ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿತ್ತು. ಯಾವ ವರ್ಷ ಎಂದು ನನಗೆ ನಿಖರವಾಗಿ ನೆನಪಿಲ್ಲ. ನಾನು ಸುಮಾರು 12 ಅಥವಾ 13 ವರ್ಷದವನಾಗಿದ್ದೆ. ಖಾಕಿ ಶಾರ್ಟ್ಸ್ ಧರಿಸಿದ ಕೆಲವು ಯುವಕರು ನಮ್ಮ ಮನೆಯ ಜಗುಲಿಯಲ್ಲಿ ನಿಂತು ಮಾತನಾಡುತ್ತಿದ್ದರು. ನನ್ನ ಅಪ್ಪ ಮತ್ತು ಅಮ್ಮನಿಗೆ ಅವರು ಇಬ್ಬರು ವ್ಯಕ್ತಿಗಳಿಗೆ ಒಂದು ವಾರದ ಆಹಾರವನ್ನು ತಯಾರಿಸಿಕೊಡುವಂತೆ ಕೇಳುತ್ತಿದ್ದರು – ಅವರಿಗಾಗಿ ನಾವು ಬೆಳಗಿನ ಉಪಾಹಾರ, ಊಟವನ್ನು ತಯಾರಿಸಿ ಬಳಿಕ ಅದನ್ನು ಪ್ಯಾಕ್ ಮಾಡಿದ್ದೆವು.
ನನ್ನ ತಾಯಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ತಲಾ ಐದು ಪ್ಯಾಕೆಟ್ ಮತ್ತು ಉಪಹಾರದ ಎರಡು ಪ್ಯಾಕೆಟ್ಗಳನ್ನು ತಯಾರಿಸಿದರು. ನಾವೆಲ್ಲರೂ ಅವುಗಳನ್ನು ಬಾಳೆ ಎಲೆಯಲ್ಲಿ ಕಟ್ಟಿ ಪ್ಯಾಕ್ ಮಾಡಿದೆವು. ಆ ‘ಅಣ್ಣ’ನವರು ನಮ್ಮ ಬೀದಿಯಲ್ಲಿರುವ ಎಲ್ಲಾ ಮನೆಗಳಿಗೂ ಇದೇ ರೀತಿಯ ಮನವಿಯನ್ನು ಮಾಡಿದ್ದರು. ಆಹಾರದ ಪೊಟ್ಟಣವನ್ನು ಅವರು ಸಮಯಕ್ಕೆ ಸರಿಯಾಗಿ ಬಂದು ತೆಗೆದುಕೊಂಡು ಹೋಗುತ್ತಿದ್ದರು. ನಮ್ಮ ಮನೆಗೆ ಬೆಳಗ್ಗೆ ಬಂದು ಬೆಳಗಿನ ಉಪಾಹಾರ ಮತ್ತು ಊಟ ಎರಡನ್ನೂ ಸಂಗ್ರಹ ಮಾಡುತ್ತಿದ್ದರು. ಸಂಜೆ, ರಾತ್ರಿ ಊಟವನ್ನು ಬಂದು ತೆಗೆದುಕೊಂಡು ಹೋಗುತ್ತಿದ್ದರು. ನಮ್ಮ ಜಿಲ್ಲೆಯ ದೂರದ ಹಳ್ಳಿಗಳಲ್ಲಿ ಭಾರಿ ಮಳೆಯಿಂದಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಜನರು ನಿರಾಶ್ರಿತರಾಗಿದ್ದರು ಮತ್ತು ಅವರನ್ನು ಮದುವೆ ಮಂಟಪ ಸೇರಿದಂತೆ ಮತ್ತು ಕೆಲವರನ್ನು ಆಸ್ಪತ್ರೆಗಳಲ್ಲಿ ಇರಿಸಲಾಗಿತ್ತು. ಅವರಿಗಾಗಿಯೇ ಖಾಕಿ ಶಾರ್ಟ್ಸ್ನಲ್ಲಿದ್ದ ಈ ಹುಡುಗರು ಮನೆ ಮನೆಗೆ ತೆರಳಿ ಆಹಾರವನ್ನು ಸಂಗ್ರಹಿಸುತ್ತಿದ್ದರು.
14 ವರ್ಷದವನಿದ್ದಾಗ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶಾಖೆಗಳಿಗೆ ತೆರಳಲು ಪ್ರಾರಂಭಿಸಿದಾಗ, ಸಂಘದ ‘ಸೇವಾ’ ವಿಧಾನದ ಮೂಲವನ್ನು ನಾನು ಅರ್ಥಮಾಡಿಕೊಂಡೆ. ಖಾಕಿ ಶಾರ್ಟ್ಸ್ ಯುವಕರು ಮಾಡಿದ್ದರಲ್ಲಿ ಯಾವುದೇ ಚಾರಿಟಿ ಇಲ್ಲ, ನಮ್ಮ ದೇಶವೆಂಬ ದೊಡ್ಡ ಕುಟುಂಬದ ಒಂದು ಭಾಗವಾದ ಜನರು ಪೀಡಿತರಾಗಿದ್ದಾರೆ. ಇವರನ್ನು ತಮ್ಮ ಸ್ವಂತ ಸಂಬಂಧಿಕರು ಮತ್ತು ರಕ್ತಸಂಬಂಧಿಗಳಂತೆ ನೋಡಿಕೊಳ್ಳಲು ಹಲವು ಕುಟುಂಬಗಳು ಮುಂದೆ ಬಂದಿವೆ. ಇಲ್ಲಿ ಸಂಘ ಮಾಡಿದ್ದು ಸಮನ್ವಯಗೊಳಿಸುವ ಕಾರ್ಯವನ್ನು.
ಈಗ, ಆ ಮಳೆಗಾಲದ ಮಸುಕಾದ ನೆನಪುಗಳಿಗೆ 35 ವರ್ಷಗಳೇ ಸಂದಿವೆ. ನನ್ನ ಮುಂದೆ ಒಂದು ಪುಸ್ತಕವಿದೆ, ಪುಸ್ತಕದ ಕೊನೆಯಲ್ಲಿ ಲೇಖಕರು ಹೀಗೆ ಹೇಳುತ್ತಾರೆ:
‘ಸಮಕಾಲೀನ ಭಾರತದಲ್ಲಿ ಹಿಂದುತ್ವದ ಜನಪ್ರಿಯತೆಗೆ ಕಾರಣವಾದ ಅಂಶಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಬೌದ್ಧಿಕ ಯೋಜನೆಯನ್ನು ಅಭಿವೃದ್ಧಿಪಡಿಸುವ ಮೊದಲ ಹೆಜ್ಜೆಯಾಗಿ ನಾನು ಈ ಪುಸ್ತಕವನ್ನು ನೋಡುತ್ತೇನೆ’. (P.195)
‘Disaster Relief and the RSS’ (2019) ಪುಸ್ತಕವು ಭರವಸೆಗೆ ಹತ್ತಿರವಾಗಿದೆ. ಆರ್ಎಸ್ಎಸ್ ಮತ್ತು ಅದರ ವಿವಿಧ ಸಂಸ್ಥೆಗಳಿಂದ ಮತ್ತು ಸಂಘವನ್ನು ತೀವ್ರವಾಗಿ ಟೀಕಿಸುವ ಮೂಲಗಳು ಸೇರಿದಂತೆ ವಿವಿಧ ಮೂಲಗಳಿಂದ ನಿಖರವಾಗಿ ಸಂಗ್ರಹಿಸಿದ ಮಾಹಿತಿಯೊಂದಿಗೆ ಲೇಖಕಿ, ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಯೂ ಆಗಿರುವ ಮಾಲಿನಿ ಭಟ್ಟಾಚಾರ್ಜಿ ಅವರು ಪುಸ್ತಕವನ್ನು ಪ್ರಸ್ತುತಪಡಿಸಿದ್ದಾರೆ, ಹಿಂದೆ ಶೈಕ್ಷಣಿಕ ಬುದ್ಧಿಜೀವಿಗಳು ಮುಟ್ಟಲು ಹಿಂಜರಿದ ಆಯಾಮವನ್ನು ಮುಟ್ಟುವ ಧೈರ್ಯವನ್ನು ಅವರು ಮಾಡಿ ತೋರಿಸಿದ್ದಾರೆ.
