ಭಾಗಪತ್: ಸ್ನೇಹಿತರೊಂದಿಗೆ ಸೇರಿ ಹರಿದ್ವಾರದ ‘ಕನ್ವರ್ ಯಾತ್ರೆ’ಗೆ ತೆರಳಿ ಪವಿತ್ರ ಗಂಗಾ ಜಲವನ್ನು ತಂದ ಮುಸ್ಲಿಂ ಯುವಕನೊಬ್ಬನನ್ನು ಆತನ ಸಮುದಾಯದವರು ಥಳಿಸಿ ದೌರ್ಜನ್ಯ ಎಸಗಿದ ಘಟನೆ ಉತ್ತರಪ್ರದೇಶದ ಭಾಗಪತ್ನಲ್ಲಿ ಜರುಗಿದೆ.
ಹರಿದ್ವಾರಕ್ಕೆ ತೆರಳಿ ಗಂಗಾ ಜಲವನ್ನು ತಂದಿದ್ದಕ್ಕೆ ನನ್ನ ಸಮುದಾಯದವರು ನನ್ನನ್ನು ತೀವ್ರವಾಗಿ ವಿರೋಧಿಸಿದರು ಮತ್ತು ಹಿಡಿದು ಥಳಿಸಿದರು ಎಂದು ಇರ್ಷಾದ್ ಹೇಳಿಕೊಂಡಿದ್ದಾರೆ. ಇವರು ಕೇಸರಿ ವಸ್ತ್ರವನ್ನು ಧರಿಸಿ ಕನ್ವರ್ ಯಾತ್ರೆಯಲ್ಲಿ ಪಾಲ್ಗೊಂಡಿರುವ ದೃಶ್ಯವೂ ವೈರಲ್ ಆಗಿದೆ. ತಮ್ಮ ಸ್ನೇಹಿತರ ಜೊತೆಗೆ ಇವರು ಯಾತ್ರೆಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇರ್ಷಾದ್, “ಹರಿದ್ವಾರಕ್ಕೆ ಜಲ ತರಲು ಹೋಗಿದ್ದೆ, ವಾಪಾಸ್ ಬಂದಾಗ ನನ್ನ ಸಮುದಾಯದ ಜನರ ನನಗೆ ಆಕ್ಷೇಪ ವ್ಯಕ್ತಪಡಿಸಿದರು. ನಾನು ಮಾಡುತ್ತಿರುವುದು ಧರ್ಮಕ್ಕೆ ವಿರುದ್ಧವಾದುದು ಎಂದರು. ಬಳಿಕ ನನ್ನ ಮೇಲೆ ಹಲ್ಲೆ ಮಾಡಿದರು’ ಎಂದು ಹೇಳಿಕೊಂಡಿದ್ದಾರೆ.
“ಸ್ನೇಹಿತರೊಂದಿಗೆ ಕನ್ವರ್ ಯಾತ್ರೆಗೆ ತೆರಳಿದೆ, ಅಲ್ಲಿಂದ ಗಂಗಾ ಜಲವನ್ನು ತಂದಿದ್ದೇನೆ” ಎಂದು ಇರ್ಷಾದ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರನ್ನು ಸ್ವೀಕರಿಸಲಾಗಿದ್ದು, ವಿಚಾರಣೆಯನ್ನು ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.