ನವದೆಹಲಿ: ಭಾರತದೊಂದಿಗೆ ಸ್ನೇಹ, ವಿಶ್ವಾಸ ಮತ್ತು ತಿಳುವಳಿಕೆಯಿಂದ ಬಂಧಿಸಲ್ಪಟ್ಟ ದ್ವಿಪಕ್ಷೀಯ ಸಂಬಂಧಗಳನ್ನು ಹಂಚಿಕೊಂಡಿರುವ ಭೂತಾನ್, ಭಾರತದ 73 ನೇ ಸ್ವಾತಂತ್ರ್ಯ ದಿನಾಚರಣೆಗೆ ಅತ್ಯಂತ ವಿಶೇಷವಾಗಿ ಶುಭಾಶಯವನ್ನು ಕೋರಿ ಹಾರೈಸಿದೆ. ಭಾರತಕ್ಕೆ ಶುಭಾಶಯವನ್ನು ಕೋರಿರುವ ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಅತ್ಯಂತ “ವಿನಮ್ರ ಮತ್ತು ನಿಷ್ಕಪಟ” ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ.
ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ಅವರು, ಪ್ರಧಾನಿ ಮೋದಿಯವರು ಪರೀಕ್ಷೆ ಎದುರಿಸುವ ಶಾಲಾ ಮಕ್ಕಳಿಗಾಗಿ ಬರೆದ ‘ಎಕ್ಸಮ್ ವಾರಿಯರ್ಸ್’ ಪುಸ್ತಕವನ್ನು ಶ್ಲಾಘಿಸಿದ್ದಾರೆ. ಪುಸ್ತಕದ ಬಗೆಗೆ ಪೋಸ್ಟ್ನಲ್ಲಿ ಉಲ್ಲೇಖ ಮಾಡಿರುವ ಅವರು, “ಭಾರತದ ಪ್ರಧಾನ ಮಂತ್ರಿ, ಎಲ್ಲದರ ಜೊತೆಗೆ, ಒಬ್ಬ ಉತ್ತಮ ಬರಹಗಾರ ಎಂದು ನನಗೆ ತಿಳಿದಿದೆ” ಎಂದು ಹೇಳಿದ್ದಾರೆ.
“ಯುವ ಜನತೆಯನ್ನು ಗುರಿಯಾಗಿಸಿ ಬರೆದ ಪುಸ್ತಕದ ಪುಟಗಳನ್ನು ಓದಿದ್ದೇನೆ, ಆ ಪುಸ್ತಕದಲ್ಲಿ ಅವರು ಪರೀಕ್ಷೆಯ ಕಲ್ಪನೆಯನ್ನು ನಿರ್ಮಿಸಿದ್ದಾರೆ. ಪರೀಕ್ಷೆಯನ್ನು ಅನೇಕರು ಜೀವನವನ್ನು ನಿರ್ಧರಿಸುವ ಅಂಶ ಎಂದು ಭಾವಿಸುತ್ತಾರೆ. ವೈಯಕ್ತಿಕ ಅನುಭವಗಳಿಂದ ಈ ಪುಸ್ತಕವನ್ನು ಬರೆಯಲಾಗಿದೆ. ಮಗುವಿಗೆ ಇನ್ನೂ ಆಳವಾದ ಮತ್ತು ಪ್ರಾಯೋಗಿಕತೆಯನ್ನು ಅರ್ಥಮಾಡಿಕೊಳ್ಳಲು ಈ ಪುಸ್ತಕದಲ್ಲಿನ ವಿಷಯವು ತುಂಬಾ ಸರಳವಾಗಿದೆ. ಆ ರೀತಿ ಮೋದಿ ಬರೆದಿದ್ದಾರೆ” ಎಂದಿದ್ದಾರೆ.