ಪುಸ್ತಕವು ಸಂಘದ ಸೇವೆಯನ್ನು ಅಧ್ಯಯನ ಮಾಡುತ್ತದೆ, ಅದರಲ್ಲೂ ವಿಶೇಷವಾಗಿ ರಾಷ್ಟ್ರದಲ್ಲಿ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ ಸಂಘ ಮಾಡಿದ ಸೇವೆಯ ಅಧ್ಯಯನವನ್ನು ಇದು ಒಳಗೊಂಡಿದೆ. ಪುಸ್ತಕದಲ್ಲಿ, ಅಂತರ್ಗತ ಸಂಘರ್ಷ, ಉದ್ವಿಗ್ನತೆ ಇದೆ, ನಮ್ಮ ಶೈಕ್ಷಣಿಕ ಬುದ್ಧಿಜೀವಿಗಳು ಹಿಂದೂ ಸಂಸ್ಥೆಗಳನ್ನು ಪ್ರಾಮಾಣಿಕವಾಗಿ ಅಧ್ಯಯನ ಮಾಡುವಾಗ ಇದನ್ನು ಅನುಭವಿಸಬೇಕಾಗುವುದು ಅನಿವಾರ್ಯ. ರಾಮಚಂದ್ರ ಗುಹಾ, ರೊಮಿಲಾ ಥಾಪರ್, ಕ್ರಿಸ್ಟೋಫರ್ ಜಾಫರ್ಲೋಟ್, ಅಚುತ್ ಯಾಗ್ನಿಕ್ ಮತ್ತು ಅಂಗನಾ ಚಟರ್ಜಿಯಂತಹವರಿಂದ ಲೇಖಕಿ ವಿಶ್ಲೇಷಣೆಗಳಿಗೆ ಸಾಧನ ಮತ್ತು ಚೌಕಟ್ಟುಗಳನ್ನು ಕಲಿತಿದ್ದಾರೆ ಮತ್ತು ಅದನ್ನು ಆಂತರಿಕಗೊಳಿಸಿದ್ದಾರೆ.
ಇವರುಗಳನ್ನು ‘ತಟಸ್ಥ’ ಶೈಕ್ಷಣಿಕ ಬುದ್ಧಿಜೀವಿಗಳೆಂದು ನಿರೂಪಿಸಲಾಗಿದ್ದರೂ, ಪ್ರತಿಯೊಬ್ಬರೂ ಆರ್ಎಸ್ಎಸ್ ವಿರುದ್ಧ ಮಾತ್ರವಲ್ಲದೆ ಭಾರತೀಯ ಸಂಸ್ಕೃತಿಯ ಸಹಜ ಮೌಲ್ಯದ ವಿರುದ್ಧವೂ ಆಳವಾದ ಪೂರ್ವಾಗ್ರಹವನ್ನು ಹೊಂದಿದ್ದಾರೆ. ರೋಮಿಲಾ ಥಾಪರ್ ಅವರು ಹೇಳುವ ಪ್ರಕಾರ, ಮಧ್ಯಕಾಲೀನ ಕಾಲದ ಭಕ್ತಿ ಚಳವಳಿಯ ಸಮಯದಲ್ಲಿ ಸೇವೆ ಹೆಚ್ಚಾಗಿ ಜನಪ್ರಿಯವಾಗಿದೆ. ಪ್ರಾಚೀನ ಹಿಂದೂ ತತ್ವ ‘ದಾನ’ದಲ್ಲಿ ಸೇವೆ ಎಂಬುದು ಇಲ್ಲ. ‘ದಾನ’ ಎಂಬುದು ‘ಪುರೋಹಿತರಿಗೆ ಮತ್ತು ಬ್ರಾಹ್ಮಣರಿಗೆ ವಸ್ತುಗಳ ರೂಪದಲ್ಲಿ ನೀಡುವ ಉಡುಗೊರೆಯಾಗಿದೆ. ಆದರೆ ದಾನವನ್ನು ಸೇವೆಯ ಮನೋಭಾವದಿಂದ ಮಾಡಲಾಗಿಲ್ಲ. ಭವಿಷ್ಯದ ಆದಾಯಕ್ಕಾಗಿ ಯಶಸ್ಸು ಮತ್ತು ಹೂಡಿಕೆಯ ಸಂಕೇತವಾಗಿ ಮಾಡಲಾಗಿದೆ’. (p.57 & p.58).
ಇಲ್ಲಿ, ಥಾಪರ್ ಸ್ಪಷ್ಟವಾಗಿ ತಪ್ಪು ಗ್ರಹಿಕೆಯಲ್ಲಿದ್ದಾರೆ. ಋಗ್ವೇದವು ಶ್ರೀಮಂತರು ತಮ್ಮ ಸಂಪತ್ತನ್ನು ನಿರ್ಗತಿಕರೊಂದಿಗೆ ಹಂಚಿಕೊಳ್ಳುವುದನ್ನು ಒಂದು ಬಾಧ್ಯತೆಯನ್ನಾಗಿ ಮಾಡುತ್ತದೆ. ‘ಧನನ್ನಾದನಪ್ರಸಮ್ಸಾ’ (Rig Veda X.117.943) ಎಂಬ ಋಗ್ವೇದದ ಸಾಲು ಆಹಾರವನ್ನು ಹಂಚಿಕೊಳ್ಳುವುದನ್ನು ಪ್ರತಿಪಾದಿಸುತ್ತದೆ ಮತ್ತು ಎಲ್ಲಾ ಸಂಪತ್ತು, ಕರ್ತವ್ಯ, ಬಾಧ್ಯತೆ, ಕೇವಲ ದಾನ ಮಾಡುವುದಕ್ಕೆ ಇರುವವು ಮತ್ತು ಅವುಗಳ ಸಂಗ್ರಹಣೆ ಮಾಡುವುದು ಶಿಕ್ಷಾರ್ಹ ಪಾಪ ಎಂಬುದನ್ನು ಸಾರುತ್ತದೆ.
ಅಲ್ಲದೇ, ಆಹಾರವನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುವುದು ಮತ್ತು ಅದನ್ನು ಹಂಚಿಕೊಳ್ಳುವುದು ಮಾನವೀಯತೆಯನ್ನು ಬಂಧಿಸುವ ಪ್ರತಿಜ್ಞೆ ಎಂದು ಹೇಳುತ್ತದೆ. ಹಿಂದೂ ಮಹಾಕಾವ್ಯಗಳು ಮತ್ತು ಪುರಾಣಗಳು ಅಗತ್ಯವಿರುವವರಿಗೆ ಆಹಾರವನ್ನು ನೀಡುವ ಮಹತ್ವವನ್ನು ಪದೇ ಪದೇ ಒತ್ತಿ ಹೇಳುತ್ತವೆ. ಎಲ್ಲರಿಗೂ ಆಹಾರ ಉತ್ಪಾದನೆ ಮತ್ತು ಹಂಚಿಕೆ, ಅಥವಾ ವಿವಿಧ ಸಾಂಸ್ಥಿಕ ವಿಧಾನಗಳ ಮೂಲಕ ಸಮಾಜದ ಆಹಾರ ಭದ್ರತೆಯನ್ನು ಕಾಪಾಡುವುದು ಇತ್ತೀಚಿನ ದಿನಗಳವರೆಗೆ ನಿರಂತರವಾಗಿ ನಡೆದುಕೊಂಡು ಬಂದಿದೆ ಎಂಬುದನ್ನು ಜಿತೇಂದ್ರ ಬಜಾಜ್ ಮತ್ತು ಎಂ ಡಿ ಶ್ರೀನಿವಾಸ್ ತೋರಿಸಿಕೊಟ್ಟಿದ್ದಾರೆ.
ಆದ್ದರಿಂದ ಇಲ್ಲಿ, ಈ ವಿಶಾಲ ಸಂಪ್ರದಾಯದ ಮುಂದುವರಿಕೆಯಾಗಿ ಆರ್ಎಸ್ಎಸ್ನ ಸೇವಾ ಸಂಪ್ರದಾಯವನ್ನು ನೋಡುವ ಅವಕಾಶವನ್ನು ಲೇಖಕಿ ತಪ್ಪಿಸಿಕೊಂಡಿದ್ದಾರೆ. ಆದರೆ ಈ ವೈಫಲ್ಯ ವೈಯಕ್ತಿಕವಾದುದು ಅಲ್ಲ, ಸಂಘದ ಸೇವಾ ಪರಿಕಲ್ಪನೆಯನ್ನು ಅಧ್ಯಯನ ಮಾಡಲು ಸುಸಜ್ಜಿತವಾಗಿರದ ಶೈಕ್ಷಣಿಕ ಪರಿಸರ ವ್ಯವಸ್ಥೆಯಿಂದ ಈ ವೈಫಲ್ಯ ಉಂಟಾಗಿದೆ.
