ನವದೆಹಲಿ: ಪೋಷಕತ್ವದ ನೈಜ ಸಂದೇಶವನ್ನು ಪಸರಿಸಿರುವ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು, ಮಕ್ಕಳ ಆರೈಕೆ ರಜೆ (Child Care Leave)ಯ ಪ್ರಯೋಜನಗಳನ್ನು ರಕ್ಷಣಾ ಪಡೆಯ ಏಕ ಪೋಷಕ ಸೇವಾ ಸಿಬ್ಬಂದಿ (single male service personnel)ಗಳಿಗೂ ವಿಸ್ತರಿಸಲು ಅನುಮೋದನೆಯನ್ನು ನೀಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಗುವಿನ ಏಕಪೋಷಕ ಪುರುಷ ಸಿಬ್ಬಂದಿಗಳಿಗೂ ಮಕ್ಕಳ ಆರೈಕೆ ರಜಾ ಸೌಲಭ್ಯವನ್ನು ವಿಸ್ತರಿಸುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.
ಅಲ್ಲದೆ ರಕ್ಷಣಾ ಪಡೆಗಳಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಮಕ್ಕಳ ಆರೈಕೆ ರಜೆ (ಸಿಸಿಎಲ್)ಪಡೆಯಲಿರುವ ಕೆಲವು ಶರತ್ತುಗಳಿಂದ ವಿನಾಯಿತಿ ನೀಡಲೂ ರಕ್ಷಣಾ ಸಚಿವರು ಸಮ್ಮತಿಸಿದ್ದಾರೆ. ಒಂದು ಬಾರಿಗೆ ಕನಿಷ್ಟ 15 ಸಿಸಿಎಲ್ ಪಡೆಯಬೇಕೆಂಬ ನಿಯಮದಲ್ಲಿ ವಿನಾಯಿತಿ ನೀಡಿಲಾಗಿದ್ದು, ಕನಿಷ್ಠ 5 ಮಕ್ಕಳ ಆರೈಕೆ ರಜೆ ಎಂದು ಸೂಚಿಸಲಾಗಿದೆ.
ಅಲ್ಲದೆ ಶೇ.40ರಷ್ಟು ಅಂಗವೈಕಲ್ಯ ಹೊಂದಿದ ಮಕ್ಕಳು ಎಂಬ ಕಾರಣಕ್ಕೆ ರಜೆ ಪಡೆಯಲು ತಾಯಿಯ ವಯಸ್ಸು 22 ವರ್ಷದೊಳಗೆ ಇರಬೇಕು ಎಂಬ ನಿಯಮದಿಂದಲೂ ವಿನಾಯಿತಿ ನೀಡಲಾಗಿದೆ.
ಸಿಸಿಎಲ್ ಸೌಲಭ್ಯ ಇದುವರೆಗೆ ರಕ್ಷಣಾ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳಿಗೆ ಮಾತ್ರ ಮಕ್ಕಳ ಆರೈಕೆ ರಜೆಯ ಸೌಲಭ್ಯ ದೊರಕುತ್ತಿತ್ತು. ಇದೀಗ ಅದನ್ನು ರಾಜನಾಥ್ ಸಿಂಗ್ ಅವರು ಪುರುಷರಿಗೂ ವಿಸ್ತರಣೆಗೊಳಿಸಿದ್ದಾರೆ.
ಅವಿವಾಹಿತರಾಗಿದ್ದು ಮಕ್ಕಳ ಪಾಲನೆ ಹೊಣೆ ಹೊತ್ತವರು, ವಿಧುರ ಅಥವಾ ವಿಚ್ಛೇದನ ಪಡೆದಿರುವ ಕೇಂದ್ರ ಸರ್ಕಾರ ಪುರುಷ ನೌಕರರಿಗೆ, ರಕ್ಷಣಾ ಪಡೆಯ ಸಿಬ್ಬಂದಿಗಳಿಗೆ ಇನ್ನು ಮುಂದೆ ಸಿಸಿಎಲ್ ಸೌಲಭ್ಯ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.