ನವದೆಹಲಿ: ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ತನ್ನ 2019-20ರ ಮೂರನೇ ದ್ವಿ-ಮಾಸಿಕ ವಿತ್ತೀಯ ನೀತಿಯಲ್ಲಿ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್ಗಳಿಂದ 5.40 ಕ್ಕೆ ಇಳಿಸುವುದಾಗಿ ಪ್ರಕಟಿಸಿದೆ.
ಈ ಕ್ರಮವು ಬ್ಯಾಂಕುಗಳು ಸಾಲ ನೀಡುವ ದರವನ್ನು ಕಡಿಮೆ ಮಾಡಲಿದೆ, ಇದರಿಂದ ವಸತಿ, ಕಾರು ಸಾಲ ಮತ್ತು ಕಾರ್ಪೊರೇಟ್ ಸಾಲಗಾರರಿಗೆ ಇಎಂಐ ಕಡಿಮೆಯಾಗಲಿದೆ. ಮೇ ತಿಂಗಳಲ್ಲಿ ಮೋದಿ ಸರ್ಕಾರ ಮತ್ತೊಂದು ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಇದು ಆರ್ಬಿಐನ ಎರಡನೇ ಹಣಕಾಸು ನೀತಿ ಘೋಷಣೆಯಾಗಿದೆ.
ಲಿಕ್ವಿಡಿಟಿ ಅಡ್ಜಸ್ಟ್ಮೆಂಟ್ ಫೆಸಿಲಿಟಿ (ಎಲ್ಎಎಫ್) ಅಡಿಯಲ್ಲಿರುವ ರೆಪೊ ದರವನ್ನು ತಕ್ಷಣದ ಪರಿಣಾಮದೊಂದಿಗೆ 0.35 ಬೇಸಿಸ್ ಪಾಯಿಂಟ್ಗಳೊಂದಿಗೆ ಶೇ.5.75ರಿಂದ ಶೇ.5.40 ಕ್ಕೆ ಇಳಿಸಲಾಗಿದೆ. ಇದರ ಪರಿಣಾಮವಾಗಿ, ಎಲ್ಎಎಫ್ ಅಡಿಯಲ್ಲಿ ರಿವರ್ಸ್ ರೆಪೊ ದರವನ್ನು ಶೇ.5.15ಕ್ಕೆ , ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್ಎಫ್) ದರ ಮತ್ತು ಬ್ಯಾಂಕ್ ದರವನ್ನು ಶೇ.5.65 ಕ್ಕೆ ಮತ್ತು ಸಿಆರ್ಆರ್ ದರಗಳನ್ನು ಶೇ.4ಕ್ಕೆ ಹೊಂದಿಸಲಾಗಿದೆ ಎಂದು ಆರ್ಬಿಐ ತಿಳಿಸಿದೆ.
ಎಂಪಿಸಿ ತನ್ನ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.9 ಕ್ಕೆ ಇಳಿಸಿದೆ.
ಪಾಲಿಸಿ ರೆಪೊ ದರವನ್ನು ಕಡಿಮೆ ಮಾಡಲು ಮತ್ತು ವಿತ್ತೀಯ ನೀತಿಯ ಅನುಕೂಲಕರ ನಿಲುವನ್ನು ಕಾಪಾಡಿಕೊಳ್ಳಲು ಎಂಪಿಸಿಯ ಎಲ್ಲ ಸದಸ್ಯರು ಸರ್ವಾನುಮತದಿಂದ ಮತ ಚಲಾಯಿಸಿದ್ದಾರೆ ಎಂದು ಆರ್ಬಿಐ ಹೇಳಿದೆ. ಪಾಲಿಸಿ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆ ಮಾಡಲು ರವೀಂದ್ರ ಎಚ್ ಧೋಲಾಕಿಯಾ, ಮೈಕೆಲ್ ದೇಬಾಬ್ರತಾ ಪತ್ರ, ಬಿಭು ಪ್ರಸಾದ್ ಕನುಂಗೊ ಮತ್ತು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ ಚಲಾಯಿಸಿದರೆ, ಇಬ್ಬರು ಸದಸ್ಯರಾದ ಚೇತನ್ ಘೇಟ್ ಮತ್ತು ಪಾಮಿ ದುವಾ ಅವರು ಪಾಲಿಸಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿಮೆ ಮಾಡಲು ಮತ ಚಲಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.