ನವದೆಹಲಿ: ಈ ವರ್ಷದ ಮಾರ್ಚ್ 31 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಖಾದಿ ಗ್ರಾಮ ಕೈಗಾರಿಕಾ ಆಯೋಗ (ಕೆವಿಐಸಿ) ಮಾರಾಟದಲ್ಲಿ ಶೇ 25 ರಷ್ಟು ಏರಿಕೆಯನ್ನು ದಾಖಲಿಸಿಕೊಂಡಿದೆ, ಕಳೆದ ಹಣಕಾಸು ವರ್ಷದಲ್ಲಿ 75,000 ಕೋಟಿ ರೂ.ಗಳ ಮಾರಾಟವಾಗಿದೆ ಎಂದು ಕೆವಿಐಸಿ ಹೇಳಿದೆ.
‘ಮೇಡ್ ಇನ್ ಇಂಡಿಯಾ’ ಗ್ರಾಹಕ ಉತ್ಪನ್ನಗಳನ್ನು ಉತ್ತೇಜಿಸುವ ಕೆವಿಐಸಿಯು ಭಾರತದ ಸರ್ಕಾರದ ರಿಟೇಲ್ ಡಿವಿಶನ್ ಆಗಿದೆ. ಕೆವಿಐಸಿಯ ಮಾರಾಟ ಅಂಕಿಅಂಶಗಳು ಭಾರತದ ಅತಿದೊಡ್ಡ ಗ್ರಾಹಕ ಸರಕುಗಳ ಕಂಪನಿ ಹಿಂದೂಸ್ತಾನ್ ಯೂನಿಲಿವರ್ಗಿಂತ ಎರಡು ಪಟ್ಟು ಹೆಚ್ಚಾಗಿದೆ. ಹಿಂದೂಸ್ಥಾನ ಮಾರಾಟ ಕಳೆದ ಹಣಕಾಸು ವರ್ಷದಲ್ಲಿ 38,000 ರೂ. ಕೋಟಿ ಆಗಿದ್ದರೆ, ಕೆವಿಐಸಿಯದ್ದು ರೂ.75 ಸಾವಿರ ಕೋಟಿಯಾಗಿದೆ.
ವರದಿಯ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಖಾದಿ ಮತ್ತು ಕೈಯಿಂದ ತಯಾರಿಸಿದ ಉತ್ಪನ್ನಗಳಿಗೆ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯ ಹಿನ್ನಲೆಯಲ್ಲಿ ಮಾರಾಟ ಪ್ರಗತಿಯನ್ನು ಕಂಡಿದೆ. ಮನೆಯಲ್ಲಿ ತಯಾರಿಸಿದ ಉತ್ಪನ್ನಗಳಾದ ಪಾಪಾಡ್, ಜೇನುತುಪ್ಪ ಮತ್ತು ಸೌಂದರ್ಯವರ್ಧಕಗಳಿಗೂ ಹೆಚ್ಚಿನ ಬೇಡಿಕೆಯಿದೆ.
ಫ್ಯಾಬ್ರಿಕ್ ದೈತ್ಯರಾದ ರೇಮಂಡ್, ಅರವಿಂದ್ ಮಿಲ್ಸ್ ಮತ್ತು ಆದಿತ್ಯ ಬಿರ್ಲಾ ಫ್ಯಾಶನ್ ಸಹ ಕೆವಿಐಸಿಯಿಂದ ಖಾದಿಯನ್ನು ಖರೀದಿ ಮಾಡಲು ಪ್ರಾರಂಭಿಸಿದ್ದಾರೆ, ದೇಶಿ ಫ್ಯಾಬ್ರಿಕ್ ಯುವ ಪೀಳಿಗೆಯಲ್ಲಿ ಫ್ಯಾಷನ್ ಆಗಿ ಹೊರಹೊಮ್ಮುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ.
ಖಾದಿ ಉಡುಗೆಗಳನ್ನು ಉತ್ತೇಜಿಸುವವರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಮುಂಚೂಣಿಯಲ್ಲಿದ್ದಾರೆ. ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಖಾದಿ ಉದ್ಯಮವು ಸೆಪ್ಟೆಂಬರ್ 2014 ಮತ್ತು ಸೆಪ್ಟೆಂಬರ್ 2018 ರ ನಡುವೆ 1.8 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವುದರೊಂದಿಗೆ ಶೇಕಡಾ 37.1 ರಷ್ಟು ಬೆಳವಣಿಗೆಯನ್ನು ಕಂಡಿದೆ. ಕೆವಿಐಸಿ ಪ್ರಸ್ತುತ 2020 ರವರೆಗೆ 13.8 ಲಕ್ಷ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲು ಯೋಜನೆ ರೂಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.