ಪುಸ್ತಕವು ಒಂದು ರೀತಿಯ ತಾಜಾತನವನ್ನು ನೀಡುತ್ತದೆ. ಬೆಲ್ಜಿಯಂನ ಇಂಡಾಲಜಿಸ್ಟ್ ಡಾ. ಎಲ್ಸ್ಟ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರೂ ಕೂಡ, ಶೈಕ್ಷಣಿಕ ಉದ್ಯಮದ ಕೆಲವರು ಎಲ್ಸ್ಟ್ ಅವರ 1939 ರ ಪುಸ್ತಕದಲ್ಲಿನ ಗುರೂಜಿ ಗೋಳ್ವಾಲ್ಕರ್ ಉಲ್ಲೇಖವನ್ನು ಉಲ್ಲೇಖಿಸಿ ಸಂಘವು ನಾಜಿ ಪರವಾದ ಧೋರಣೆಯನ್ನು ಹೊಂದಿದೆ ಎಂಬುದನ್ನು ಪ್ರತಿಪಾದಿಸುತ್ತಾರೆ. ಆದರೆ ಅವರಿಗೆ ಕಾಣದಿರುವುದು ಅದೇ ಗೋಳ್ವಾಲ್ಕರ್ ಅವರ ಸೇವೆಯ ಉಲ್ಲೇಖ. ಅವರು ಸಂಘದ ಮುಖಂಡರೊಬ್ಬರಿಗೆ ಬರೆದ ಪತ್ರದಲ್ಲಿ, ಧರ್ಮ, ಜಾತಿ ಅಥವಾ ಅಂತಹ ಯಾವುದೇ ಪಂಥೀಯತೆಯ ಆಧಾರದ ಮೇಲೆ ಎಂದಿಗೂ ತಾರತಮ್ಯ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಪ್ರತಿಪಾದಿಸುತ್ತಾರೆ. ಆದರೆ ಲೇಖಕಿ ಅವರ ಈ ಪುಸ್ತಕವು ಬಹುಶಃ ಗೋಳ್ವಾಲ್ಕರ್ ಅವರ ಈ ನಿರ್ದಿಷ್ಟ ಉಲ್ಲೇಖವನ್ನು ಪ್ರಸ್ತುತಪಡಿಸುವ ಮೊದಲ ಶೈಕ್ಷಣಿಕ ಪುಸ್ತಕವಾಗಿದೆ.
ಸೇವೆಯಲ್ಲಿ ಮನುಷ್ಯ ಮತ್ತು ಮನುಷ್ಯನ ನಡುವೆ ಯಾವುದೇ ತಾರತಮ್ಯವನ್ನು ಮಾಡಬಾರದು. ಅವನು ಕ್ರಿಶ್ಚಿಯನ್ ಅಥವಾ ಮುಸ್ಲಿಂ ಆಗಿರಲಿ ಅಥವಾ ಬೇರೆ ಯಾವುದೇ ಮನುಷ್ಯನಾಗಲಿ ನಾವು ಎಲ್ಲರಿಗೂ ಸೇವೆ ಸಲ್ಲಿಸಬೇಕು: ಯಾಕೆಂದರೆ, ವಿಪತ್ತುಗಳು, ಯಾತನೆಗಳು ಮತ್ತು ದುರಾದೃಷ್ಟಗಳು ಅಂತಹ ಯಾವುದೇ ವ್ಯತ್ಯಾಸವನ್ನು ತೋರಿಸುವುದಿಲ್ಲ, ಅವುಗಳು ಎಲ್ಲರನ್ನೂ ಸಮಾನವಾಗಿ ಪೀಡಿಸುತ್ತವೆ.
ಅಂತಹ ತಾರತಮ್ಯರಹಿತ ಸೇವೆಯನ್ನು ಸಂಘ ಸಾಹಿತ್ಯದಲ್ಲಿ ಎತ್ತಿ ತೋರಿಸಿದ ಉದಾಹರಣೆಯನ್ನು ಲೇಖಕಿ ನೀಡುತ್ತಾರೆ. 1996 ರಲ್ಲಿ ಸೌದಿ ವಿಮಾನ ಮತ್ತು ಕಜಕೀಸ್ಥಾನ ವಿಮಾನ ಪರಸ್ಪರ ಢಿಕ್ಕಿ ಹೊಡೆದು ಪತನವಾಯಿತು. ಇದರಲ್ಲಿ ಬಲಿಪಶುಗಳಾದವರು ಮುಖ್ಯವಾಗಿ ಮುಸ್ಲಿಮರು. ಆದರೆ ಆರ್ಎಸ್ಎಸ್ ಸ್ವಯಂಸೇವಕರು ಮೊದಲಿಗರಾಗಿ ನಿಂತು ಸ್ಥಳದಲ್ಲಿ ರಕ್ಷಣಾ ಕಾರ್ಯವನ್ನು ಮಾಡಿದರು. ಸಂಬಂಧಿಕರಿಗೆ ಮೃತ ದೇಹಗಳನ್ನು ಗುರುತಿಸುವುದಕ್ಕೆ ಸಹಾಯ ಮಾಡಿದರು. ಪರಿಹಾರ ಕಾರ್ಯಾಚರಣೆಗಳನ್ನು ಮಾಡಿದರು. 2004 ರ ಸುನಾಮಿ ಸಂಭವಿಸಿದ ಸಮಯದಲ್ಲಿ ಅಂಡಮಾನ್ನಲ್ಲಿ ಸ್ವಾಮಿ ಅಸೀಮಾನಂದ್ ಪ್ರದರ್ಶಿಸಿದ ಪಂಥೀಯತೆ ಮೀರಿದ ಘಟನೆಯನ್ನೂ ಲೇಖಕಿ ಉಲ್ಲೇಖಿಸುತ್ತಾರೆ. ಅದೇ 2004 ರ ಸುನಾಮಿಯಲ್ಲಿ, ಈ ವಿಮರ್ಶಕರು ಮತ್ತು ಆಯುರ್ವೇದ ವೈದ್ಯ ಸ್ನೇಹಿತ ಡಾ.ಎಸ್. ಲೆನಿನ್ (ಅವರು ಮಾರ್ಕ್ ವಾದಿ ಪರ ಕುಟುಂಬದಿಂದ ಬಂದವರು) ವಿಪತ್ತಿನಿಂದ ಬಳಲುತ್ತಿರುವ ಕ್ರಿಶ್ಚಿಯನ್ ಮೀನುಗಾರರಿಗೆ ಸಂಘ ಸೇವೆ ಸಲ್ಲಿಸಿದರ ಬಗ್ಗೆ ವೈಯಕ್ತಿಕ ಅನುಭವವನ್ನು ಪಡೆದುಕೊಂಡಿದ್ದಾರೆ. ಆ ವೇಳೆ ನಾಗರಕೋವಿಲ್ ಆರ್ಎಸ್ಎಸ್ ಮುಖ್ಯಸ್ಥರಾಗಿದ್ದ ಡಾ. ಶ್ರೀನಿವಾಸ ಕಣ್ಣನ್ ನೇತೃತ್ವದ ಸೇವಾ ಭಾರತಿಯ ವೈದ್ಯಕೀಯ ಘಟಕವು ಕರಾವಳಿ ಗ್ರಾಮಗಳನ್ನು ತಲುಪಿದ ಮೊದಲಿಗರು.
‘ಜನಪ್ರಿಯತೆಯನ್ನು ಗಳಿಸುವ ಸಲುವಾಗಿ, ಜಾತ್ಯಾತೀತ ಮೌಲ್ಯವನ್ನು ತೋರಿಸುವುದಕ್ಕಾಗಿ ಸಂಘವು ತಾರತಮ್ಯರಹಿತ ಸೇವೆಯನ್ನು ಒದಗಿಸುವುದನ್ನು ಕಾರ್ಯತಂತ್ರದ ಭಾಗವಾಗಿಸಿದೆ’ ಎಂಬ ನಿರ್ಧಾರಕ್ಕೆ ಲೇಖಕಿಯು ಬಂದಿದ್ದಾರೆ. ಇಲ್ಲಿಗೆ ಆಕೆ ಮುಗಿಸಿದ್ದರೆ, ಈ ಪುಸ್ತಕವು ಆರ್ಎಸ್ಎಸ್ನ ಮತ್ತೊಂದು ರನ್-ಆಫ್-ದಿ-ಮಿಲ್ ಶೈಕ್ಷಣಿಕ ಭಾವಚಿತ್ರವಾಗುತ್ತಿತ್ತು. ಆದರೆ ಅವರು ಮುಂದುವರೆಸಿದ್ದಾರೆ ಮತ್ತು ಅದು ಎಲ್ಲವನ್ನೂ ಬದಲಾಯಿಸಿತು.
