ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿಯು 2014-15ನೇ ಸಾಲಿನಲ್ಲಿ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಮೊದಲಾದ 4 ಕಂದಾಯ ಜಿಲ್ಲೆಗಳನ್ನೊಳಗೊಂಡ 86 ಕ್ಲಬ್ಗಳಲ್ಲಿರುವ ಲಯನ್ಸ್ ಜಿಲ್ಲೆ 317ಡಿಯಲ್ಲಿ ಅತ್ಯಧಿಕ 25 ಸೇವಾ ಪುರಸ್ಕಾರಗಳನ್ನು ಪಡೆದುಕೊಂಡು 81 ವರ್ಷಗಳ ಇತಿಹಾಸವಿರುವ ಬೆಳ್ತಂಗಡಿ ಲಯನ್ಸ್ ಕ್ಲಬ್ ಸರ್ವಾಂಗೀಣ ಸೇವಾ ದ್ಯೋತಕವಾಗಿ ಅತ್ಯುತ್ತಮ ಜಿಲ್ಲೆಯ ಪ್ರಥಮ ಪ್ರಶಸ್ತಿಯೊಂದಿಗೆ ಪುರಸ್ಕೃತಗೊಂಡಿದೆ ಎಂದು ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಎನ್. ಎ. ಗೋಪಾಲ ಶೆಟ್ಟಿ ಹೇಳಿದ್ದಾರೆ.
ಅವರು ಬೆಳ್ತಂಗಡಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಈ ಪ್ರಶಸ್ತಿಯನ್ನು ಮಂಗಳೂರಿನ ಕುಲಶೇಖರ ಕೊರ್ಡೆಲ್ ಚರ್ಚ್ ಸಭಾಂಗಣದಲ್ಲಿ ನಡೆದ ಲಯನ್ಸ್ ಜಿಲ್ಲಾ ಧನ್ಯ ಪುರಸ್ಕಾರ ಪ್ರಧಾನ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಹೆಚ್ ಎಸ್ ಮಂಜುನಾಥ ಮೂರ್ತಿ, ಲಯನೆಸ್ಸ್ ರಾಜ್ಯಪಾಲೆ ನಂದಿನಿ ಮೂರ್ತಿ ಹಾಗೂ 2015-16ನೇ ಸಾಲಿನ ನಿಯೋಜಿತ 1ನೇ ಉಪರಾಜ್ಯಪಾಲರಾದ ಅರುಣ್ ಶೆಟ್ಟಿ ಮಂಗಳೂರು, ನಿಯೋಜಿತ ದ್ವಿತೀಯ ಉಪ ರಾಜ್ಯಪಾಲರಾದ ಲಯನ್ ಹೆಚ್. ಆರ್. ಹರೀಶ್ ಮತ್ತು ಜಿಲ್ಲಾ ಪದಾಧಿಕಾರಿಗಳಾದ ವಿಜಯವಿಷ್ಣು ಮಯ್ಯ, ನರಸಿಂಹ ಕುಂಬ್ಳೆ, ಕುಡ್ಪಿ ಅರವಿಂದ ಶೆಣೈ ಮತ್ತು ಇತರ ಜಿಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಪಡೆಯಲಾಯಿತು ಎಂದರು.
ಸರ್ವ ವಲಯಗಳಲ್ಲಿ ಪ್ರಥಮ ಸ್ಥಾನ : ಲಯನ್ಸ್ನ ಆಡಳಿತ ವಿಭಾಗದ63ವಿಭಾಗಗಳಲ್ಲಿ ಮತ್ತು ಸೇವಾ ವಿಭಾಗದ ೨೫ ಕ್ಷೇತ್ರಗಳಾದ ವ್ಯಕ್ತಿತ್ವ ವಿಕಸನ, ಕಣ್ಣಿನ ರಕ್ಷಣೆ, ಪರಿಸರ ಮತ್ತು ಶಿಕ್ಷಣ, ಅಂತರ್ಜಾಲದ ಸದ್ವಿನಿಯೋಗ, ರಕ್ತದಾನ, ಮಾದಕ ದ್ರವ್ಯ ಮುಕ್ತ ಸಮಾಜದ ಬಗ್ಗೆ ಜಾಗೃತಿ, ಗ್ರಾಮೀಣ ಉತ್ಸವಗಳು, ಅಂತರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮಗಳ ಆಯೋಜನೆ, ಗ್ರಾಮ ದತ್ತು ಸ್ವೀಕಾರ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದರೆ, ಪ್ರತಿಭಾ ಪ್ರದರ್ಶನ ಮತ್ತು ಕಾನೂನು ಮಾಹಿತಿ, ಕನ್ನಡಾಭೀವೃದ್ಧಿ, ಕುಟುಂಬ ಜಾಗೃತಿ, ಯುವಜನ ಮತ್ತು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ, ಕಣ್ಣಿನ ಆರಕ್ಷಣೆ ಮತ್ತು ಕನ್ನಡಕ ವಿತರಣೆ, ಆರೋಗ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆ, ಮಕ್ಕಳ ರಕ್ಷಣೆ, ಸಮುದಾಯ ಸೇವೆ, ಪಶುವೈದ್ಯಕೀಯ ಸೇವೆ, ಕಾಡುಪ್ರಾಣಿಗಳ ಸಂರಕ್ಷಣೆ, ವಿಕಲಚೇತನರಿಗೆ ಸಹಕಾರ, ಸಂಘ ಸೇವೆ, ವೃತ್ತಿ ಸೇವೆ, ಸಮುದಾಯ ಸೇವೆ ಹೀಗೆ ಈ ಎಲ್ಲಾ ಸೇವೆಗಳಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಅದೇ ರೀತಿ ಲಯನ್ಸ್ ಜಿಲ್ಲೆಯಲ್ಲಿ ಅತ್ಯುತ್ತಮ ಅಧ್ಯಕ್ಷರಾಗಿ ಸುಪ್ರೀಂ ಡೈಮಂಡ್ ಪ್ರೆಸಿಡೆಂಡ್ ಪ್ರಶಸ್ತಿ ಎನ್. ಎ. ಗೋಪಾಲಶೆಟ್ಟಿ, ಅತ್ಯುತ್ತಮ ಕಾರ್ಯದರ್ಶಿಯಾಗಿ ಸುಪ್ರೀಂ ಡೈಮಂಡ್ ಸೆಕ್ರೆಟರಿ ಪ್ರಶಸ್ತಿ ಧರಣೇಂದ್ರ ಕೆ. ಜೈನ್, ಅತ್ಯುತ್ತಮ ಕೋಶಾಧಿಕಾರಿಯಾಗಿ ಸುಪ್ರೀಂ ಡೈಮಂಡ್ ಟ್ರೆಶರರ್ ಪ್ರಶಸ್ತಿ ನಿತ್ಯಾನಂದ ನಾವರ, ಸದಸ್ಯರಿಗೆ ಗೋಲ್ಡನ್ ಮೆಂಬರ್ಸ್ ಪ್ರಶಸ್ತಿ ಪಡೆದುದು ಬೆಳ್ತಂಗಡಿ ಲಯನ್ಸ್ ಇತಿಹಾಸದಲ್ಲಿ ಪ್ರಥಮ ಬಾರಿಯಾಗಿದೆ ಎಂದರು.
2004 ಜುಲೈ 5ರ ವರೆಗೆ ನಮ್ಮ ಕ್ಲಬ್ನ ಸದಸ್ಯರ ಸಂಖ್ಯೆ 43 ಇದ್ದು ಇದೀಗ ಇಂದಿನ ತನಕ 45 ಹೊಸ ಸದಸ್ಯರು ಸೇರ್ಪಡೆಗೊಂಡಿದ್ದು 317ಡಿಯಲ್ಲಿ ಇದೀಗ ‘ಗೋಲ್ಡನ್ ಪ್ರಶಸ್ತಿ’ ಯನ್ನು ನಮ್ಮ ಕ್ಲಬ್ ಪಡೆದುಕೊಂಡಿದೆ. ಪ್ರಸ್ತುತ ಕ್ಲಬ್ನ ಸದಸ್ಯರ ಸಂಖ್ಯೆ 84ಕ್ಕೆ ಏರಿದೆ. ಎನ್. ಎ. ಗೋಪಾಲಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ಲಯನ್ಸ್ ಕ್ಲಬ್ನ ಮುಖಾಂತರ ಬೆಳ್ತಂಗಡಿ ತಾಲೂಕಿನ ೮೭ ಶಾಲೆಗಳ ಸುಮಾರು ೮೬೮೩ ವಿದ್ಯಾರ್ಥಿಗಳಿಗೆ ೮ ಲಕ್ಷ ರೂ. ಮೊತ್ತದ ಬರೆಯುವ ಪುಸ್ತಕವನ್ನು ವಿತರಿಸಿದೆ.
ತಾಲೂಕು ಮಟ್ಟದ ವಾಲಿಬಾಲ್, ತ್ರೋಬಾಲ್, ಕಬಡ್ಡಿ, ಕೋಕೋ, ಫುಟ್ಬಾಲ್, ಕ್ರೀಡಾ ಪಟುಗಳಿಗೆ ಸಮವಸ್ತ್ರ ವಿತರಣೆ, ಕ್ರೀಡಾ ಸಾಮಾಗ್ರಿ ವಿತರಣೆ, ರಕ್ತದಾನ, ಸ್ವಚ್ಚತೆಯ ಅರಿವು, ಕಾನೂನು ಮಾಹಿತಿ ಕಾರ್ಯಾಗಾರ, 29 ಕಡೆ ಆರೋಗ್ಯ ಶಿಬಿರಗಳು, ವಿಡಂಬನಾತ್ಮಕ ನಾಟಕ, ಗಮಕ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹೀಗೆ ಈ ತನಕ ಒಟ್ಟು 891 ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಒಂದು ವರ್ಷದಲ್ಲಿ 51,65,714ವ್ಯಯಿಸಲಾಗಿದೆ ಎಂದರು.ಮುಂದಿನ ದಿನಗಳಲ್ಲಿ ವಲಯದ ನಾರಾವಿ ಲಯನ್ಸ್ ಕ್ಲಬ್ನ್ನು ಮಾದರಿ ಲಯನ್ಸ್ ಕ್ಲಬ್ನ್ನಾಗಿ ಮಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಧರಣೇಂದ್ರ ಜೈನ್ ಕೆ., ಕೋಶಾಧಿಕಾರಿ ನಿತ್ಯಾನಂದ ನಾವರ, ಕ್ಲಬ್ನ ನಿಯೋಜಿತ ಅಧ್ಯಕ್ಷ ರಾಜು ಶೆಟ್ಟಿ ಬೆಂಗತ್ಯಾರು, ಕಾರ್ಯದರ್ಶಿ ಕೆ. ಕೃಷ್ಣ ಆಚಾರ್ಯ ಉಜಿರೆ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಬಳಂಜ, ನಾರಾವಿ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ರಾಮಚಂದ್ರ ಭಟ್ ಕುಕ್ಕುಜೆ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.