ನವದೆಹಲಿ: ಈ ವರ್ಷದ ಜುಲೈ ತಿಂಗಳು ಭಾರತದ ಪಾಲಿಗೆ ಅತ್ಯಂತ ಸಂತೋಷದಾಯಕ, ಪ್ರೇರಣಾದಾಯಕ ಮತ್ತು ಉತ್ತೇಜನದಾಯಕವಾಗಿತ್ತು. ಯಾಕೆಂದರೆ ಈ ಒಂದು ತಿಂಗಳಲ್ಲಿ ಭಾರತೀಯ ಕ್ರೀಡಾಪಟುಗಳು ಬರೋಬ್ಬರಿ 227 ಪದಕಗಳನ್ನು ತಮ್ಮ ದೇಶಕ್ಕಾಗಿ ಜಯಿಸಿದ್ದಾರೆ. 9 ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
ಭಾರತೀಯ ಕ್ರೀಡಾಪಟುಗಳಾದ ಹಿಮಾ ದಾಸ್, ದ್ಯುತಿ ಚಂದ್, ಅಂಜುಂ ಮುಡ್ಗಿಲ್, ಹರ್ಮನ್ ಪ್ರೀತ್ ದೇಸಾಯಿ, ಸಾಯಿ ಪ್ರಣೀತ್ ಮತ್ತು ಇತರ ಹಲವಾರು ಕ್ರೀಡಾಳುಗಳು ಭಾರತದ ಘನತೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತುಂಬಾ ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಪ್ರೆಸಿಡೆನ್ಸ್ ಕಪ್ನಲ್ಲಿ ಎಂಸಿ ಮೇರಿ ಕೋಮ್ ಚಿನ್ನ ಗೆದ್ದರೆ, ಯಸರ್ ಡೋಗು ಕ್ರೀಡಾಕೂಟದಲ್ಲಿ ವಿನೇಶ್ ಫೋಗಟ್ ಕೂಡ ಜಯಗಳಿಸಿದರು. ಎಲಾವೆನಿಲ್ ವಲರಿವಾನ್ ಅವರೊಂದಿಗೆ ತಬಾಬಿ ದೇವಿ, ಮೀರಾಬಾಯಿ ಚಾನು ಮತ್ತು ಮೆಹುಲಿ ಘೋಷ್ ಎಲ್ಲರೂ ಪದಕ್ಕಕೆ ಮುತ್ತಿಕ್ಕಿದ್ದಾರೆ.
ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಷಟ್ಲರ್ ಪಿ.ವಿ ಸಿಂಧು ಇಂಡೋನೇಷ್ಯಾ ಓಪನ್ನಲ್ಲಿ ರನ್ನರ್ ಅಪ್ ಸ್ಥಾನ ಪಡೆದರು. ಟೋಕಿಯೋ 2020 ಆರ್ಚರಿ ಟೆಸ್ಟ್ ಪಂದ್ಯಾವಳಿಯಲ್ಲಿ ದೀಪಿಕಾ ಕುಮಾರಿ ಬೆಳ್ಳಿ ಪದಕ ಗೆದ್ದರು.
ಅಥ್ಲೇಟಿಕ್ಸ್, ರಸ್ಲಿಂಗ್, ಜುಡೋ, ಟಿಟಿ, ಬ್ಯಾಡ್ಮಿಂಟನ್, ಶೂಟಿಂಗ್, ಪ್ಯಾರಶೂಟಿಂಗ್, ಆರ್ಚರಿ ಮತ್ತು ವೇಟ್ ಲಿಫ್ಟಿಂಗ್ ಕ್ರೀಡೆಗಳನ್ನು ಒಳಗೊಂಡು 9 ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತೀಯರು ಒಂದು ತಿಂಗಳಲ್ಲಿ 227 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇವರ ಈ ಸಾಧನೆ ನಿಜಕ್ಕೂ ಅವಿಸ್ಮರಣೀಯವಾಗಿದೆ.
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜ್ಜು ಅವರು, ಎಲ್ಲಾ ಪದಕ ಪುರಸ್ಕೃತ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.
July has been the month of medals for India. Our athletes won 227 medals in 9 disciplines at international events. India bagged medals in Athletics, Wrestling, Judo, TT, Badminton, Shooting, Parashooting, Archery & Weightlifting. @KirenRijiju Congratulates all the medallist.
— Kiren Rijiju Office (@RijijuOffice) August 2, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.