ನವದೆಹಲಿ: ಎಲ್ಲರಿಗೂ ಆದರ್ಶಪ್ರಾಯ ರಾಜಕಾರಣಿಯಾಗಿದ್ದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಗಲಿದ್ದಾರೆ. ಆದರೆ ಇಹಲೋಕ ತ್ಯಜಿಸುವುದಕ್ಕೂ 3 ಗಂಟೆಗಳ ಮೊದಲು ಅವರು ಮಾಡಿದ್ದ ಟ್ವಿಟ್ ಈಗ ಭಾರೀ ವೈರಲ್ ಆಗುತ್ತಿದೆ. ಜಮ್ಮು ಕಾಶ್ಮೀರದ ಬಗೆಗಿನ ಕೇಂದ್ರದ ನಿರ್ಧಾರಕ್ಕೆ ಸಂಬಂಧಿಸಿದ ಟ್ವಿಟ್ ಅದಾಗಿದೆ.
“ಪ್ರಧಾನಮಂತ್ರಿಯವರೇ ನಿಮಗೆ ಹಾರ್ದಿಕ ಅಭಿನಂದನೆಗಳು. ನಾನು ನನ್ನ ಜೀವಮಾನದಲ್ಲಿ ಈ ದಿನವನ್ನು ನೋಡುವ ಅಪೇಕ್ಷೆಯನ್ನು ಹೊಂದಿದ್ದೆ. ಧನ್ಯವಾದಗಳು ನಿಮಗೆ” ಎಂಬುದು ಸುಷ್ಮಾ ಅವರ ಕೊನೆಯ ಟ್ವಿಟ್ ಆಗಿದೆ. ಪ್ರಸ್ತುತ ಅವರ ಈ ಟ್ವಿಟ್ ಭಾರೀ ವೈರಲ್ ಆಗುತ್ತಿದೆ. ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.
ಲೋಕಸಭೆಯಲ್ಲಿ 370ನೇ ವಿಧಿ ರದ್ಧತಿ, ಜಮ್ಮು ಕಾಶ್ಮೀರ ಮರು ಸಂಘಟನಾ ಸಮೂದೆಗಳು ಅನುಮೋದನೆಗೊಂಡ ಬಳಿಕ ಸುಷ್ಮಾ ರಾತ್ರಿ 7.23ರ ಸುಮಾರಿಗೆ ಈ ಟ್ವಿಟ್ ಅನ್ನು ಮಾಡಿದ್ದಾರೆ. ಬಳಿಕ ರಾತ್ರಿ 9.30ರ ಸುಮಾರಿಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣವೇ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಆದರೆ ಅಲ್ಲೇ ಹೃದಯಾಘಾತಕ್ಕೆ ಒಳಗಾಗಿ ಅವರು ಪ್ರಾಣ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೀವಮಾನವಿಡಿ ಕಾಯುತ್ತಿದ್ದ ಕ್ಷಣ ಬಂದ ದಿನವೇ ಅವರು ಇಹಲೋಕವನ್ನು ತ್ಯಜಿಸಿದ್ದು ನಿಜಕ್ಕೂ ದುರಾದೃಷ್ಟಕರವಾಗಿದೆ.
प्रधान मंत्री जी – आपका हार्दिक अभिनन्दन. मैं अपने जीवन में इस दिन को देखने की प्रतीक्षा कर रही थी. @narendramodi ji – Thank you Prime Minister. Thank you very much. I was waiting to see this day in my lifetime.
— Sushma Swaraj (@SushmaSwaraj) August 6, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.