ನವದೆಹಲಿ: ಐಶ್ವರ್ಯ ಪಿಸೆ ಅವರು ಮೋಟಾರ್ ಸ್ಪೋರ್ಟ್ಸ್ನಲ್ಲಿ ವಿಶ್ವ ಪ್ರಶಸ್ತಿಯನ್ನು ಪಡೆದುಕೊಂಡ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಂಗೇರಿಯ ವರ್ಪಲೋಟದಲ್ಲಿ ನಡೆದ FIM ವರ್ಲ್ಡ್ ಕಪ್ ( Fédération Internationale de Motocyclisme)ನ ಮಹಿಳಾ ವಿಭಾಗದಲ್ಲಿ ಅಂತಿಮ ಸುತ್ತಿನಲ್ಲಿ ಜಯಗಳಿಸಿದ ಇವರು ವಿಶ್ವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬೆಂಗಳೂರಿನ 23 ವರ್ಷದ ಐಶ್ವರ್ಯ, FIM ಜೂನಿಯರ್ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ದುಬೈನಲ್ಲಿ ನಡೆದ ಮೊದಲ ಸುತ್ತಿನಲ್ಲಿ ಜಯಗಳಿಸಿದ ಇವರು ಮತ್ತು ನಂತರದ ಮೂರನೇ ಸುತ್ತನ್ನು ಪೋರ್ಚುಗಲ್, ಐದನೇ ಸುತ್ತನ್ನು (ಸ್ಪೇನ್) ಮತ್ತು ನಾಲ್ಕನೇ ಸುತ್ತನ್ನು ಹಂಗೇರಿಯಲ್ಲಿ ಗೆದ್ದುಕೊಂಡರು. ಈ ಮೂಲಕ 65 ಪಾಯಿಂಟ್ಗಳ ಮೊತ್ತವನ್ನು ಗಳಿಸಿದರು.
ಜೂನಿಯರ್ ವಿಭಾಗದಲ್ಲಿ 46 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದ ಅವರು, ಚಿಲಿಯ ಚಾಂಪಿಯನ್ಶಿಪ್ ವಿಜೇತ ತೋಮಸ್ ಡಿ ಗವರ್ಡೊ (60) ಅವರ ನಂತರದ ಸ್ಥಾನದಲ್ಲಿದ್ದಾರೆ.
ಹಂಗೇರಿಯನ್ ಬಾಜಾದಲ್ಲಿ, ಐಶ್ವರ್ಯಾ (52) ಮತ್ತು ವಿಯೆರಾ (45) ವಿಶ್ವಕಪ್ನ ಅಗ್ರ ಸ್ಪರ್ಧಿಗಳಾಗಿದ್ದರು.
ಮೋಟಾರ್ ಸ್ಪೋರ್ಟ್ಸ್ ಜಗತ್ತಿನ ಪ್ರತಿಭಾವಂತ ರೇಸರ್ ಆಗಿ ಹೊರಹೊಮ್ಮುತ್ತಿರುವ ಐಶ್ವರ್ಯ, ರೋಡ್ರೇಸಿಂಗ್ ಮಾತ್ರವಲ್ಲ ರಾರಯಲಿ ರೇಸ್ ಚಾಂಪಿಯನ್ಷಿಪ್ಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.