ನವದೆಹಲಿ: ದೇಶದ 13ನೇ ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿ ಅವರಿಗೆ ಇಂದು ಭಾರತ ರತ್ನ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತಿದೆ. ಅವರೊಂದಿಗೆ, ಖ್ಯಾತ ಗಾಯಕ ಭುಪೇನ್ ಹಜಾರಿಕಾ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ ನಾನಾಜೀ ದೇಶಮುಖ್ ಅವರುಗಳಿಗೂ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗುತ್ತಿದೆ.
ಮಾಜಿ ರಾಷ್ಟ್ರಪತಿಗಳಾದ ಪ್ರಣವ್ ಮುಖರ್ಜಿ ಅವರನ್ನು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2019 ರ ಜನವರಿಯಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟನೆಯಲ್ಲಿ ಘೋಷಣೆ ಮಾಡಿದ್ದರು. ಇದೇ ವೇಳೆ ಶ್ರೇಷ್ಠ ಗಾಯಕ ಭುಪೇನ್ ಹಜಾರಿಕಾ ಮತ್ತು ಸಾಮಾಜಿಕ ಕಾರ್ಯಕರ್ತ ನಾನಾಜೀ ದೇಶಮುಖ್ ಅವರಿಗೂ ಮರಣೋತ್ತರ ಭಾರತ ರತ್ನ ನೀಡುವುದಾಗಿ ಘೋಷಣೆ ಮಾಡಿದ್ದರು.
ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, “ಪ್ರಣಬ್ ದಾ ನಮ್ಮ ಕಾಲದ ಮಹೋನ್ನತ ರಾಜಕಾರಣಿ. ಅವರು ದಶಕಗಳಿಂದ ನಿಸ್ವಾರ್ಥವಾಗಿ ಮತ್ತು ದಣಿವರಿಯಿಲ್ಲದೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಾರೆ, ರಾಷ್ಟ್ರಕ್ಕೆ ಬೆಳವಣಿಗೆಯ ಪಥವನ್ನು ತೋರಿಸಿದ್ದಾರೆ. ಅವರ ಬುದ್ಧಿವಂತಿಕೆ ಮತ್ತು ಬುದ್ಧಿಶಕ್ತಿಗೆ ಕನಿಷ್ಠ ಪರ್ಯಾಯಗಳಿವೆ. ಅವರಿಗೆ ಭಾರತ ರತ್ನವನ್ನು ನೀಡಲಾಗಿದೆ ಎಂದು ಸಂತೋಷವಾಗುತ್ತಿದೆ” ಎಂದಿದ್ದರು.
ಭುಪೇನ್ ಹಜಾರಿಕಾ ಅವರು ಭಾರತದ ಶ್ರೇಷ್ಠ ಹಿನ್ನೆಲೆ ಗಾಯಕ, ಗೀತರಚನೆಕಾರ, ಸಂಗೀತಗಾರ, ಕವಿ ಮತ್ತು ಅಸ್ಸಾಂನ ಚಲನಚಿತ್ರ ನಿರ್ಮಾಪಕರಾಗಿದ್ದರು. ಇವರನ್ನು ಸುಧಕಾಂತ ಎಂದು ಜನಪ್ರಿಯವಾಗಿ ಕರೆಯಲಾಗುತ್ತಿತ್ತು.
ಚಂಡಿಕಾದಾಸ್ ಅಮೃತರಾವ್ ದೇಶಮುಖ್ ಅವರನ್ನು ನಾನಾಜಿ ದೇಶಮುಖ್ ಎಂದೂ ಕರೆಯಲಾಗುತ್ತದೆ. ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಸ್ವಾವಲಂಬನೆ ಕ್ಷೇತ್ರಗಳಲ್ಲಿ ಅವರು ಮಾಡಿದ ಕಾರ್ಯ ಅಪಾರವಾದುದು. ಅವರನ್ನು 1999 ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.
ಇಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾರತ ರತ್ನವನ್ನು ಪ್ರದಾನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.