ನವದೆಹಲಿ: ಸಂವಿಧಾನದ 370ನೇ ವಿಧಿ ರದ್ಧತಿಯ ಮೂಲಕ ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ಅಂತ್ಯಗೊಳಿಸಿದ್ದು ಆ ರಾಜ್ಯದಲ್ಲಿ ಹೊಸ ಆಶಾವಾದವನ್ನು ಸೃಷ್ಟಿಸಿದೆ. ಈ ಕ್ರಮ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ. ಅದರಲ್ಲೂ ಅಲ್ಲಿನ ಡೈರಿ ವಲಯದಲ್ಲಿ ಹೊಸಕಿರಣ ಮೂಡಿದೆ.
ವರದಿಗಳ ಪ್ರಕಾರ ಜಮ್ಮು ಕಾಶ್ಮೀರ ಮಿಲ್ಕ್ ಪ್ರೊಡ್ಯೂಸರ್ಸ್ ಕೋ-ಆಪರೇಟಿವ್ ಲಿಮಿಟೆಡ್ ತನ್ನ ಉತ್ಪಾದಕತೆಯನ್ನು ಪುನಃಶ್ಚೇತನಗೊಳಿಸಲು ಮುಂದಾಗಿದ್ದು, ಇದಕ್ಕೆ ಅಮೂಲ್ ಎಂದೇ ಖ್ಯಾತವಾಗಿರುವ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಸಹಾಯ ಮಾಡಲಿದೆ.
ಜಮ್ಮು ಮಿಲ್ಕ್ ಫೆಡರೇಶನ್ ತನ್ನ ಉತ್ಪಾದಕತೆಯನ್ನು ವಾರ್ಷಿಕವಾಗಿ 180 ಲಕ್ಷ ಕಿಲೋಗೆ ಏರಿಸಲು ಬಯಸಿದೆ. ಇದರಿಂದ 2024-25ರ ವೇಳೆಗೆ ಅದರ ವಹಿವಾಟು 115 ಕೋಟಿಗಳಿಗೆ ಏರಿಕೆಯಾಗಲಿದೆ. ಈಗಾಗಲೇ ಈ ಸಂಸ್ಥೆ ಶ್ರೀನಗರ ಮತ್ತು ಜಮ್ಮುವಿನಲ್ಲಿ ಎರಡು ಹಾಲು ಸಂಸ್ಕರಣಾ ಘಟಕಗಳನ್ನು ತೆರೆದಿದೆ.
“ಜಮ್ಮು ಕಾಶ್ಮೀರದಲ್ಲಿ ಹಾಲು ಸಂಸ್ಕರಣೆಗೆ ಸಾಕಷ್ಟು ಅವಕಾಶಗಳಿವೆ. ಜಮ್ಮ ಕಾಶ್ಮೀರ ಮಿಲ್ಕ್ ಕೋ-ಆಪರೇಟಿವ್ಗೆ ಯೋಜನೆ ನೀಡುವುದು, ಮಾರ್ಗದರ್ಶನ ಮತ್ತು ಯಾವುದೇ ತಾಂತ್ರಿಕ ಸಹಾಯವನ್ನು ನೀಡುವ ಕಾರ್ಯವನ್ನು ಅಮೂಲ್ ಮಾಡಲಿದೆ” ಎಂದು ಅಮೂಲ ನಿರ್ದೇಶಕ ಆರ್.ಎಸ್ ಸೋಧಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.