‘ಹಲವಾರು ಸ್ವಯಂಸೇವಕರು ಮತ್ತು ಆರ್ಎಸ್ಎಸ್ನ ಸ್ವಕಾರ್ಯಕರ್ತರೊಂದಿಗೆ ಆಳವಾದ ಸಂವಾದವನ್ನು ನಡೆಸಿದ ಬಳಿಕ ಆಕೆಗೆ ಈ ಜನರಲ್ಲಿ ಹೆಚ್ಚಿನವರು ಉತ್ತಮ ಸಮಾಜವನ್ನು ಮತ್ತು ಉತ್ತಮ ರಾಷ್ಟ್ರವನ್ನು ನಿರ್ಮಾಣ ಮಾಡಲು ಉತ್ತಮ ಕೆಲಸವನ್ನು ಮಾಡುತ್ತಿದ್ದೇವೆ ಎಂಬ ಭಾವವನ್ನು ನಿಜವಾಗಿಯೂ ಹೊಂದಿದ್ದಾರೆ ಎಂಬುದು ಅರ್ಥವಾಗುತ್ತದೆ’ (Pp. 84-5)
ಹಾಗಾದರೆ ಆರ್ ಎಸ್ ಎಸ್ ಕಾರ್ಯತಂತ್ರವು ಏನು ಗುರಿಯನ್ನು ಹೊಂದಿದೆ? ಸಹಜವಾಗಿ ಹಿಂದೂ ರಾಷ್ಟ್ರ ಎಂಬ ಹಲವು ಶೀಕ್ಷಣ ತಜ್ಞರ ಅಭಿಪ್ರಾಯಕ್ಕೆ ವಿರುದ್ಧವಾಗಿ. ಮಾಲಿನಿ ಭಟ್ಟಾಚಾರ್ಜಿ ಅವರು ‘ತಟಸ್ಥ’ವಾಗಿ ನಿಂತಿದ್ದಾರೆ.
ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಸಾಧನವಾಗಿ ಸೇವಾ ಕಲ್ಪನೆಯನ್ನು ಗಂಭೀರವಾಗಿ ರೂಪಿಸಿದ ಮೊದಲ ನಾಯಕ ಡಾ. ಹೆಡ್ಗೆವಾರ್. ಗಾಂಧಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಹೆಚ್ಚಾಗಿ, ರಾಷ್ಟ್ರೀಯತೆ ಮೂಲಭೂತ ನಾಗರಿಕ ಕಲ್ಪನೆಯಾಗಿತ್ತು ಮತ್ತು ಭಾಷೆ, ಧರ್ಮ, ಜಾತಿ ಮತ್ತು ಲಿಂಗ ಅಡೆತಡೆಗಳನ್ನು ಇದು ಮೀರಿತ್ತು. ಈ ಅರ್ಥದಲ್ಲಿ, ರಾಮಚಂದ್ರ ಗುಹಾ (2007), ಭಾರತವು ನಿಜಕ್ಕೂ ‘ಅಸ್ವಾಭಾವಿಕ ರಾಷ್ಟ್ರ’ ಆಗಿತ್ತು ಎಂದು ವಾದಿಸುತ್ತಾರೆ. ಏಕೆಂದರೆ ಪಶ್ಚಿಮ ಯುರೋಪಿನಲ್ಲಿ ಇದೇ ರೀತಿಯ ಪ್ರತಿರೂಪಗಳು ಇರಲಿಲ್ಲ, ಅಲ್ಲಿ ಅಂತಹ ವೈವಿಧ್ಯಮಯ ಜನರು ಒಗ್ಗೂಡಿ ರಾಷ್ಟ್ರವನ್ನು ಪಡೆಯಲು ಸಮರ್ಥರಾಗಿರಲಿಲ್ಲ. ಹೆಡ್ಗೆವಾರ್ ಅವರ, ರಾಷ್ಟ್ರದ ಕಲ್ಪನೆಯು ಸಂಪೂರ್ಣವಾಗಿ ವಿರುದ್ಧವಾಗಿತ್ತು. ಮುಸೂಲಿನಿಯ ಫ್ಯಾಸಿಸ್ಟ್ ಮಿಲಿಟರಿ ಅಕಾಡೆಮಿಗಳ ಅಭಿಮಾನಿಯಾಗಿದ್ದ ಮೂನ್ಜೆ ಅವರಿಂದ ಆಳವಾಗಿ ಪ್ರೇರಿತರಾದ ಹೆಡ್ಗೆವಾರ್ ಅವರಿಗೆ ಸ್ವಯಂಸೇವಕರ ದೈಹಿಕ ಮತ್ತು ಮಾನಸಿಕ ತರಬೇತಿಯು ಭಾರತದ ಮಿಲಿಟರಿ ಪುನರುತ್ಪಾದನೆಗೆ ಪ್ರಮುಖವಾದುದು ಎಂದು ಮನವರಿಕೆಯಾಯಿತು. ಈ ಕಲ್ಪನೆಯಲ್ಲಿ ಸೇವೆ ಪ್ರಮುಖ ಪಾತ್ರ ವಹಿಸಿದೆ.
ಇಲ್ಲಿರುವ ಸಮಸ್ಯೆ ಎಂದರೆ ಡಾ. ಹೆಡ್ಗೆವಾರ್ ಅವರು ‘ಹಿಂದೂ ರಾಷ್ಟ್ರವನ್ನು ನಿರ್ಮಿಸುವ’ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ. ಅವರು ಭಾರತವನ್ನು ಹಿಂದೂ ರಾಷ್ಟ್ರವೆಂದು ಪರಿಗಣಿಸಿದರು. ವಾಸ್ತವವಾಗಿ, ಅವರಿಗೆ, ರಾಷ್ಟ್ರವೇ ಹಿಂದೂಗಳನ್ನು ಒಳಗೊಂಡಿದೆ. ಗುಹಾ ಹೇಳುವುದಕ್ಕೆ ವಿರುದ್ಧವಾಗಿ, ಗಾಂಧಿ ಮತ್ತು ಡಾ.ಅಂಬೇಡ್ಕರ್ ಇಬ್ಬರಿಗೂ, ಭಾರತವು ಅತ್ಯಂತ ಸ್ವಾಭಾವಿಕವಾದ ಒಂದು ರಾಷ್ಟ್ರವಾಗಿತ್ತು – ಅವರ ಆಳವಾದ ಸಾಂಸ್ಕೃತಿಕ ಏಕತೆಯ ಮೇಲೆ ಊಹಿಸಲಾಗಿದೆ ಮತ್ತು ಹೆಡ್ಗೆವಾರ್ ಮೂನ್ಜೆ ಫ್ಯಾಸಿಸ್ಟ್ ಸಿದ್ಧಾಂತದಿಂದ ಪ್ರಭಾವಿತರಾಗಿದ್ದಾರೆ ಎಂಬುದು ಪ್ರಾಯೋಗಿಕವಾಗಿ ಸುಳ್ಳು.
ದುರದೃಷ್ಟವಶಾತ್, ಲೇಖಕಿ ತನ್ನ ಅಧ್ಯಯನದಲ್ಲಿ ಈ ತಪ್ಪನ್ನು ಮಾಡಿದ್ದಾರೆ. ವಾಸ್ತವದಲ್ಲಿ, ಗಾಂಧಿ, ಸಾವರ್ಕರ್ ಮತ್ತು ಡಾ.ಹೆಡ್ಗೆವಾರ್, ಡಾ.ಅಂಬೇಡ್ಕರ್ ಮತ್ತು ನೆಹರೂ ಅವರಿಗೆ ಒಮ್ಮತವಾದ ವಿಷಯವೊಂದಿದ್ದರೆ ಅದು ಆಳವಾದ ಸಾಂಸ್ಕೃತಿಕ ಏಕತೆಯ ಮೂಲಕ ಭಾರತೀಯ ರಾಷ್ಟ್ರದ ಏಕತೆ. ಬಹಳ ಗಂಭೀರವಾದ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಗಾಂಧಿ ಮತ್ತು ಸಾವರ್ಕರ್ ಮಿಷನರಿ ಮತಾಂತರದ ವಿರುದ್ಧ ಹೋರಾಡಿದರು ಮತ್ತು ಬುಡಕಟ್ಟು ಸಮುದಾಯಗಳು ಹಿಂದೂ ಎಂದು ಇಬ್ಬರೂ ಒಪ್ಪಿದ್ದರು. ಇದಲ್ಲದೆ, ಸ್ವಾಮಿ ವಿವೇಕಾನಂದರು ಮತ್ತು ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ್ದ ಮಾನವೀಯ ಆರಾಧನೆಯನ್ನು ಹೆಡ್ಗೆವಾರ್ ಕೂಡ ಪ್ರತಿಪಾದಿಸಿದ್ದರು.
