ಗುರುದೇವ್ ಎಂಬ ಅಂಕಿತ ನಾಮದಿಂದ ಪ್ರಸಿದ್ಧರಾಗಿರುವ ರವೀಂದ್ರನಾಥ ಠಾಗೋರ್ ಅವರ ಪುಣ್ಯತಿಥಿಯನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಅವರು 7 ಮೇ 1861 ರಂದು ಜನಿಸಿದರು. ಬಂಗಾಳಿ ಮಹಾ ವಿದ್ವಾಂಸ. ಕವಿಗಳಾಗಿ, ಕಾದಂಬರಿಕಾರರಾಗಿ, ಸಂಗೀತಕಾರರಾಗಿ ಮತ್ತು ನಾಟಕ ರಚಿಸುವ ಮೂಲಕ ಅವರು 19ನೆಯ ಶತಮಾನದ ಕೊನೆಯಲ್ಲಿ ಮತ್ತು 20ನೆಯ ಶತಮಾನದ ಆರಂಭದಲ್ಲಿ ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪ ಕೊಟ್ಟರು. ಸರಿಸುಮಾರು 2230ಕ್ಕಿಂತ ಕವನಗಳನ್ನು ರಚಿಸಿದ್ದಾರೆ. ಅವರು ರಚಿಸಿದ “ಸೂಕ್ಷ್ಮ ಸಂವೇದನೆಯ, ನವನವೀನವೂ ಮತ್ತು ಸುಂದರವೂ ಆದ ಪದ್ಯ” ಗೀತಾಂಜಲಿ ಕಾವ್ಯಕ್ಕೆ 1913 ರ ನೊಬೆಲ್ ಸಾಹಿತ್ಯ ಪ್ರಶಸ್ತಿ ದಕ್ಕಿತು. ಈ ಮೂಲಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಏಷ್ಯಾದ ಮೊದಲಿಗರು ಎಂಬ ಗೌರವಕ್ಕೆ ಪಾತ್ರರಾದರು. ಕೊಲ್ಕೊತ್ತಾದ ಪಿರಾಲಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಟಾಗೋರ್ ಅವರು ತಮ್ಮ ಎಂಟನೆಯ ವಯಸ್ಸಿನಲ್ಲಿ ಪದ್ಯ ರಚನೆ ಆರಂಭಿಸಿದರು. ಹದಿನಾರನೇಯ ವಯಸ್ಸಿನಲ್ಲಿ ಅವರು ಭಾನುಶಿಂಘೊ ‘ಸೂರ್ಯ ಸಿಂಹ’ ಎಂಬ ಗುಪ್ತನಾಮದಡಿ ಮೊದಲ ಮಹತ್ವದ ಕವನವನ್ನು ಪ್ರಕಟಿಸಿದರು ಮತ್ತು ಅವರು ಮೊದಲು ಸಣ್ಣ ಕಥೆಗಳು ಮತ್ತು ನಾಟಕಗಳನ್ನು 1877 ರಲ್ಲಿ ಬರೆದರು. ಬ್ರಿಟಿಷ್ ಆಡಳಿತವನ್ನು ಬಹಿರಂಗವಾಗಿ ಖಂಡಿಸಿದ ಟಾಗೋರ್ ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದರು. ಅವರು ಜಗತ್ತಿಗೆ ನೀಡಿದ ಬಹುದೊಡ್ಡ ಗ್ರಂಥಮಾಲೆ ಮತ್ತು ಅವರು ಸ್ಥಾಪಿಸಿದ ಸಂಸ್ಥೆ ವಿಶ್ವ-ಭಾರತಿ ವಿಶ್ವಾವಿದ್ಯಾ ನಿಲಯ-ಇವು ಅವರ ಪ್ರಮುಖ ಕೊಡುಗೆ. ಭಾರತೀಯ ಸಾಂಪ್ರದಾಯಕ ಶಾಸ್ತ್ರೀಯ ಕಠೋರತೆಯ ಚೌಕಟ್ಟಿನಿಂದ ಹೊರ ಬಂದ ಟಾಗೋರ್ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದರು. ಅವರ ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು, ನೃತ್ಯ-ನಾಟಕಗಳು, ಮತ್ತು ಪ್ರಬಂಧಗಳು ರಾಜಕೀಯ ಮತ್ತು ವೈಯಕ್ತಿಕ ವಿಷಯಗಳನ್ನೆಲ್ಲಾ ಅನುರಣಿಸಿವೆ. ಗೀತಾಂಜಲಿ (ಗೀತೆಗಳು), ಗೋರ (ಸುಂದರ ಮುಖಿ) ಮತ್ತು ಘರೇ ಬೈರೆ (ಮನೆ ಮತ್ತು ಪ್ರಪಂಚ) ಇವರ ಹಸರಾಂತ ಕೃತಿಗಳು. ಅವರು ರಚಿಸಿದ ಕವನಗಳು, ಸಣ್ಣ ಕಥೆಗಳು, ಮತ್ತು ಕಾದಂಬರಿಗಳು ಅವುಗಳ ಸಾಹಿತ್ಯಕ್ಕೆ, ಆಡುಮಾತಿನ ಪ್ರಯೋಗಕ್ಕೆ, ವಿಚಾರಶೀಲ ವಾಸ್ತವಿಕತೆಗೆ, ಮತ್ತು ತತ್ವಶಾಸ್ತ್ರದ ಅವಲೋಕನಕ್ಕೆ ಪ್ರಶಂಸನೀಯವಾಗಿವೆ. ಟಾಗೋರ್ ರಚಿಸಿದ ಎರಡು ಗೀತೆಗಳಿಗೆ ರಾಷ್ಟ್ರ ಮನ್ನಣೆ ಸಿಕ್ಕಿದೆ. ‘ಜನ ಗಣ ಮನ’ ಭಾರತದ ರಾಷ್ಟ್ರ ಗೀತೆಯಾಗಿದೆ.
