ನವದೆಹಲಿ: ಚಂದ್ರಯಾನ-2 ತೆಗೆದ ಭೂಮಿಯ ಐದು ಅತ್ಯದ್ಭುತವಾದ ಫೋಟೋಗಳನ್ನು ಇಸ್ರೋ ಬಿಡುಗಡೆ ಮಾಡಿದೆ. ಆಗಸ್ಟ್ 3ರಂದು ರಾತ್ರಿ 10.58 ಮತ್ತು 11.07ರ ನಡುವೆ ತೆಯಲ್ಪಟ್ಟ ಫೋಟೋಗಳು ಇವಾಗಿವೆ. ಜುಲೈ 22ರಂದು ಚಂದ್ರಯಾನ-2 ಅನ್ನು ಉಡಾವಣೆಗೊಳಿಸಲಾಗಿದ್ದು, ಇದು ಚಂದ್ರನ ಅಂಗಳಕ್ಕೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಶ್ವದ ನಾಲ್ಕೇ ನಾಲ್ಕು ದೇಶಗಳ ಸಾಲಿಗೆ ಭಾರತವನ್ನು ಸೇರಿಸಿದೆ.
“ಚಿತ್ರಗಳು ಸ್ಫಟಿಕ ಸ್ಪಷ್ಟವಾಗಿವೆ ಮತ್ತು ಬಾಹ್ಯಾಕಾಶ ನೌಕೆ ಸಂಪೂರ್ಣವಾಗಿ ಸಹಜವಾಗದೆ. ಇಲ್ಲಿಯವರೆಗಿನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಾನು ತುಂಬಾ ಸಂತೋಷ್ಟಗೊಂಡಿದ್ದೇನೆ. ಚಂದ್ರಯಾನ ನೌಕೆಯು 15 ಭಯಾನಕ ಕ್ಷಣಗಳನ್ನು ಹಾದು ಹೋಗುವ ಸಂದರ್ಭದಲ್ಲಿ ನಿರೀಕ್ಷಿಸಿಯಂತೆಯೇ ಕಾರ್ಯನಿರ್ವಹಿಸಲು ಸಮರ್ಥವಾಗಿದೆ ಎಂಬುದನ್ನು ಲ್ಯಾಂಡರ್ ತೆಗೆದ ಈ ಚಿತ್ರಗಳು ಸೂಚಿಸುತ್ತವೆ” ಎಂದು ಇಸ್ರೋ ಅಧ್ಯಕ್ಷ ಕೆ ಸಿವನ್ ಹೇಳಿದ್ದಾರೆ.
ಈ ಚಿತ್ರಗಳನ್ನು ಅಂದಾಜು 5,000 ಕಿಮೀ ದೂರದಿಂದ ಮತ್ತು ಲ್ಯಾಂಡರಿನಲ್ಲಿನ LI4 ಕ್ಯಾಮೆರಾದಿಂದ ತೆಗೆಯಲಾಗಿದೆ. ಈ ಚಿತ್ರವು ಪೆಸಿಫಿಕ್ ಓಶಿಯನ್ ಮತ್ತು ಅಮೆರಿಕಾ ಖಂಡದ ಭಾಗಗಳನ್ನು ಒಳಗೊಂಡಿವೆ.
“ಚಂದ್ರಯಾನ -2 ಬಾಹ್ಯಾಕಾಶ ನೌಕೆಗಾಗಿ ನಾಲ್ಕನೇ ಭೂಮಿಯ ಪರಿಭ್ರಮಣ-ಕುಶಲತೆಯನ್ನು ಇಂದು (ಆಗಸ್ಟ್ 2, 2019) 1527 ಗಂಟೆಗೆ (ಐಎಸ್ಟಿ) ಯೋಜಿಸಿದಂತೆ ಯಶಸ್ವಿಯಾಗಿ ನಿರ್ವಹಿಸಲಾಗಿದೆ, 646 ಸೆಕೆಂಡುಗಳ ಫೈರಿಂಗ್ ಅವಧಿಯ ಆನ್ಬೋರ್ಡ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಬಳಸಿಕೊಂಡು ಇದನ್ನು ಸಾಧಿಸಲಾಗಿದೆ . ಸಾಧಿಸಿದ ಕಕ್ಷೆಯು 277 x 89472 ಕಿ.ಮೀ. ಎಲ್ಲಾ ಬಾಹ್ಯಾಕಾಶ ನೌಕೆ ನಿಯತಾಂಕಗಳು ಸಾಮಾನ್ಯವಾಗಿದೆ” ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
#ISRO
First set of beautiful images of the Earth captured by #Chandrayaan2 #VikramLander
Earth as viewed by #Chandrayaan2 LI4 Camera on August 3, 2019 17:28 UT pic.twitter.com/pLIgHHfg8I— ISRO (@isro) August 4, 2019
#ISRO
Earth as viewed by #Chandrayaan2 LI4 Camera on August 3, 2019 17:29 UT pic.twitter.com/IsdzQtfMRv— ISRO (@isro) August 4, 2019
#ISRO
Earth as viewed by #Chandrayaan2 LI4 Camera on August 3, 2019 17:32 UT pic.twitter.com/KyqdCh5UHa— ISRO (@isro) August 4, 2019
#ISRO
Earth as viewed by #Chandrayaan2 LI4 Camera on August 3, 2019 17:34 UT pic.twitter.com/1XKiFCsOsR— ISRO (@isro) August 4, 2019
#ISRO
Earth as viewed by #Chandrayaan2 LI4 Camera on August 3, 2019 17:37 UT pic.twitter.com/8N7c8CROjy— ISRO (@isro) August 4, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.