ನವದೆಹಲಿ: ಪಾಕಿಸ್ಥಾನಕ್ಕೆ ಮತ್ತೊಂದು ಹಿನ್ನಡೆಯಾಗಿದೆ, ಅಮೆರಿಕಾ ಆ ರಾಷ್ಟ್ರಕ್ಕೆ ನೀಡುತ್ತಿರುವ ನೆರವನ್ನು ಸುಮಾರು 440 ಮಿಲಿಯನ್ ಡಾಲರ್ಗಳಷ್ಟು ಕಡಿತಗೊಳಿಸಿದೆ. ಈ ಮೂಲಕ ಆ ದೇಶಕ್ಕೆ ತನ್ನ ನೆರವನ್ನು ಕೇವಲ 4.1 ಬಿಲಿಯನ್ ಯುಎಸ್ ಡಾಲರ್ಗಳಿಗೆ ತಗ್ಗಿಸಿದೆ.
ಪಾಕಿಸ್ಥಾನ್ ಎನ್ಹ್ಯಾನ್ಸ್ಡ್ ಪಾರ್ಟ್ನರ್ಶಿಪ್ ಅಗ್ರಿಮೆಂಟ್ (ಪಿಇಪಿಎ) 2010 ರ ಅಡಿಯಲ್ಲಿ ಈ ನೆರವನ್ನು ಅಮೆರಿಕಾ ಪಾಕಿಸ್ಥಾನಕ್ಕೆ ವಿತರಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಾಷಿಂಗ್ಟನ್ಗೆ ಭೇಟಿ ನೀಡುವ ಮೂರು ವಾರಗಳ ಮೊದಲು ನೆರವು ಕಡಿತಗೊಳಿಸುವ ನಿರ್ಧಾರದ ಬಗ್ಗೆ ಅಮೆರಿಕಾ ಆ ದೇಶಕ್ಕೆ ತಿಳಿಸಿದೆ ಎನ್ನಲಾಗಿದೆ.
ಮುಖ್ಯವಾಗಿ, ಕೆರ್ರಿ ಲುಗರ್ ಬೆರ್ಮನ್ (ಕೆಎಲ್ಬಿ) ಕಾಯ್ದೆಯನ್ನು 5 ವರ್ಷಗಳ ಅವಧಿಯಗೆ ಕಾರ್ಯಾಚರಿಸುವಂತೆ ಮಾಡಲು 2010 ರ ಸೆಪ್ಟೆಂಬರ್ನಲ್ಲಿ ಸಹಿ ಹಾಕಲಾಗಿದೆ. ಈ ಕಾಯ್ದೆಗೆ ಯುಎಸ್ ಕಾಂಗ್ರೆಸ್ 2009ರ ಅಕ್ಟೋಬರ್ ತಿಂಗಳಲ್ಲಿ ಸಹಿ ಹಾಕಿತ್ತು. ಇದರನ್ವಯ ಪಾಕಿಸ್ಥಾನಕ್ಕೆ 7.5 ಬಿಲಿಯನ್ ಯುಎಸ್ ಡಾಲರ್ಗಳನ್ನು ವಿತರಿಸಲು ನಿರ್ಧರಿಸಲಾಗಿತ್ತು.
ಈ ಮೊದಲು ಕೆಎಲ್ಬಿ ಅಡಿಯಲ್ಲಿ ನೆರವು ಸುಮಾರು 4.5 ಬಿಲಿಯನ್ ಡಾಲರ್ ಆಗಿತ್ತು. ಕಡಿತದ ನಂತರ, ನೆರವು 4.1 ಬಿಲಿಯನ್ ಯುಎಸ್ಡಿಗೆ ಇಳಿಕೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ಇಸ್ಲಾಮಾಬಾದ್ ಭಯೋತ್ಪಾದನೆಯನ್ನು ನಿಭಾಯಿಸುವಲ್ಲಿ ವಿಫಲವಾದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅಮೆರಿಕಾ ಮಿಲಿಟರಿ ಪಾಕಿಸ್ಥಾನಕ್ಕೆ 300 ಮಿಲಿಯನ್ ಡಾಲರ್ ಮೌಲ್ಯದ ಆರ್ಥಿಕ ಸಹಾಯವನ್ನು ರದ್ದುಗೊಳಿಸಿತ್ತು.
ಅದೇ ವರ್ಷದ ಜನವರಿಯಲ್ಲಿ, ಪೆಂಟಗನ್ ಪಾಕಿಸ್ಥಾನಕ್ಕೆ 1 ಬಿಲಿಯನ್ ಡಾಲರ್ ಮೌಲ್ಯದ ಆರ್ಥಿಕ ಸಹಾಯವನ್ನು ಕಡಿತಗೊಳಿಸಿತ್ತು, ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಮತ್ತು ಇತರ ಅಧಿಕಾರಿಗಳು ಇಸ್ಲಾಮಾಬಾದ್ ಹಕ್ಕಾನಿ ಭಯೋತ್ಪಾದಕ ಸಂಘಟನೆಯನ್ನು ಭೇದಿಸುವಲ್ಲಿ ವಿಫಲರಾಗಿದೆ ಎಂದು ಆರೋಪಿಸಿದ್ದರು.
ಕಳೆದ ತಿಂಗಳು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ಲಾಮಾಬಾದ್ ನಡವಳಿಕೆಯನ್ನು ತೀವ್ರವಾಗಿ ಟೀಕಿಸಿದರು ಮತ್ತು 1.3 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಯುಎಸ್ ನೆರವನ್ನು ರದ್ದುಪಡಿಸಿದ್ದರು.
“ನಾವು ಹಲವಾರು ವರ್ಷಗಳಿಂದ ಪಾಕಿಸ್ಥಾನಕ್ಕೆ 1.3 ಬಿಲಿಯನ್ ಡಾಲರ್ ಗಳನ್ನು ಸಹಾಯವಾಗಿ ಪಾವತಿಸುತ್ತಿದ್ದೇವೆ. ಆದರೆ ಪ್ರತಿಯಾಗಿ ಪಾಕಿಸ್ಥಾನ ನಮಗೆ ಏನೂ ಮಾಡುತ್ತಿರಲಿಲ್ಲ. ಅವರು ನಿಜವಾಗಿಯೂ ವಿಧ್ವಂಸಕರಾಗಿದ್ದಾರೆ. ಅವರು ನಮ್ಮ ವಿರುದ್ಧ ಹೋಗುತ್ತಿದ್ದಾರೆ. ನಾನು ಒಂದೂವರೆ ವರ್ಷದಿಂದ 1.3 ಬಿಲಿಯನ್ ಯುಎಸ್ಡಿ ನೆರವನ್ನು ಅವರಿಗೆ ಕೊನೆಗೊಳಿಸಿದ್ದೇನೆ “ಎಂದು ಟ್ರಂಪ್ ಅವರು ಖಾನ್ ಅವರೊಂದಿಗಿನ ಸಭೆಯ ವೇಳೆ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.