ನವದೆಹಲಿ: ಭಾರತದಿಂದ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಕಳ್ಳಸಾಗಣೆಯಾಗುವ ಗೋವುಗಳ ಪ್ರಮಾಣದಲ್ಲಿ ಶೇ. 96ರಷ್ಟು ಕಡಿಮೆಯಾಗಿದೆ. ಬಾಂಗ್ಲಾದೇಶದ ಸಚಿವ ಅಶ್ರಫ್ ಅಲಿ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಾಂಗ್ಲಾದೇಶದ ಅಂತರ್ ಸಚಿವ ಸಭೆಯಲ್ಲಿ ಈ ಅಂಕಿ ಅಂಶಗಳು ಬಹಿರಂಗಗೊಂಡಿವೆ.
ಮಾಂಸ ಉತ್ಪಾದನೆಯಲ್ಲಿ ಬಾಂಗ್ಲಾದೇಶ ಸ್ವಾವಲಂಬನೆ ಸಾಧಿಸಿದೆ, ಇದರಿಂದ ನೆರೆಯ ಭಾರತ ಮತ್ತು ಮ್ಯಾನ್ಮಾರ್ನಿಂದ ಜಾನುವಾರು ಆಮದು ಮತ್ತು ಅಕ್ರಮವಾಗಿ ಸಾಗಾಣೆಗುತ್ತಿದ್ದ ಗೋವುಗಳ ಪ್ರಮಾಣದಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು, ವಾರ್ಷಿಕವಾಗಿ 2.4 ರಿಂದ 2.5 ಮಿಲಿಯನ್ ಗೋವುಗಳು ಭಾರತದಿಂದ ಬಾಂಗ್ಲಾದೇಶಕ್ಕೆ ಸಾಗಾಣೆಯಾಗುತ್ತಿದ್ದವು, ಆದರೆ 2018 ರಲ್ಲಿ ಕೇವಲ 92,000 ಹಸುಗಳು ಮಾತ್ರ ಬಾಂಗ್ಲಾದೇಶಕ್ಕೆ ಪ್ರವೇಶಿಸಿವೆ ಎಂದು ವರದಿಯಾಗಿದೆ.
ಭಾರತ-ಬಾಂಗ್ಲಾದೇಶ ಗಡಿ ಜಾನುವಾರು ಕಳ್ಳಸಾಗಣೆಗೆ ಕುಖ್ಯಾತವಾಗಿದೆ, ಈದ್ ಹಬ್ಬವು ಹತ್ತಿರವಾಗುತ್ತಿದ್ದಂತೆ ಇದು ತೀವ್ರಗೊಳ್ಳುತ್ತದೆ.
ಕಳ್ಳದಾಗಾಣೆದಾರರು ಐಇಡಿಯನ್ನು ಅಳವಡಿಸಿದಂತಹ ಹಲವು ಹಸುಗಳನ್ನು ಕಳೆದ ತಿಂಗಳು ಬಿಎಸ್ಎಫ್ ಯೋಧರು ಪತ್ತೆ ಹಚ್ಚಿದ್ದರು. ಇದಕ್ಕೆ ಹದಿನೈದು ದಿನಗಳ ಮೊದಲು, ಬಿಎಸ್ಎಫ್ ಯೋಧರೊಬ್ಬರು ಹಸು ಕಳ್ಳಸಾಗಣೆದಾರರ ಬಾಂಬ್ ದಾಳಿಗೆ ಕೈಯನ್ನು ಕಳೆದುಕೊಂಡಿದ್ದರು. ಗಡಿಯ ಈ ಭಾಗದಲ್ಲಿ ಎಗ್ಗಿಲ್ಲದೆ ಕಾರ್ಯಾಚರಿಸುತ್ತಿರುವ ಬೀಫ್ ಮಾಫಿಯಾ ಹಲವಾರು ಮುಗ್ಧ ಜಾನುವಾರುಗಳು ಮತ್ತು ಅದರ ಮಾಲೀಕರನ್ನು ಬಲಿಪಡೆದುಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.