ನವದೆಹಲಿ: ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಹಾಕುತ್ತಿರುವ ಭಾರತೀಯ ರೈಲ್ವೆಯು, ದೆಹಲಿ ಮೆಟ್ರೊದಂತೆಯೇ ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಕೋಚ್ ಅನ್ನು ಪರಿಚಯಿಸಲು ಯೋಜಿಸಿದೆ. ಗುರುತಿಸುವಿಕೆಗಾಗಿ ಮಹಿಳಾ ಕೋಚುಗಳು ಗುಲಾಬಿ ಬ್ಯಾಂಡ್ ಹೊಂದಿರಲಿದೆ. ಪ್ರಸ್ತುತ, ಪ್ರತಿ ದೆಹಲಿ ಮೆಟ್ರೋ ರೈಲುಗಳಲ್ಲಿ ಒಂದು ಕೋಚು ಅನ್ನು ಮಹಿಳೆಯರಿಗಾಗಿ ಕಾಯ್ದಿರಿಸಲಾಗಿದೆ.
ಈ ಕೋಚ್ಗಳಲ್ಲಿ, ಮಹಿಳೆಯರು ಮಾತ್ರ ತಮ್ಮ ಪುಟ್ಟ ಮಕ್ಕಳೊಂದಿಗೆ ಪ್ರಯಾಣಿಸಬಹುದಾಗಿದೆ. ರೈಲ್ವೆಯ ನಾರ್ತ್-ಈಸ್ಟ್ ಫ್ರಾಂಟಿಯರ್ ಝೋನ್ (ಎನ್ಎಫ್ಆರ್ ) ರೈಲ್ವೆ ಈಗಾಗಲೇ ಇದನ್ನು ಪ್ರಾರಂಭಿಸಿದೆ. ಎನ್ಎಫ್ಆರ್ ಸುಮಾರು 6 ಪ್ಯಾಸೆಂಜರ್ ರೈಲುಗಳ ಎಸ್ಎಲ್ಆರ್ ಕೋಚ್ (ಗಾರ್ಡ್ಗೆ ಲಗತ್ತಿಸಲಾದ ಕೋಚ್)ಗಳನ್ನು ಗುಲಾಬಿ ಬಣ್ಣಕ್ಕೆ ಬದಲಾಯಿಸಿದೆ. ಈ ಬೋಗಿಗಳನ್ನು ಮಹಿಳೆಯರು ಮತ್ತು ಸಣ್ಣ ಮಕ್ಕಳಿಗೆ ಮಾತ್ರ ಮೀಸಲಿಡಲಾಗುತ್ತಿದೆ.
ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, “ಮಹಿಳೆಯರ ಸುರಕ್ಷತೆಗಾಗಿ, ಈಗ ಮೆಟ್ರೊದಂತೆಯೇ ರೈಲುಗಳಲ್ಲೂ ಹಲವು ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ, ಮಹಿಳೆಯರಿಗೆ ಮೀಸಲಾದ ಕೋಚುಗಳನ್ನು ರಚಿಸಲಾಗುತ್ತಿದೆ. ಇದರಲ್ಲಿ ಮಹಿಳೆಯರು ಏಕಾಂಗಿಯಾಗಿ ಅಥವಾ ಸಣ್ಣ ಮಕ್ಕಳೊಂದಿಗೆ ಪ್ರಯಾಣಿಸಬಹುದಾಗಿದೆ. ಅವುಗಳನ್ನು ನಾರ್ತ್ ಫ್ರಾಂಟಿಯರ್ ರೈಲ್ವೆಯಲ್ಲಿ ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಈ ಸೌಲಭ್ಯವನ್ನು ಇತರ ರೈಲುಗಳಲ್ಲಿ ಪ್ರಾರಂಭಿಸಲಾಗುವುದು” ಎಂದಿದ್ದಾರೆ.
महिलाओं की सुरक्षा के लिए अब मेट्रो की तरह ट्रेन में भी पिंक कोच लगाया जा रहा है, जिसमे महिलाएं अकेले या छोटे बच्चों के साथ यात्रा करेंगी।
इनकी शुरुआत नार्थ फ्रंटियर रेलवे द्वारा की जा चुकी है, शीघ्र ही यह सुविधा अन्य ट्रेनों में भी आरंभ की जाएगी।https://t.co/vxdqe0U2XT
— Piyush Goyal (@PiyushGoyal) July 31, 2019
ಗುವಾಹಟಿ, ನ್ಯೂ ಬೊಂಗೈಗಾಂವ್, ಅಸ್ಸಾಂ ಮತ್ತು ಮುರಕಾಂಗ್ಸೆಲೆಕ್ ನಗರಗಳ ಹೊರತಾಗಿ, 6 ರೈಲುಗಳಲ್ಲಿ ಈ ಗುಲಾಬಿ ಬೋಗಿಗಳಿವೆ. ಶೀಘ್ರದಲ್ಲೇ ಉಳಿದ ರೈಲುಗಳಲ್ಲಿಯೂ ಇದನ್ನು ಪ್ರಾರಂಭಿಸಲಾಗುವುದು ಎಂದು ರೈಲ್ವೇ ಹೇಳಿದೆ. ಮಹಿಳೆಯರು ಮತ್ತು ಸಣ್ಣ ಮಕ್ಕಳನ್ನು ಹೊರತುಪಡಿಸಿ ಇತರರು ಇದರೊಳಗೆ ಪ್ರವೇಶಿಸದಂತೆ ತಡೆಯಲು ಈ ಬೋಗಿಗಳಿಗೆರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಯ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.