ನವದೆಹಲಿ: ಹದಿನೇಳನೇ ಲೋಕಸಭೆಯ ಮೊದಲ ಅಧಿವೇಶನವು ಕಳೆದ 20 ವರ್ಷಗಳಲ್ಲೇ ಅತಿ ಹೆಚ್ಚು ಕಾರ್ಯ ನಿರ್ವಹಿಸಿದ ಸಮಯವನ್ನು ದಾಖಲಿಸಿದೆ, ಮಾತ್ರವಲ್ಲದೇ, ಹೆಚ್ಚಿನ ಸಂಖ್ಯೆಯ ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರಿಸಿದ ದಾಖಲೆಯನ್ನೂ ಮಾಡಿದೆ.
ಫಲದಾಯಕತೆಯ ದೃಷ್ಟಿಯಿಂದ, ಈ ಲೋಕಸಭೆಯು 281 ಗಂಟೆಗಳ ಕಾಲ ಕೆಲಸ ಮಾಡಿದೆ. ಅಧಿವೇಶನದ 37 ದಿನಗಳ ಅವಧಿಯಲ್ಲೇ ಶೇ. 135 ರಷ್ಟು ನಿವ್ವಳ ಫಲದಾಯಕತೆಯನ್ನು ನೋಂದಾಯಿಸಿದೆ.
ಕಳೆದ 20 ವರ್ಷಗಳಲ್ಲಿ ಲೋಕಸಭೆಯು ತನ್ನ ನಿಗದಿತ ಸಮಯದ ಶೇ. 81 ರಷ್ಟು ಮಾತ್ರ ಕೆಲಸ ಮಾಡಿದೆ. ಅಲ್ಲದೆ, ಕಳೆದ 20 ವರ್ಷಗಳಲ್ಲಿ, ಲೋಕಸಭೆಯಲ್ಲಿ ಮೌಖಿಕವಾಗಿ ಉತ್ತರಿಸಲ್ಪಟ್ಟ ಪ್ರಶ್ನೆಗಳ ಸಂಖ್ಯೆ ಕೇವಲ ಶೇ.15 ರಷ್ಟಾಗಿದ್ದರೆ, ಈ ಅಧಿವೇಶನದಲ್ಲಿ ಈ ಸಂಖ್ಯೆ ಶೇ. 36 ರಷ್ಟಾಗಿದೆ.
ಸಂಸದೀಯ ವ್ಯವಹಾರ ನಡೆಸಲು ತನ್ನ ಶೇ. 46 ರಷ್ಟು ಸಮಯವನ್ನು ವ್ಯಯಿಸಿದ ಲೋಕಸಭೆಯ ಈ ಬಜೆಟ್ ಅಧಿವೇಶನದಲ್ಲಿ ಒಟ್ಟು 38 ಮಸೂದೆಗಳನ್ನು ಪರಿಚಯಿಸಲಾಗಿದ್ದು, ಅದರಲ್ಲಿ 28 ಮಸೂದೆಗಳನ್ನು ಕೆಳಮನೆಯಲ್ಲಿ ಅಂಗೀಕರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.