‘ಸಮಾಜದ ಬಡ ಮತ್ತು ದೀನದಲಿತ ವರ್ಗದವರಿಗೆ ಸೇವೆ ಸಲ್ಲಿಸಲು ಮೀಸಲಾಗಿರುವ ರಾಷ್ಟ್ರೀಯತಾವಾದಿ ಸನ್ಯಾಸಿಗಳ ತರಬೇತಿ ಪಡೆದ ಕೇಡರ್ ಅನ್ನು ರಚಿಸುವ ವಿವೇಕಾನಂದರ ಆಲೋಚನೆಯಿಂದ ಹೆಡ್ಗೆವಾರ್ ಆಕರ್ಷಿತರಾದರು. ಇದು ಅವರನ್ನು ಶಾಖೆಯ ಸ್ಥಾಪನೆ ಮಾಡಲು ಪ್ರೇರೇಪಿಸಿತು ಎಂದು ನಮ್ಮ ಲೇಖಕಿ ಒಪ್ಪಿಕೊಂಡಿರುವುದು ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಅದು ಇನ್ನಷ್ಟು ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ? ಡಾ. ಹೆಡ್ಗೆವಾರ್ ಅವರ ಸೇವೆಯ ವಿಧಾನವು ‘ಫ್ಯಾಸಿಸ್ಟ್’ ಅಂಶಗಳ ಮೇಲೆ ಅಥವಾ ಸ್ವಾಮಿ ವಿವೇಕಾನಂದರ ಅದ್ವೈತಿ ಮಾನವತಾವಾದದ ಮೇಲೆ ಊಹಿಸಲಾಗಿದೆಯೇ? ಮತ್ತು ಎರಡೂ ಪರಸ್ಪರ ಪ್ರತ್ಯೇಕವಾಗಿವೆಯೇ. ಮತ್ತೊಮ್ಮೆ, ಲೇಖಕಿ ಪ್ರಾಮಾಣಿಕಳು ಎಂದು ಒತ್ತಿಹೇಳುವುದು ಇಲ್ಲಿ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಸಂಘವನ್ನು ಅಧ್ಯಯನ ಮಾಡುವ ಹೆಚ್ಚಿನ ಶಿಕ್ಷಣ ತಜ್ಞರು ಮಾಡುವಂತೆ ಅವರು ಇಲ್ಲಿ ಕೇವಲ ಆಯ್ದ ಉಲ್ಲೇಖಗಳು ಮತ್ತು ಫ್ಯಾಕ್ಟಾಯ್ಡ್ಗಳನ್ನು ಪ್ರಸ್ತುತಪಡಿಸುವುದಿಲ್ಲ ಮತ್ತು ಸುಳ್ಳು ಸ್ಟೀರಿಯೊಟೈಪ್ ಅನ್ನು ನಿರ್ಮಿಸುವುದಿಲ್ಲ. ಆದರೆ ಆಕೆಗೆ ಲಭ್ಯವಿರುವ ಚೌಕಟ್ಟುಗಳು ಸೀಮಿತವಾಗಿವೆ ಮತ್ತು ಸೈದ್ಧಾಂತಿಕ ಆರಾಮ ವಲಯದಲ್ಲಿ ಉಳಿಯಲು ಅವರು ಆದ್ಯತೆ ನೀಡಿದ್ದಾರೆ ಮತ್ತು ವಿರೋಧಾಭಾಸಗಳು ಗುಣಿಸುವ ನೈಜ ಸಮಯದ ದತ್ತಾಂಶವನ್ನು ಪ್ರವೇಶಿಸುವ ಧೈರ್ಯವನ್ನೂ ಮಾಡಿದ್ದಾರೆ. ಒರಿಸ್ಸಾ ಸೂಪರ್ ಸೈಕ್ಲೋನ್ (1999) ಮತ್ತು ಗುಜರಾತ್ ಭೂಕಂಪದ ಸಮಯದಲ್ಲಿ (2001) ಸಂಭವಿಸಿದ ನೈಸರ್ಗಿಕ ವಿಕೋಪಗಳ ನಂತರ ಸಂಘ ಸೇವೆಯ ಬಗ್ಗೆ ಅವರ ವಿವರವಾದ ಅಧ್ಯಯನವು ಈ ಅಂಶವನ್ನು ಒದಗಿಸುತ್ತದೆ. ಒರಿಸ್ಸಾದ ವಿಷಯದಲ್ಲಿ, ಸಂಘ ಸೇವೆಯು ಹಿಂದೂಯೇತರ ಸಮುದಾಯಗಳನ್ನು ತಾರತಮ್ಯಗೊಳಿಸಿದೆಯೇ ಅಥವಾ ನಿರ್ಲಕ್ಷಿಸಿದೆಯೇ ಎಂಬ ಬಗ್ಗೆ ಅವರು ತನಿಖೆ ನಡೆಸಿದ್ದಾರೆ. ‘ಚಂಡಮಾರುತದಿಂದ ಸಂಪೂರ್ಣವಾಗಿ ನಾಶವಾದ ಎರಾಸಾಮಾ ಬ್ಲಾಕ್ನಲ್ಲಿರುವ ಮುಸ್ಲಿಂ ಪ್ರಾಬಲ್ಯವಿರುವ ಚೌಲಿಯಾ ಎಂಬ ಹಳ್ಳಿಗೆ ಅವರು ಕೈಗೊಂಡ ಕ್ಷೇತ್ರ ಭೇಟಿ ಇದನ್ನು ಸೂಚಿಸುತ್ತದೆ’.
ಅಲ್ಲಿನ ಸಮುದಾಯದ ಸದಸ್ಯರು ಸಮುದಾಯ ಅಡಿಗೆಮನೆ ಸ್ಥಾಪಿಸಿದ ಮೊದಲ ಏಜೆನ್ಸಿಗಳಲ್ಲಿ ಯುಬಿಎಸ್ಎಸ್ (ಸಂಘ ಪರಿವಾರ್ ಸಂಸ್ಥೆ) ಒಂದು ಎಂದು ಹೆಸರಿಸಿದ್ದಾರೆ ಮತ್ತು ಸಂಘವು ಪ್ರದೇಶವನ್ನು ಪುನರುಜ್ಜೀವನ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡರು ಮತ್ತು ಗ್ರಾಮಸ್ಥರಿಗೆ ಜೀವನೋಪಾಯದ ಸಾಧನಗಳನ್ನು ಒದಗಿಸುವಂತಹ ಪುನರ್ವಸತಿ ಯೋಜನೆಗಳನ್ನು ಕೈಗೊಂಡರು ಎಂದು ಲೇಖಕಿ ಉಲ್ಲೇಖಿಸಿದ್ದಾರೆ. (ಪು .124 )
ಪುಸ್ತಕದಲ್ಲಿ ಸಂಘವು ನಡೆಸುವ ಸರಸ್ವತಿ ಶಿಶು ವಿದ್ಯಾ ಮಂದಿರಗಳಿಗೆ ಸಂಬಂಧಿಸಿದಂತೆ ನಕಾರಾತ್ಮವಾಗಿ ತನ್ನ ‘ಏಷ್ಯನ್ ಯುಗ್ 2003’ರಲ್ಲಿ ನಮೂದಿಸಿದ ಭಾರತದ ಬಗೆಗೆ ಫೋಬಿಯಾವನ್ನು ಹೊಂದಿರುವ ಅಂಗನಾ ಚಟರ್ಜಿ ಅವರ ಲೇಖನವನ್ನು ಉಲ್ಲೇಖ ಮಾಡಲಾಗಿದೆ. ‘ಯುವ ಮತ್ತು ಪ್ರಭಾವಶಾಲಿ ಮನಸ್ಸುಗಳನ್ನು ಹಿಂದುತ್ವದ ಸಿದ್ಧಾಂತಕ್ಕೆ ಸಜ್ಜುಗೊಳಿಸಲು ಒಂದು ಅನುಕೂಲಕರ ಸ್ಥಳವನ್ನು ಒದಗಿಸುವ ಸಲುವಾಗಿ ಸಂಘವು ಕಡಿಮೆ ವ್ಯಯ ಮತ್ತು ಮಕ್ಕಳಿಗೆ ಸಾಂಸ್ಕೃತಿಕ ಮೌಲ್ಯಗಳನ್ನು ನೀಡುವ ಕಾರ್ಯವನ್ನು ಮಾಡುತ್ತದೆ ಎಂದು ಚ್ಯಾಟರ್ಜಿ ವಾದಿಸಿದ್ದಾರೆ.
