವಾಹದಲ್ಲಿ ಸಿಲುಕಿಕೊಂಡು ದಿಕ್ಕು ತೋಚದೆ ತಾವಿ ನದಿಯ ನಡುವಿನಲ್ಲಿ ಇರುವ ಬ್ಯಾರೇಜ್ ಗೋಡೆಯ ಮೇಲೆ ಕುಳಿತುಕೊಂಡಿದ್ದರು. ಅವರ ಸುತ್ತಲೂ ನದಿಯಿಂದ ಭಾರೀ ಪ್ರಮಾಣದಲ್ಲಿ ನೀರು ಪ್ರವಾಹವಾಗಿ ಹರಿದು ಬರುತ್ತಿತ್ತು. ಇಬ್ಬರಿಗೂ ರಕ್ಷಣೆಯನ್ನು ಎದುರು ನೋಡುವುದಲ್ಲದೇ ಬೇರೆ ಯಾವ ಆಯ್ಕೆಯೂ ಇರಲಿಲ್ಲ.
ಈ ವೇಳೆ ಹೆಲಿಕಾಫ್ಟರ್ ಮೂಲಕ ಆಗಮಿಸಿದ ವಾಯುಸೇನೆ, ತನ್ನೊಬ್ಬ ಯೋಧನನ್ನು ಅವರಿರುವ ಸ್ಥಳಕ್ಕೆ ಇಳಿಸಿದೆ. ಯೋಧ ಬಂದು ಇಬ್ಬರ ಸೊಂಟಕ್ಕೂ ಹಗ್ಗವನ್ನು ಕಟ್ಟಿ ಹೆಲಿಕಾಫ್ಟರ್ಗೆ ಹತ್ತಿಸುತ್ತಾನೆ. ಈ ರಕ್ಷಣಾ ಕಾರ್ಯ ರೋಮಾಂಚನಕಾರಿಯಾಗಿದ್ದು, ಇದರ ವೀಡಿಯೋ ಭಾರೀ ವೈರಲ್ ಆಗಿದೆ.
ವಾಯುಸೇನೆಗೂ ಮುಂಚಿತವಾಗಿ ಇವರರಿರುವ ಸ್ಥಳಕ್ಕೆ ವಿಪತ್ತು ನಿರ್ವಹಣಾ ತಂಡ ಆಗಮಿಸಿತ್ತು. ಆದರೆ ಇವರನ್ನು ರಕ್ಷಣೆ ಮಾಡಲು ಅದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ವಾಯುಸೇನೆಗೆ ಸೂಚನೆ ನೀಡಲಾಗಿತ್ತು. ವಾಯುಸೇನೆ ಜಮ್ಮುವಿನಿಂದ ಇಲ್ಲಿಗೆ ಹೆಲಿಕಾಫ್ಟರ್ ಅನ್ನು ಕಳುಹಿಸಿತ್ತು.
ವಾಯುಸೇನೆ ಇಲ್ಲಿ ಮಾಡಿದ ರಕ್ಷಣಾ ಕಾರ್ಯಚರಣೆ ಶೌರ್ಯ, ಸಾಹಸ, ಟೀಮ್ ವರ್ಕ್ನ ನಿಜವಾದ ಪ್ರತೀಕದಂತಿತ್ತು.
#SavingLives : In a daring rescue operation, IAF Mi-17 helicopter rescued two civilians stranded in overflowing Tawi River near Jammu today.@SpokespersonMoD pic.twitter.com/GexaoXGOLP
— Indian Air Force (@IAF_MCC) August 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.