ಹೈದರಾಬಾದ್ : ತೆಲಂಗಾಣದ ಗೋದಾವರಿ ನದಿಯಲ್ಲಿ ನಿರ್ಮಿಸಲಾಗುತ್ತಿರುವ ಕಾಳೇಶ್ವರಂ ಲಿಫ್ಟ್ ನೀರಾವರಿ ಯೋಜನೆಯು ಸೋಮವಾರ ಮುಂಜಾನೆ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಲಕ್ಷ್ಮಿಪುರ ಗ್ರಾಮದಲ್ಲಿ ವಿಶ್ವದ ಅತಿದೊಡ್ಡ ಅಂಡರ್ ಗ್ರೌಂಡ್ ಪಂಪಿಂಗ್ ಸ್ಟೇಶನ್ ಅನ್ನು ಕಾರ್ಯಾರಂಭಗೊಳಿಸಲಾಗಿದೆ.
ಭೂಮಿಯ ಮೇಲ್ಮೈಯಿಂದ ಸುಮಾರು 470 ಅಡಿಗಳಷ್ಟು ಕೆಳಗೆ ನಿರ್ಮಿಸಲಾದ ಈ ಅಂಡರ್ ಗ್ರೌಂಡ್ ಪಂಪ್ ಹೌಸ್, ಕಾಳೇಶ್ವರಂ ಯೋಜನೆಯ ಪ್ರಮುಖ ಭಾಗವಾಗಿದೆ. ಕಾಳೇಶ್ವರಂ ಅನ್ನು ದೇಶದ ಅತ್ಯಂತ ದುಬಾರಿ ಲಿಫ್ಟ್ ನೀರಾವರಿ ಯೋಜನೆ ಎಂದು ಪರಿಗಣಿಸಲಾಗಿದೆ. ಈ ಯೋಜನೆಗಾಗಿ 80,000 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ.
ಅಧಿಕೃತ ಹೇಳಿಕೆಯ ಪ್ರಕಾರ, ಭಾನುವಾರ ತಡರಾತ್ರಿ ಯಂತ್ರವನ್ನು ಸ್ವಿಚ್ ಆನ್ ಮಾಡುವುದರ ಮೂಲಕ ಪಂಪ್ನ ಕಾರ್ಯ ಪ್ರಾರಂಭವಾಯಿತು. 111 ಮೀಟರ್ ಎತ್ತರಕ್ಕೆ 3,000 ಕ್ಯೂಸೆಕ್ ನೀರನ್ನು ಸಿಸ್ಟರ್ನ್ನಿಂದ ಎತ್ತಿ ಸಾಗಿಸಲಾಗಿದೆ ಮತ್ತು ಗುರುತ್ವಾಕರ್ಷಣೆಯ ಮೂಲಕ ನೀರನ್ನು ಮಿಡ್-ಮ್ಯಾನರ್ ಜಲಾಶಯಕ್ಕೆ ಕೊಂಡೊಯ್ಯುವ ಕಾಲುವೆಗೆ ಪಂಪಿಂಗ್ ಮಾಡಲಾಗಿದೆ.
“ಪ್ರಾಯೋಗಿಕವಾಗಿ ಇದನ್ನು ನಡೆಸಲಾಗಿದ್ದು ಯಶಸ್ವಿಯಾಗಿದೆ. ಬೃಹತ್ ಲಕ್ಷ್ಮಿಪುರ ಪಂಪ್ ಹೌಸ್ ಅನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಬುಧವಾರ ಉದ್ಘಾಟಿಸಲಿದ್ದಾರೆ ”ಎಂದು ಯೋಜನೆಯ ನಿರ್ದೇಶಕ ಬಿ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಗೋದಾವರಿ ನದಿಯಲ್ಲಿ ವರ್ಷಪೂರ್ತಿ ಜಲಾಶಯಗಳಲ್ಲಿ ನೀರನ್ನು ನೇರವಾಗಿ ಸಂಗ್ರಹಿಸಲು ಪಂಪಿಂಗ್ ಸ್ಟೇಷನ್ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಈ ಯೋಜನೆಯು ಎರಡು ಸುರಂಗಗಳು, ದೊಡ್ಡ ಕೊಳಗಳು ಮತ್ತು ಏಳು ಮೋಟರ್ಗಳನ್ನು ಹೊಂದಿದೆ, ಪ್ರತಿಯೊಂದೂ ಮೋಟಾರ್ 139 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ. ಈ ಮೋಟರ್ಗಳು ದಿನಕ್ಕೆ ಮೂರು ಟಿಎಂಸಿ ಅಡಿ ನೀರನ್ನು ಎತ್ತುವಂತೆ ಮಾಡಬಲ್ಲದು. “ಪ್ರತಿ ಮೋಟಾರ್ ಪಂಪ್ ಸುಮಾರು 2,376 ಮೆಟ್ರಿಕ್ ಟನ್ ತೂಗುತ್ತದೆ ಮತ್ತು ಇದನ್ನು ದೈತ್ಯ ಮೋಟಾರ್ ಅಥವಾ ಬಾಹುಬಲಿ ಮೋಟಾರ್ ಎಂದು ಕರೆಯಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಮೂಲ ಯೋಜನೆಯ ಪ್ರಕಾರ, ಕಾಳೇಶ್ವರಂ ಯೋಜನೆಯು ಗೋದಾವರಿ ನದಿಯ ಸುಮಾರು ಎರಡು ಟಿಎಂಸಿ ಅಡಿ ನೀರನ್ನು ಉಪಯೋಗವಾಗುವಂತೆ ಮಾಡಲಿದೆ. ಇದರಲ್ಲಿ 134 ಟಿಎಂಸಿ ನೀರು 18.25 ಲಕ್ಷ ಎಕರೆಗಳ ನೀರಾವರಿಗೆ ಬಳಕೆಯಾಗಲಿದೆ, 34.5 ಟಿಎಂಸಿ ಅಡಿ ನೀರನ್ನು ಆರು ಲಕ್ಷ ಎಕರೆ ನೀರಾವರಿ ಪ್ರದೇಶವನ್ನು ಸ್ಥಿರಗೊಳಿಸಲು ಬಳಕೆಯಾಗಲಿದೆ, ಕುಡಿಯುವ ನೀರಿಗೆ 10 ಟಿಎಂಸಿ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ 16 ಟಿಎಂಸಿ ಬಳಕೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.