ನವದೆಹಲಿ: ಮಾಜಿ ವಿದೇಶಾಂಗ ಸಚಿವೆ, ಅದ್ಭುತ ವಾಗ್ಮಿ, ಮಾದರಿ ರಾಜಕಾರಣಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಸುಷ್ಮಾ ಸ್ವರಾಜ್ ಅವರ ಅಗಲುವಿಕೆಗೆ ದೇಶ ದುಃಖತಪ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸುಷ್ಮಾ ಅಗಲುವಿಕೆಗೆ ಭಾವುಕರಾಗಿ ಸಂತಾಪ ಸೂಚಿಸಿದ್ದು, “ಭಾರತೀಯ ರಾಜಕಾರಣದ ಅದ್ಭುತ ಅಧ್ಯಾಯವೊಂದು ಕೊನೆಗೊಂಡಿದೆ” ಎಂದಿದ್ದಾರೆ.
“ಸಾರ್ವಜನಿಕ ಸೇವೆಗಾಗಿ ಮತ್ತು ಬಡವರ ಜೀವನವನ್ನು ಉತ್ತಮಗೊಳಿಸುವುದಕ್ಕಾಗಿ ಜೀವನವನ್ನು ಸಮರ್ಪಣೆ ಮಾಡಿದ್ದ ಅಪ್ರತಿಮ ನಾಯಕಿಯ ನಿಧನಕ್ಕೆ ಭಾರತ ದುಃಖಿಸುತ್ತಿದೆ. ಕೋಟ್ಯಂತರ ಜನರಿಗೆ ಸ್ಫೂರ್ತಿಯ ಮೂಲವಾಗಿರುವವರಲ್ಲಿ ಸುಷ್ಮಾ ಸ್ವರಾಜ್ ಕೂಡ ಒಬ್ಬರು” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
“ಒಬ್ಬ ಅತ್ಯುತ್ತಮ ಆಡಳಿತಗಾರ್ತಿಯಾಗಿದ್ದ ಸುಷ್ಮಾ ಅವರು ತಾವು ನಿರ್ವಹಿಸಿದ ಪ್ರತಿಯೊಂದು ಸಚಿವಾಲಯದಲ್ಲೂ ಉನ್ನತ ಗುಣಮಟ್ಟವನ್ನು ಕಾಪಾಡಿದ್ದಾರೆ. ವಿವಿಧ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧವನ್ನು ಉತ್ತಮಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸಚಿವೆಯಾಗಿ ಆಕೆಯ ಸಹಾನುಭೂತಿಯ ವ್ಯಕ್ತಿತ್ವವನ್ನು ನಾವು ನೋಡಿದ್ದೇವೆ, ವಿಶ್ವದ ಯಾವುದೇ ಭಾಗದಲ್ಲಿ ತೊಂದರೆಯಲ್ಲಿದ್ದ ಭಾರತೀಯರಿಗೆ ಸಹಾಯ ಹಸ್ತವನ್ನು ಅವರು ಚಾಚುತ್ತಿದ್ದರು ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
“ಅವರು ಪಕ್ಷವನ್ನೂ ಮೀರಿ ಮೆಚ್ಚಲ್ಪಟ್ಟವರು ಮತ್ತು ಪೂಜ್ಯರಾಗಿದ್ದವರು. ಬಿಜೆಪಿಯ ಸಿದ್ಧಾಂತ ಮತ್ತು ಹಿತಾಸಕ್ತಿಗಳ ವಿಷಯಕ್ಕೆ ಬಂದಾಗ ಅವರು ಎಂದಿಗೂ ರಾಜಿಯಾಗುತ್ತಿರಲಿಲ್ಲ, ಬಿಜೆಪಿ ಬೆಳವಣಿಗೆಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ “ಎಂದು ಪ್ರಧಾನಿ ಹೇಳಿದರು.
ನಿನ್ನೆ ರಾತ್ರಿ ಸುಷ್ಮಾ ಸ್ವರಾಜ್ ಅವರು ಹೃದಯಾಘಾತಕ್ಕೆ ಒಳಗಾಗಿ ಇಹಲೋಕವನ್ನು ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಇಂದು ದೆಹಲಿಯಲ್ಲಿನ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತಿದೆ. ಮೋದಿ ಸೇರಿದಂತೆ ಗಣ್ಯರು ಇಲ್ಲಿಗೆ ಆಗಮಿಸಿ ಅವರಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ. ಅಂತ್ಯಸಂಸ್ಕಾರ ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಮೋದಿ ಇದರಲ್ಲೂ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
A glorious chapter in Indian politics comes to an end. India grieves the demise of a remarkable leader who devoted her life to public service and bettering lives of the poor. Sushma Swaraj Ji was one of her kind, who was a source of inspiration for crores of people.
— Narendra Modi (@narendramodi) August 6, 2019
Sushma Ji was a prolific orator and outstanding Parliamentarian. She was admired and revered across party lines.
She was uncompromising when it came to matters of ideology and interests of the BJP, whose growth she immensely contributed to.
— Narendra Modi (@narendramodi) August 6, 2019
An excellent administrator, Sushma Ji set high standards in every Ministry she handled. She played a key role in bettering India’s ties with various nations. As a Minister we also saw her compassionate side, helping fellow Indians who were in distress in any part of the world.
— Narendra Modi (@narendramodi) August 6, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.