ನವದೆಹಲಿ: ಪ್ರತಿ ಬಾರಿಯಂತೆ ಈ ಬಾರಿಯೂ ನವದೆಹಲಿಯಲ್ಲಿ ಆಗಸ್ಟ್ 13ರಂದು ಅಂತಾರಾಷ್ಟ್ರೀಯ ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ. ಮಾನವ ಸಂಬಂಧಗಳ ಮೌಲ್ಯವನ್ನು ಸಾರುವ ಈ ಹಬ್ಬವನ್ನು ಮಧ್ಯಾಹ್ನ 2 ಗಂಟೆಗೆ ಜಂತರ್ ಮಂತರ್ ಪ್ರದೇಶದ ಎನ್ಡಿಎಂಸಿ ಕನ್ವೆನ್ಷನ್ ಸೆಂಟರಿನಲ್ಲಿ ಆಚರಿಸಲಾಗುತ್ತಿದೆ.
ವಿಶ್ವ ಭ್ರಾತೃತ್ವ ಮತ್ತು ಶಾಂತಿಯ ಸಂದೇಶವನ್ನು ಹರಡಲು ಈ ಕಾರ್ಯಕ್ರಮದಲ್ಲಿ ಹಲವಾರು ಸಾಮಾಜಿಕ, ರಾಜಕೀಯ, ಧಾರ್ಮಿಕ ಮುಖ್ಯಸ್ಥರು, ಪರಿಸರವಾದಿಗಳು, ಚಲನಚಿತ್ರ ಕಲಾವಿದರು, ಸೈನಿಕರು, ಪತ್ರಕರ್ತರು, ಬರಹಗಾರರು, ದಿವ್ಯಾಂಗ ಜನರು ಮುಂತಾದವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಭಾರತ್-ಟಿಬೆಟ್ ಸಹಯೋಗ್ ಮಂಚ್ (ಬಿಟಿಎಸ್ಎಂ), ಹಿಮಾಲಯ ಪರಿವಾರ್, ಫೋರಂ ಫಾರ್ ಅವರ್ನೆಸ್ ಆಫ್ ನ್ಯಾಷನಲ್ ಸೆಕ್ಯೂರಿಟಿ (ಎಫ್ಎಎನ್ಎಸ್), ನೇಪಾಳಿ ಸಂಸ್ಕೃತಿ ಪರಿಷತ್, ಧರ್ಮ ಸಂಸ್ಕೃತ ಸಂಘನ್, ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್ಎಂ), ಕ್ರಿಶ್ಚಿಯನ್ ಸಂಘಟನೆಯಾದ ಇಸಾಯಿ ರಾಷ್ಟ್ರೀಯ ಮಂಚ್ ಜಂಟಿಯಾಗಿ ಆಯೋಜನೆಗೊಳಿಸುತ್ತಿದೆ. ಕಾರ್ಯಕ್ರಮವನ್ನು ಭವ್ಯವಾಗಿ ನಡೆಸುವ ಉದ್ದೇಶದಿಂದ ಈ ಎಲ್ಲಾ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ “ಅಂತಾರಾಷ್ಟ್ರೀಯ ರಕ್ಷಾಬಂಧನ್ ಉತ್ಸವ ಅಯೋಜನ್ ಸಮಿತಿ” ಎಂಬ ಸಂಘಟನೆಯನ್ನು ರಚಿಸಲಾಗಿದೆ.
ಪ್ರಸಿದ್ಧ ಚಿಂತಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಆರ್ಎಸ್ಎಸ್ ಪ್ರಚಾರಕರು ಮತ್ತು ಎಲ್ಲಾ ಸಂಸ್ಥೆಗಳ ಪೋಷಕರು ಮತ್ತು ಮಾರ್ಗದರ್ಶಿಗಳು ಜಂಟಿಯಾಗಿ ಈ ಉತ್ಸವವನ್ನು ಆಯೋಜಿಸುತ್ತಿದ್ದು, ಇಂದ್ರೇಶ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರತಿಜ್ಞಾ ವಿಧಿಯನ್ನು ಬೋಧಿಸಲಿದ್ದಾರೆ.
ಈ ಕಾರ್ಯಕ್ರಮವು ಹೆಣ್ಣು ಮಕ್ಕಳ ಭ್ರೂಣ ಹತ್ಯೆ, ವರದಕ್ಷಿಣೆ, ತ್ರಿವಳಿ ತಲಾಖ್, ಭ್ರಷ್ಟಾಚಾರ, ಭಯೋತ್ಪಾದನೆ, ಪ್ರತ್ಯೇಕತಾವಾದ, ಹಿಂಸೆ, ವ್ಯಸನ, ಕೋಮುವಾದ, ಜಾತಿ ಆಧಾರಿತ ತಾರತಮ್ಯ, ಮೂಢ ನಂಬಿಕೆ, ಮಹಿಳೆಯರಿಗೆ ಅವಮಾನ ಮತ್ತು ಜಾಗತಿಕ ತಾಪಮಾನ ಏರಿಕೆಯ ವಿಷಯಗಳ ಬಗ್ಗೆ ಜಾಗೃತಿ ಸಂದೇಶವನ್ನು ಹರಡಲಿದೆ.
ವಿಶ್ವ ಭ್ರಾತೃತ್ವ, ಶಾಂತಿ, ಸುರಕ್ಷತೆ ಮತ್ತು ಮಾನವರ ಮತ್ತು ಪ್ರಕೃತಿಯ ಕಲ್ಯಾಣದ ಸಂದೇಶವನ್ನು ನೀಡುವ ರಾಖಿಗಳನ್ನು ಈ ಕಾರ್ಯಕ್ರಮದಲ್ಲಿ ಪರಸ್ಪರ ಕಟ್ಟಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.