ಆದ್ದರಿಂದ ಲೇಖಕಿಯೂ ಸ್ವತಃ ‘ಸೂಪರ್ ಸೈಕ್ಲೋನ್ ನಂತರ ಶೈಕ್ಷಣಿಕ ಉಪಕರಣವನ್ನು ವಿಸ್ತರಿಸುವುದು, ಭವಿಷ್ಯದ ಲಾಭವನ್ನು ಗಮನದಲ್ಲಿಟ್ಟುಕೊಂಡು ಆರ್ಎಸ್ಎಸ್ನ ಒಂದು ರಾಜಕೀಯ ಮಾಸ್ಟರ್ಸ್ಟ್ರೋಕ್’ ಎಂದು ತೀರ್ಮಾನಕ್ಕೆ ಬಂದು ಬಿಟ್ಟಿದ್ದಾರೆ. (ಪುಟಗಳು 133-34). ಶಾಲಾ ಶಿಕ್ಷಕರೊಂದಿಗಿನ ಸಂದರ್ಶನಗಳು ಚಟರ್ಜಿ ಮಾಡಿದ ಆರೋಪಗಳನ್ನು ಬಲಪಡಿಸುವ ‘ಸಂಸ್ಕಾರಗಳ’ ಸುತ್ತಲೂ ಕೇಂದ್ರವನ್ನು ಪ್ರಸ್ತುತಪಡಿಸಿವೆ. ಅಂಗನಾ ಚಟರ್ಜಿ ಹೆಚ್ಚು ಪೂರ್ವಾಗ್ರಹ ಪೀಡಿತ ಹಿಂದೂ-ದ್ವೇಷವುಳ್ಳವರು, ಅವರು IDRF ಮೂಲಕ ಅನಿವಾಸಿಗಳಿಂದ ಸಂಘ ಸೇವಾ ಚಟುವಟಿಕೆಗಳಿಗೆ ಧನಸಹಾಯವನ್ನು ನಿಲ್ಲಿಸುವ ಪ್ರಯತ್ನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂಬ ಅಂಶವನ್ನು ಬಿಟ್ಟು ಬಿಡೋಣ.
ಇಲ್ಲಿ ಮುಖ್ಯವಾದುದು, ಸರ್ಕಾರಿ ಶಾಲಾ ಶಿಕ್ಷಕರಿಗಿಂತ ಕಡಿಮೆ ಸಂಬಳ ಪಡೆದು ಕೆಲಸ ಮಾಡುವ ಶಿಕ್ಷಕರ ಸಮರ್ಪಣೆಯಿಂದ ಈ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ಅತ್ಯಂತ ಒಳ್ಳೆ ರೀತಿಯಲ್ಲಿ ಮಕ್ಕಳಿಗೆ ತಲುಪಿಸುತ್ತಿವೆ ‘ಒರಿಸ್ಸಾದಲ್ಲಿ ಸಂಘ ಶಾಲೆಗಳು ಹೆಚ್ಚು ಅಂಕ ಗಳಿಸಿವೆ’ ಎಂಬ ಶೀರ್ಷಿಕೆಯಡಿಯಲ್ಲಿ, ಇಂಡಿಯನ್ ಎಕ್ಸ್ ಪ್ರೆಸ್ ವರದಿ (01-ಜುಲೈ -2009) ಮಾಡಿತ್ತು, ಇದರಲ್ಲಿ ಸರಸ್ವತಿ ಶಿಶು ವಿದ್ಯಾ ಮಂದಿರಗಳು (ಎಸ್ವಿಎಂ) ಪ್ರೌಢ ಶಾಲಾ ಪರೀಕ್ಷೆಗಳಲ್ಲಿ ರಾಜ್ಯದ ಅಗ್ರ ಅಂಕ ಪಡೆದ 102 ವಿದ್ಯಾರ್ಥಿಗಳ ಪೈಕಿ 44 ವಿದ್ಯಾರ್ಥಿಗಳನ್ನು ಹೊರಹೊಮ್ಮಿಸಿದೆ ಎಂದು ತಿಳಿಸಿದೆ. ಅಗ್ರ 10 ರ್ಯಾಂಕ್ಗಳಲ್ಲಿ 7 ರ್ಯಾಂಕ್ ಪಡೆದವರು ಎಸ್ವಿಎಂ ಮಕ್ಕಳು. ವರದಿಯಲ್ಲಿ ‘ರಾಜ್ಯಾದ್ಯಂತದ 739 ಎಸ್ವಿಎಂಗಳಲ್ಲಿನ 11,000 ಕ್ಕೂ ಹೆಚ್ಚು ಆಚಾರ್ಯರು ಮತ್ತು ಗುರುಮಾಗಳ (ಶಿಕ್ಷಕರು) ಬಗ್ಗೆ ಉಲ್ಲೇಖಿಸಲಾಗಿದೆ, ಇವರುಗಳು ಶಿಶುಶಿಕ್ಷಣದಿಂದ ಹಿಡಿದು ಹನ್ನೆರಡನೇ ತರಗತಿಯವರೆಗಿನ 1.8 ಲಕ್ಷ ವಿದ್ಯಾರ್ಥಿಗಳಿಗೆ ಕಲಿಸಲು ಇಡೀ ಜೀವನವನ್ನೇ ಸವೆಸುತ್ತಾರೆ ಎಂದು ತಿಳಿಸಲಾಗಿದೆ.
ಟೈಮ್ಸ್ ಆಫ್ ಇಂಡಿಯಾ 2010ರ ಜೂನ್ 20ರಂದು ‘ಸರಸ್ವತಿ ವಿದ್ಯಾ ಮಂದಿರ ಶಾಲೆಗಳು ಟಾಪರ್ಸ್ ಪಟ್ಟಿಯನ್ನು ಕ್ಲೀನ್ ಸ್ವೀಪ್ ಮಾಡಿದೆ’ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಗೊಳಿಸಿತ್ತು. ಎಸ್ವಿಎಂ ವಿದ್ಯಾರ್ಥಿಗಳು ಅಗ್ರ ಐದು ಸ್ಥಾನಗಳನ್ನು ಒಳಗೊಂಡಂತೆ ಟಾಪ್ 10 ಪಟ್ಟಿಯಲ್ಲಿ ಗರಿಷ್ಠ ಶ್ರೇಯಾಂಕಗಳನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಉಲ್ಲೇಖಿಸಿದೆ. ಅತ್ಯುತ್ತಮ 100 ಪಟ್ಟಿಯಲ್ಲಿ ಎಸ್ವಿಎಂನ 55 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಸರ್ಕಾರಿ ಶಾಲೆಗಳ 71.41 ಕ್ಕೆ ಹೋಲಿಸಿದರೆ 98.58 ರಷ್ಟು ಈ ಶಾಲೆಯ ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ವರದಿ ಹೇಳಿತ್ತು. ಬಿಜೆಪಿ ಅಲ್ಲದ ರಾಜಕಾರಣಿಯಾಗಿರುವ ಈ ರಾಜ್ಯದ ಶಿಕ್ಷಣ ಸಚಿವರು ಕೂಡ ಎಸ್ವಿಎಂ ಶಾಲೆಗಳ ಉತ್ತಮ ಕಾರ್ಯಕ್ಷಮತೆಯನ್ನು ಒಪ್ಪಿಕೊಂಡಿದ್ದಾರೆ. 2010 ರ ವರದಿಯ ಪ್ರಕಾರ, 793 ಎಸ್ವಿಎಂ ಶಾಲೆಗಳಲ್ಲಿ 12,000 ಶಿಕ್ಷಕರು ಕಲಿಸುತ್ತಿದ್ದಾರೆ. 2018ರಲ್ಲಿ, ಒರಿಸ್ಸಾ ರಾಜ್ಯದ ಜಾರ್ಸುಗುಡ ಜಿಲ್ಲೆಯ ಅಗ್ರ 12 ರ್ಯಾಂಕ್ ಪಡೆದವರಲ್ಲಿ, ನಾಲ್ವರು ಎಸ್ವಿಎಂ ಶಾಲೆಗಳಿಗೆ ಸೇರಿದವರು.
