ಕೋಲ್ಕತ್ತಾ: ಭಾರತದ ಮೊದಲ ಅಂಡರ್ ವಾಟರ್ ರೈಲು ಶೀಘ್ರದಲ್ಲೇ ಕೋಲ್ಕತ್ತಾದಲ್ಲಿ ಕಾರ್ಯಾರಂಭ ಮಾಡಲಿದೆ. ಮೆಟ್ರೋ ಇದನ್ನು ಕಾರ್ಯಾಚರಿಸಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ಟ್ವಿಟ್ ಮಾಡಿರುವ ಗೋಯಲ್, “ಭಾರತದ ಮೊದಲ ಅಂಡರ್ ವಾಟರ್ ರೈಲು ಶೀಘ್ರದಲ್ಲೇ ಕೋಲ್ಕತ್ತಾದಲ್ಲಿ ಕಾರ್ಯಾರಂಭ ಮಾಡಲಿದೆ. ಇದು ಹೂಗ್ಲಿ ನದಿಯೊಳಗೆ ಚಲಿಸಲಿದೆ. ಅದ್ಭುತವಾದ ಎಂಜಿನಿಯರಿಂಗ್ ಕೌಶಲ್ಯಕ್ಕೆ ಇದು ಉದಾಹರಣೆಯಂತಿದೆ. ಭಾರತೀಯ ರೈಲ್ವೇಯ ಪ್ರಗತಿಗೆ ಸಾಕ್ಷಿಯಂತಿದೆ. ಕೋಲ್ಕತ್ತಾ ನಾಗರೀಕರ ಪ್ರಯಾಣವನ್ನು ಇದು ಸುಗಮಗೊಳಿಸಲಿದೆ ಮತ್ತು ಇದು ದೇಶದ ಜನರ ಹೆಮ್ಮೆಯಾಗಿದೆ” ಎಂದಿದ್ದಾರೆ.
भारत की पहली अंडर वॉटर ट्रेन शीघ्र ही कोलकाता में हुगली नदी के नीचे चलना आरंभ होगी। उत्कृष्ट इंजीनियरिंग का उदाहरण यह ट्रेन देश में निरंतर हो रही रेलवे की प्रगति का प्रतीक है।
इसके बनने से कोलकाता निवासियों को सुविधा, और देश को गर्व का अनुभव होगा। pic.twitter.com/MDzj42s5XZ
— Piyush Goyal (@PiyushGoyal) August 8, 2019
16 ಕಿಮೀ ಉದ್ದದ ಮೆಟ್ರೋ ಪ್ರಾಜೆಕ್ಟ್ ಇದಾಗಿದ್ದು, ಸಾಲ್ಟ್ ಸೆಕ್ಟರ್ 5 ಅನ್ನು ಹೌರೌ ಮೈದಾನ್ವೊಂದಿಗೆ ಸಂಪರ್ಕಿಸಲಿದೆ. ಸಾಲ್ಟ್ ಲೇಕ್ ಸೆಕ್ಟರ್ 5 ಅನ್ನು ಸಾಲ್ಟ್ ಲೇಕ್ ಸ್ಟೇಡಿಯಂಗೆ ಸಂಪರ್ಕಿಸುವ ಯೋಜನೆಯ ಮೊದಲ ಹಂತ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ.
ಇದರ ಸುರಂಗಕ್ಕೆ ನಾಲ್ಕು ಸುತ್ತಿನ ಭದ್ರತೆಯನ್ನು ಒದಗಿಸಲಾಗಿದ್ದು, ಇದು ಹೂಗ್ಲಿ ನದಿ ನೀರಿನಿಂದ ರಕ್ಷಣೆ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.