News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಂತಾರಾಷ್ಟ್ರೀಯ ಮಟ್ಟದಲ್ಲಿ ಒರಿಸ್ಸಾ ಕೈಮಗ್ಗವನ್ನು ಪ್ರಚುರಪಡಿಸಲಿದೆ ಕೇಂದ್ರ

ನವದೆಹಲಿ: ಸಾಂಸ್ಕೃತಿಕ ಕಲೆ, ಸಂಗೀತ, ಸಾಹಿತ್ಯ ಮತ್ತು ಕೈಮಗ್ಗಗಳಲ್ಲಿ ಒರಿಸ್ಸಾ ಅತ್ಯದ್ಬುತವಾದ ಇತಿಹಾಸವನ್ನು ಹೊಂದಿದೆ. ಒರಿಸ್ಸಾ ನೇಕಾರರು ಪೀಳಿಗೆಯಿಂದ ಪೀಳಿಗೆಗೆ ತಮ್ಮ ಅತಿ ಶ್ರೇಷ್ಠ ಮತ್ತು ಅತಿ ಸುಂದರ ಕೈಮಗ್ಗ ಕಲೆಯನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಈ ಕೈಮಗ್ಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸುವ ಸಲುವಾಗಿ ಮತ್ತು ಸ್ಥಳೀಯ ನೇಕಾರರಿಗೆ ಉತ್ತಮ ಅವಕಾಶವನ್ನು ಸೃಷ್ಟಿಸುವ ಸಲುವಾಗಿ ಕೇಂದ್ರ ಟೆಕ್ಸ್‌ಟೈಲ್ ಇಲಾಖೆಯು ಒರಿಸ್ಸಾ ಕೈಮಗ್ಗಕ್ಕಾಗಿ ಹೊಸ ಯೋಜನೆಯನ್ನು ಹೊರತಂದಿದೆ. ಈ ಯೋಜನೆಯಡಿ ನೇಕಾರಿಗೆ ಮಾಡುವ ಕಾರ್ಮಿಕರು 10 ಪಟ್ಟು ಹೆಚ್ಚು ವೇತನವನ್ನು ಪಡೆದುಕೊಳ್ಳಲಿದ್ದಾರೆ.

5ನೇ ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ SOA ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಕೇಂದ್ರ ಟೆಕ್ಸ್‌ಟೈಲ್ ಕಾರ್ಯದರ್ಶಿ ರವಿ ಕಪೂರ್ ಅವರು, “ಕೈಮಗ್ಗ ಉತ್ಪನ್ನಗಳ ಮಾರಾಟದಲ್ಲಿ ಮಧ್ಯವರ್ತಿಗಳನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಇದರಿಂದ ನೇಕಾರರು ತಮ್ಮ ಉತ್ಪನ್ನಗಳಿಂದ ಕೈತುಂಬಾ ಆದಾಯವನ್ನು ಪಡೆಯುವಂತಾಗುತ್ತದೆ” ಎಂದಿದ್ದಾರೆ.

“ವಿಶ್ವದ 8 ರಾಷ್ಟ್ರಗಳು ಮಾತ್ರ ಕೈಮಗ್ಗ ವಲಯದಲ್ಲಿ ಶ್ರೀಮಂತಗೊಂಡಿವೆ. ಭಾರತವು ಈ ವಲಯದಲ್ಲಿ ವಿಶೇಷ ಗುರುತನ್ನು ಪಡೆಯುವ ಎಲ್ಲಾ ಸಾಧ್ಯತೆಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ ಕೈಮಗ್ಗ ವಲಯದಲ್ಲಿ ಹಲವಾರು ಕಾರ್ಯಗಳನ್ನು ಮಾಡಲಾಗುತ್ತಿದೆ. ಒರಿಸ್ಸಾ ನೇಕಾರರು ಅದ್ಬುತ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸರ್ಕಾರವೂ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top