ಅಂದರೆ ಇಲ್ಲಿ ನಾವು ಜಾತ್ಯತೀತ ಶಿಕ್ಷಣ ತಜ್ಞರಿಗಿಂತ ಕಡಿಮೆ ಸಂಬಳದಲ್ಲಿ ಕೆಲಸ ಮಾಡುವ ಸಮರ್ಪಿತ ಶಿಕ್ಷಕರನ್ನು ಮತ್ತು ರಾಜ್ಯ ಶಿಕ್ಷಣ ಮಂಡಳಿಯ ‘ಜಾತ್ಯತೀತ’ ಪಠ್ಯಕ್ರಮದ ಮೂಲಕವೇ ಅತ್ಯಂತ ಒಳ್ಳೆಯ ಮತ್ತು ಉತ್ತಮ ಶೈಕ್ಷಣಿಕ ಸೇವೆಗಳನ್ನು ಒದಗಿಸುವ ಶಾಲಾ ವ್ಯವಸ್ಥೆಯನ್ನು ಹೊಂದಿದ್ದೇವೆ. ಆದರೆ ಪ್ರತಿಯೊಬ್ಬರೂ ಅದನ್ನು ನೋಡುವುದು ‘ಭವಿಷ್ಯದ ಲಾಭ’ ಮತ್ತು ‘ರಾಜಕೀಯ ಮಾಸ್ಟರ್ಸ್ಟ್ರೋಕ್’? ವಿಚಿತ್ರವಲ್ಲವೇ?
ಇನ್ನು ಗುಜರಾತ್ ಭೂಕಂಪ ಪರಿಹಾರದ ಸಂದರ್ಭದಲ್ಲಿ, ಸಂಘವು ತ್ವರಿತ ಮತ್ತು ಅನುಕರಣೀಯ ಪರಿಹಾರ ಸೇವೆಗಳನ್ನು ಒದಗಿಸಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ ಇಲ್ಲಿ ಅವರು ಸಂಘದ ವಿರುದ್ಧ ಪಂಥೀಯ ತಾರತಮ್ಯದ ಆರೋಪಗಳನ್ನು ಪರಿಶೀಲನೆ ಮಾಡದೆ ಅನುಮತಿಸುತ್ತಾರೆ. ಈ ಆರೋಪಗಳ ಮೂಲಗಳು ಸಂಘದ ವಿರೋಧಿಗಳಿಂದ ಬಂದಿದ್ದಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕುಲದೀಪ್ ನಾಯರ್ ಲೇಖನ ಮತ್ತು ಇಸ್ಲಾಮಿಸ್ಟ್, ಸಂಘ ವಿರೋಧಿ ನಿಯತಕಾಲಿಕೆ ಮಿಲ್ಲಿ ಗೆಜೆಟ್ನ ಮತ್ತೊಂದು ವರದಿಯನ್ನು ಆಧರಿಸಿದೆ. ಇದು ಪೂರ್ವಾಗ್ರಹ ಪೀಡಿತವಾಗಿದೆ. ಆದರೆ, ಹೆಚ್ಚಾಗಿ ತಟಸ್ಥ ಮೂಲಗಳಿಂದ ಬಂದ ನಿಜವಾದ ವರದಿಗಳೊಂದಿಗೆ ತುಲನೆ ಮಾಡಿ ನೋಡಿದರೆ ಈ ಆರೋಪಗಳು ಉತ್ತಮವಾಗಿ ಲೆಕ್ಕಚಾರವನ್ನು ಹಾಕಿಕೊಟ್ಟಂತೆ ತೋರುತ್ತವೆ.
ಉದಾಹರಣೆಗೆ ಆರ್ಎಸ್ಎಸ್ನ ಪರಿಹಾರ ಕಾರ್ಯದ ಬಗ್ಗೆ ಇಂಡಿಯಾ ಟುಡೆ ವರದಿಯು ಹೀಗೆ ಹೇಳಿದೆ :
ಜನವರಿ 29 ರಂದು, ಕಚ್ನ ಮುಸ್ಲಿಂ ಪ್ರಾಬಲ್ಯದ ಹಳ್ಳಿಯಾದ ನಾನಿರೆಲ್ಡಿ ನಿವಾಸಿಗಳು ಭೂಕಂಪದ ದಿನದಿಂದ ಹಸಿವಿನಿಂದ ಬಳಲುತ್ತಿದ್ದರು. ಆದರೆ ಆರ್ಎಸ್ಎಸ್ ಮತ್ತು ವಿಎಚ್ಪಿ ಕಾರ್ಯಕರ್ತರ ಒಂದು ಗುಂಪು ಆಹಾರ ಧಾನ್ಯ, ಬಟ್ಟೆ ಮತ್ತು ಔಷಧಿಗಳೊಂದಿಗೆ ತಮ್ಮ ಬಳಿ ಬಂದಿದ್ದನ್ನು ನೋಡಿ ಅವರು ಆಶ್ಚರ್ಯಚಕಿತರಾದರು. ‘ಆರ್ಎಸ್ಎಸ್ ಮತ್ತು ವಿಎಚ್ಪಿ ಕಾರ್ಯಕರ್ತರು ನಮ್ಮ ರಕ್ಷಣೆಗೆ ಬರುತ್ತಾರೆ ಎಂದು ನನಗೆ ಊಹಿಸಲೂ ಸಾಧ್ಯವಾಗಲಿಲ್ಲ” ಎಂದು ಅಭಾ ಇಬ್ರಾಹಿಂ ಭಾಯ್ ಹೇಳಿದ್ದಾರೆ.
ಸಂಘ ವಿರುದ್ಧದ ಪೂರ್ವಾಗ್ರಹಗಳನ್ನು ಬಲಪಡಿಸುವ ಡೇಟಾ-ಪಾಯಿಂಟ್ಗಳನ್ನು ಹುಡುಕುವ ಮೂಲಕ ಈ ಪುಸ್ತಕವು ಸಂಘ ವಿಪತ್ತು ಪರಿಹಾರದ ಬಗ್ಗೆ ಸೂಕ್ಷ್ಮವಾಗಿ ಉಲ್ಲೇಖಿಸುತ್ತದೆ. ಸೇವಾ ಭಾರತಿಯವರ ಕೆಲಸವು ಹೆಚ್ಚಾಗಿ ‘ಅಸ್ಪೃಶ್ಯತೆಯ ನಿರ್ಮೂಲನೆ, ಸೇವೆಯ ಮನೋಭಾವ ಮತ್ತು ಏಕತೆಯ ಮನೋಭಾವದಿಂದ ಜನರನ್ನು ಪ್ರಚೋದಿಸುವುದು ಮತ್ತು ಆರ್ಥಿಕವಾಗಿ ಅಗತ್ಯವಿರುವ ಮತ್ತು ಸಾಮಾಜಿಕವಾಗಿ ಹಿಂದುಳಿದ ಕ್ಷೇತ್ರಗಳಿಗೆ ಸೇವೆ ಸಲ್ಲಿಸುವುದು.’ (ಪುಟ 94), ಪುಟಗಳ ನಂತರ ‘ಧಾರ್ಮಿಕ ಮತ್ತು ಜಾತಿ ಆಧಾರಿತ ಶ್ರೇಣಿಗಳನ್ನು ಶಾಶ್ವತಗೊಳಿಸುವುದು’, ‘ಹಿಂದೂ ರಾಷ್ಟ್ರೀಯತೆಯ ಸಾಂಪ್ರದಾಯಿಕ ದೃಷ್ಟಿಕೋನ’ದ ಭಾಗವಾಗುತ್ತದೆ ಮತ್ತು ಸಂಘ ಸೇವಾ ಕಾರ್ಮಿಕರು ಒಬಿಸಿ ಅಹಿರ್ ಮತ್ತು ದಲಿತ ಸಮುದಾಯ ಜಗಳಗಳ ನಡುವೆ ತಮ್ಮನ್ನು ದೂರವಿರಿಸುವುದು ಆಯ್ದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವ ತಂತ್ರ ಆಗುತ್ತದೆ ಮತ್ತು ಅದು ‘ಹಿಂದುತ್ವದ ಅದರ ಸಂಪ್ರದಾಯವಾದಿ ಸಿದ್ಧಾಂತ’ದ ಭಾಗ (ಪುಟ 165) ಎಂದು ಉಲ್ಲೇಖಿಸಲಾಗಿದೆ.