“ದೆಹಲಿಗೆ ಎರಡು ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕ ತುಂಬಾ ವಿನಮ್ರ ಮತ್ತು ನಿಷ್ಕಪಟ ವ್ಯಕ್ತಿಯಾಗಿ ನನಗೆ ಕಾಣಿಸಿಕೊಂಡರು. ಬದಲಾವಣೆಯನ್ನು ತರಲು ಮತ್ತು ತನ್ನ ರಾಷ್ಟ್ರವನ್ನು ಮುಂದೆ ಕೊಂಡೊಯ್ಯಲು ಆ ಮನುಷ್ಯನಿಗೆ ಒಳ್ಳೆಯ ಉದ್ದೇಶವಿದೆ ಎಂಬುದನ್ನು ನಾನು ಅರಿತುಕೊಂಡೆ. ವೈವಿಧ್ಯಮಯ ಹಿನ್ನೆಲೆ ಮತ್ತು ಸಂಕೀರ್ಣತೆಗಳಿರುವ ತನ್ನ ದೇಶಕ್ಕಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡ ವ್ಯಕ್ತಿ ಮೋದಿ, ಅವರು ತನ್ನ ಪಾದಗಳನ್ನು ನೆಲದ ಮೇಲೆ ದೃಢವಾಗಿ ಇಟ್ಟುಕೊಂಡಿದ್ದಾರೆ ” ಎಂದಿದ್ದಾರೆ.
“ಅವರ ಪುಸ್ತಕದಲ್ಲಿನ ಯೋಗದ ಬಗೆಗಿನ ವಿಷಯವನ್ನು ಸಹ ಓದಲೇಬೇಕು. ವೈದ್ಯನಾಗಿ ನಾನು ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿನ ಯೋಗಾಭ್ಯಾಸವನ್ನು ಸದಾ ಶಿಫಾರಸ್ಸು ಮಾಡುತ್ತೇನೆ. ಸಂತೋಷವಾಗಿರಲು, ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಲು ಮತ್ತು ವಯಸ್ಸಾದಂತೆ ಕಾಣದಿರಲು ಇದು ಪರಿಹಾರವಾಗಿದೆ” ಎಂದಿದ್ದಾರೆ.
“ಭೂತಾನ್ ಉತ್ತಮ ಸ್ನೇಹಿತನನ್ನು ಹೊಂದಿದ್ದಾನೆ ಎಂಬ ಭರವಸೆ ನನಗೆ ಇದೆ. ಇನ್ನು ಎರಡು ದಿನಗಳಲ್ಲಿ ಮೋದಿ ಅವರು ನಮ್ಮ ದೇಶಕ್ಕೆ ಭೇಟಿ ನೀಡುತ್ತಾರೆ. ಇದು ನಿಸ್ಸಂದೇಹವಾಗಿ ನಮಗೆ ಗೌರವವಾಗಿದೆ. ಆದರೆ ಅವರನ್ನು ಭಾರತದ ಪ್ರಧಾನ ಮಂತ್ರಿಯನ್ನಾಗಿ ಮಾತ್ರವಲ್ಲದೆ, ತಮ್ಮ ದೇಶಕ್ಕೆ ಮತ್ತು ಅದಕ್ಕೂ ಮೀರಿ ಉತ್ತಮ ಅರ್ಥವನ್ನು ಹೊಂದಿರುವ ಮಹಾನ್ ವ್ಯಕ್ತಿಯಾಗಿರುವ ಅವರನ್ನು ಸ್ವಾಗತಿಸುವುದು ಹೆಮ್ಮೆಯ ಕ್ಷಣವಾಗಿದೆ” ಎಂದಿದ್ದಾರೆ.
ನೆರೆಯ ಭೂತಾನ್ಗೆ ಆಗಸ್ಟ್ 17 ರಿಂದ ಪ್ರಧಾನಿ ಮೋದಿ ಎರಡು ದಿನಗಳ ಭೇಟಿ ನೀಡಲಿದ್ದಾರೆ.
Along with his Independence Day greetings, @PMBhutan shared a lovely Facebook post, which I thought I would share with you all.
Glad to see him go through Exam Warriors and highlight aspects relating to it. @examwarriors pic.twitter.com/hxSQibTu8c
— Narendra Modi (@narendramodi) August 15, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.