ಸಾಮಾನ್ಯವಾಗಿ, ಸಂಘವು ತನ್ನದೇ ಆದ ಸಂಘಟನೆಯನ್ನು ಹೊಂದಿದ್ದು ಅದು ಸಾಮಾಜಿಕ ಸಂಘರ್ಷಗಳ ವಿಷಯಗಳ ವಿರುದ್ಧ ಕಾರ್ಯನಿರ್ವಹಿಸುತ್ತದೆ. ವಿಪತ್ತು ಪರಿಹಾರ ಕಾರ್ಯದ ಸಮಯದಲ್ಲಿ, ಸಂಘವು ಸಾಮಾನ್ಯವಾಗಿ ಅಂತಹ ಅಂತರ್-ಸಮುದಾಯ ಸಂಘರ್ಷಗಳಿಂದ ದೂರವಿರುತ್ತದೆ. ಅದೇ ಸಮಯದಲ್ಲಿ, ಲೇಖಕಿಯು ಅಹಿರ್ಸ್ (ಪ್ರಬಲ ಒಬಿಸಿ ಆದರೆ ಗ್ರಾಮೀಣ ಸಮುದಾಯ) ಜನರು ಭೂಮಿಯನ್ನು ಹೊಂದಿದ್ದ ಗ್ರಾಮದಲ್ಲಿ ಅವರಿಗೆ ದೊಡ್ಡ ಮನೆಗಳನ್ನು ಹಂಚಲಾಗಿತ್ತು. ಆದರೆ (ಕೇಶವ್ ನಗರದಂತೆ) ಸೇವಾ ಭಾರತಿಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು, ಅವರು ಏಕರೂಪದ ಮನೆಗಳನ್ನು ಎಲ್ಲರಿಗೂ ನಿರ್ಮಿಸಿದರು ಎಂದು ಲೇಖಕಿ ಸ್ವತಃ ಒಪ್ಪಿಕೊಂಡಿದ್ದಾರೆ. (ಪು .160).
ಆದರೂ ಪೂರ್ವಾಗ್ರಹಗಳು ಇಲ್ಲಿ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುತ್ತವೆ. ಇದಕ್ಕೆ ಸಂಬಂಧಿಸಿದಂತೆ, ಅವರು ಸಮಾಜಿಕ್ ಸಮರಸತಾ ಮಂಚ್ (ಎಸ್ಎಸ್ಎಂ) ಅವರೊಂದಿಗೆ ಮಾತನಾಡಲಿಲ್ಲ ಮತ್ತು ಸಂಘ ಸೇವೆಯು ‘ಸಂಪ್ರದಾಯವಾದಿ ಹಿಂದುತ್ವ’ವನ್ನು ಗುರಿಯಾಗಿರಿಸಿಕೊಂಡಿದೆ ಎಂದು ತೀರ್ಮಾನಿಸಿ ಬಿಟ್ಟಿದ್ದಾರೆ. ಪ್ರಮುಖ ಹಿಂದೂ ದೇವಾಲಯಗಳಲ್ಲಿ ದಲಿತ ಅರ್ಚಕರ ನೇಮಕ, ಅಂತರ್ಜಾತಿ ವಿವಾಹಗಳನ್ನು ಸಂಘವು ಬೆಂಬಲಿಸಿದೆ. ಸಂಪ್ರದಾಯವಾದಿ ಹರಿಯಾಣದಲ್ಲೂ ಸಹ ಸಂಘದ ನಾಯಕತ್ವವು ಎಸ್ಸಿ ಪುರೋಹಿತರನ್ನು ಬೆಂಬಲಿಸಿದೆ ಮಾತ್ರವಲ್ಲ, ಬಿಜೆಪಿ ಸರ್ಕಾರವು ಅಂತರ್ಜಾತಿ ವಿವಾಹ ದಂಪತಿಗಳಿಗೆ ಆರ್ಥಿಕ ಸಹಾಯವನ್ನು ಹೆಚ್ಚಿಸುತ್ತಿದೆ.
ರಾಜಕೀಯ ಆಯಾಮಗಳ ಹೊರತಾಗಿಯೂ, ಸೇವೆಗೆ ಅದರ ರಾಜಕೀಯ ಶಾಖೆಗಳನ್ನು ಮೀರಿದ ಒಂದು ನಿರ್ದಿಷ್ಟ ವಸ್ತು ಇದೆ. ಇಲ್ಲಿ ಅಂಗೀಕರಿಸಬೇಕಾದ ಅತ್ಯಂತ ಗಮನಾರ್ಹ ಸಂಗತಿಯೆಂದರೆ, ಆರ್ಎಸ್ಎಸ್ನ ಸೇವಾ ಪರಿಕಲ್ಪನೆಯು ಸಹಜವಾದ ಭಾಷಾವೈಶಿಷ್ಟ್ಯ, ಸಾಮಾನ್ಯ ಭಾಷೆ, ಸಾಮಾನ್ಯ ಸಂವಹನ ರಚನೆ, ಜನರು (ಸೇವಾಕಾರರು ಮತ್ತು ಸೇವಾ ಸ್ವೀಕರಿಸುವವರು ಸೇರಿದಂತೆ) ತಕ್ಷಣ ಸಂಪರ್ಕಿಸುವ ಸಾಮಾನ್ಯ ವಿಶ್ವ ದೃಷ್ಟಿಕೋನವನ್ನು ಪುನರುಜ್ಜೀವನಗೊಳಿಸುತ್ತದೆ. ಅದು ಅವರದೇ ಆಗಿರುತ್ತದೆ. (ಪು .107)
ಬಹುಶಃ, ಇದು ತೀರ್ಮಾನವಾಗಿರಬೇಕು ಅಥವಾ ಇದು ನಿಜವಾದ ತೀರ್ಮಾನ ಎಂದು ಒಬ್ಬರು ಹೇಳಬಹುದು. ಮೂಲತಃ ಭಾರತೀಯ ಒಳನೋಟಗಳು ತನ್ನದೇ ಆದ ನೆಲದ ಕಾರ್ಯದಿಂದ ಬಂದವು.
ಸ್ವಾತಂತ್ರ್ಯದ 7 ದಶಕಗಳ ನಂತರ, ನಮ್ಮದೇ ಆದ ರಾಷ್ಟ್ರೀಯ ಸ್ವಭಾವದಲ್ಲಿ ಬೇರೂರಿರುವ ಒಂದು ವಿದ್ಯಮಾನವನ್ನು ಅಧ್ಯಯನ ಮಾಡಲು ನಾವು ನಮ್ಮದೇ ಆದ ಸಾಧನಗಳು ಮತ್ತು ಚೌಕಟ್ಟನ್ನು ಅಭಿವೃದ್ಧಿಪಡಿಸಿಲ್ಲ ಎಂದು ಪುಸ್ತಕ ತೋರಿಸುತ್ತದೆ. ಶಿಕ್ಷಣ ತಜ್ಞರು ಈ ಕೊರತೆಯನ್ನು ಅರಿತುಕೊಂಡು ರಾಮಕೃಷ್ಣ-ವಿವೇಕಾನಂದ, ಶ್ರೀ ಅರಬಿಂದೋ, ಗಾಂಧಿ ಮತ್ತು ಧರಂಪಾಲ್ ಅವರನ್ನು ಭಾರತೀಯ ಅಧ್ಯಯನಕ್ಕಾಗಿ ತಮ್ಮ ಸಾಧನಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದ್ದಾರೆ, ಈ ಪುಸ್ತಕವು ಸತ್ಯ ಮತ್ತು ನಿಜವಾದ ತಿಳುವಳಿಕೆಯ ಹುಡುಕಾಟದಲ್ಲಿ ನಿಜವಾಗಿಯೂ ಒಂದು ಉದ್ದೇಶವನ್ನು ಪೂರೈಸುತ್ತದೆ.
ಇಲ್ಲದಿದ್ದರೆ, ಸಂಘ ಸೇವಾವನ್ನು ಕೇವಲ ‘ಕಾರ್ಯತಂತ್ರ’ ಮತ್ತು ಕಾರ್ಯಸೂಚಿಯಿಂದ ತುಂಬಿರುವಂತೆ ವಿವರಿಸುವ ಶಿಕ್ಷಣ ತಜ್ಞರ ಪೂರ್ವಾಗ್ರಹ, ಆಧಾರರಹಿತ ಫ್ಯಾಂಟಸಿಯನ್ನೊಳಗೊಂಡ ವೃತ್ತದ ಮಾರ್ಗಗಳನ್ನು ಕಲ್ಪಿಸುವ ಮತ್ತೊಂದು ಶೈಕ್ಷಣಿಕ ಪುಸ್ತಕವಾಗಿ ಇದು ಪರಿಣಮಿಸುತ್ತದೆ.
ಮಾಲಿನಿ ಭಟ್ಟಾಚಾರ್ಜಿ ಬರೆದ ‘Disaster Relief and the RSS’ ಪುಸ್ತಕವು ಆರ್ ಎಸ್ ಎಸ್ ಬಗೆಗಿನ ಇತರೆಲ್ಲಾ ಪುಸ್ತಕಗಳಿಗಿಂತ ಭಿನ್ನವಾಗಿದೆ. ಈ ಪುಸ್ತಕದ ಬಗ್ಗೆ ಅರವಿಂದೋ ನೀಲಕನಂದನ್ ಅತ್ಯುತ್ತಮ ಮತ್ತು ಸವಿವರ ರೀತಿಯಲ್ಲಿ ವಿಮರ್ಶೆಯನ್ನು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.