1901 ರಲ್ಲಿ ಟಾಗೋರ್ ಶಿಲೈದಾಹವನ್ನು ಬಿಟ್ಟು ಶಾಂತಿನಿಕೇತನಕ್ಕೆ ಬಂದರು. ಅಲ್ಲೊಂದು ಆಶ್ರಮ ಸ್ಥಾಪಿಸಿದರು. ಅಮೃತ ಶಿಲೆಯ ನೆಲದ ಪ್ರಾರ್ಥನಾ ಮಂದಿರ ಅಲ್ಲಿ ತಲೆ ಎತ್ತಿತು. ಗಿಡ ಮರಗಳ ತೋಪು, ಉದ್ಯಾನ, ಗ್ರಂಥಾಲಯ ಜೊತೆಗೊಂದು ಪ್ರಾಯೋಗಿಕ ಶಾಲೆ-ಇವೆಲ್ಲ ಸಿದ್ಧವಾದವು. ಟಾಗೋರ್ರ ಪತ್ನಿ ಮತ್ತು ಇಬ್ಬರು ಮಕ್ಕಳು ಇಲ್ಲಿ ಕೊನೆಯುಸಿರೆಳೆದರು. 1905 ರ ಜನವರಿ 16 ರಂದು ಅವರ ತಂದೆ ವಿಧಿವಶರಾದರು. ಪಿತ್ರಾರ್ಜಿತವಾಗಿ ಇವರಿಗೆ ಸಂದಾಯ ವಾಗಬೇಕಿದ್ದನ್ನು ಪ್ರತಿ ತಿಂಗಳೂ ಅವರು ಪಡೆಯಲಾರಂಭಿಸಿದರು. ತ್ರಿಪುರದ ಮಹಾರಾಜನಿಂದ ಒಂದಷ್ಟು ಹಣ ಪಡೆದರು. ಕುಟುಂಬದ ಆಭರಣಗಳ ಮಾರಾಟದಿಂದ ಸ್ವಲ್ಪ ಬಂತು, ಪುರಿಯಲ್ಲಿನ ಸುಮುದ್ರತೀರದ ಬಂಗಲೆಯಿಂದ ಇನ್ನಷ್ಟು ಕೈ ಸೇರಿತು, ಇಷ್ಟಲ್ಲದೆ ಅವರ ಬರಹಗಳಿಗೆ ಸಿಕ್ಕಿದ ಸಾಧಾರಣ ರಾಯ ಧನಗಳಿಂದ (ರೂ. 2,000) ಸಿಗುತ್ತಿದ್ದುದು ಅವರ ಮತ್ತೊಂದು ಆದಾಯ ಮೂಲವಾಯಿತು. ಈ ಹೊತ್ತಿಗೆ ಅವರ ಬರಹಗಳು ಅವರಿಗೆ ಹೆಚ್ಚಿನ ಬಂಗಾಳಿ ಅಭಿಮಾನಿಗಳನ್ನು ಮತ್ತು ವಿದೇಶಿ ಓದುಗರನ್ನು ತಂದು ಕೊಟ್ಟಿತು. ನೈವೇದ್ಯ (1901) ಮತ್ತು ಖೇಯ (1906) ಪುಸ್ತಕಗಳನ್ನು ಪ್ರಕಟಿಸಿದರು. ಇದೇ ಸಮಯದಲ್ಲಿ ಅವರು ತಮ್ಮ ಗೀತೆಗಳನ್ನು ಮುಕ್ತ ಛಂದಸ್ಸಿನ ಪದ್ಯಗಳನ್ನಾಗಿ ಅನುವಾದಿಸುವ ಕಾಯಕದಲ್ಲಿ ತೊಡಗಿದರು. 1913 ರ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ತಮ್ಮ ಪಾಲಿಗೆ ಸಂದಿದ್ದು ಟಾಗೋರ್ಗೆ 1913 ರ ನವೆಂಬರ್ 14 ರಂದು ಗೊತ್ತಾಯಿತು. ಗೀತಾಂಜಲಿ: ಪದ್ಯಾರ್ಪಣೆಗಳು ಹಾಗೂ ಇನ್ನಿತರ ಅವರ ಅನುವಾದಿತ ಸಾಹಿತ್ಯ ಪಾಶ್ಚಾತ್ಯ ಓದುಗರಿಗೆ ಸಣ್ಣ ಪ್ರಮಾಣದಲ್ಲಿ ದೊರೆಯುವಂತಾದದ್ದನ್ನು ಹಾಗೂ ಅದರ ಆದರ್ಶವಾದವನ್ನು ಸ್ವೀಡಿಶ್ ಅಕಾಡೆಮಿ ಮೆಚ್ಚಿಕೊಂಡಿತು. ೧೯೧೫ರಲ್ಲಿ ಬ್ರಿಟಿಷ್ ಚಕ್ರಾಧಿಪತ್ಯ ಟಾಗೋರ್ಗೆ ನೈಟ್ ಬಿರುದನ್ನು ನೀಡಿ ಗೌರವಿಸಿತು. ಟಾಗೋರ್ ಮತ್ತು ಕೃಷಿ ಅರ್ಥಶಾಸ್ತ್ರಜ್ಞ ಲಿಯೊನಾರ್ಡ್ ಎಲ್ಮಿರ್ಸ್ಟೆ ಸೇರಿಕೊಂಡು ಶಾಂತಿನಿಕೇತನದ ಆಶ್ರಮದ ಹತ್ತಿರದ ಹಳ್ಳಿ ಸುರುಲ್ನಲ್ಲಿ 1921 ರಲ್ಲಿ ಗ್ರಾಮೀಣ ಪುನರುತ್ಥಾನಕ್ಕಾಗಿ ಸಂಸ್ಥೆಯೊಂದನ್ನು (ಟಾಗೋರ್ ಇದಕ್ಕೆ ಶ್ರೀನಿಕೇತನ-‘ಸಂಪತ್ತಿನ ನೆಲೆ’ ಎಂದು ಮರು ಹೆಸರಿಸಿದರು) ಪ್ರಾರಂಭಿಸಿದರು. ಗಾಂಧಿ ನೇತೃತ್ವದ ಸ್ವರಾಜ್ ಚಳವಳಿಗೆ ಬೆಂಬಲ ನೀಡಿದರು. ‘ಅಸಹಾಯಕತೆ ಮತ್ತು ಅಜ್ಞಾನದ ತೊಳಲಾಟದಿಂದ ನರಳುತ್ತಿರುವ ಹಳ್ಳಿಗಳನ್ನು’ ‘ಜ್ಞಾನಾಭಿವೃದ್ಧಿ’ಯಿಂದ ಮುಕ್ತ ವಾಗಿಸುವ, ಮತ್ತು ಇದಕ್ಕಾಗಿ ಸಂಸ್ಥೆಗೆ ನೆರವಾಗುವ ಉದ್ದೇಶದಿಂದ ವಿದ್ವಾಂಸರು, ದಾನಿಗಳು ಮತ್ತು ಅಧಿಕಾರಿಗಳನ್ನು ಬೇರೆ ಬೇರೆ ರಾಷ್ಟ್ರಗಳಿಂದ ನಿಯೋಜಿಸಿದರು. ಭಾರತದ ‘ಜಾತಿ ಪದ್ಧತಿಯ ಕಾಠಿಣ್ಯ’ ಮತ್ತು ಅಸ್ಪೃಶ್ಯತೆಯ ಆಚರಣೆಯನ್ನು 1930 ರ ಆರಂಭದಲ್ಲಿ ಅವರು ಖಂಡಿಸಿದರು. ಈ ಎಲ್ಲ ಅನಿಷ್ಟಗಳ ವಿರುದ್ಧ ದನಿ ಎತ್ತಿದರು, ನಾಟಕ ಮತ್ತು ಕವನಗಳನ್ನು ರಚಿಸಿದರು, ಯಶಸ್ವೀ ಆಂದೋಲನದ ಮೂಲಕ ಗುರುವಾಯೂರ್ ದೇವಾಲಯವನ್ನು ದಲಿತರ ಪ್ರವೇಶಕ್ಕಾಗಿ ಮುಕ್ತಗೊಳಿಸಿದರು.
ಕಾವ್ಯಕ್ಕೆ ಹೆಸರುವಾಸಿಯಾದರೂ, ಟಾಗೋರ್ ಕಾದಂಬರಿಗಳು, ಪ್ರಬಂಧಗಳು, ಸಣ್ಣ ಕಥೆಗಳು, ಪ್ರವಾಸ ಕಥನಗಳು, ನಾಟಕಗಳು, ಮತ್ತು ಸಾವಿರಾರು ಗೀತೆಗಳನ್ನೂ ರಚಿಸಿದ್ದಾರೆ. ಗದ್ಯ ಪ್ರಕಾರದಲ್ಲಿ ಟಾಗೋರ್ರ ಕಿರು ಕಥೆಗಳು ಅತ್ಯುತ್ಕೃಷ್ಟ ಎನಿಸಿವೆ. ಬೆಂಗಾಲಿ ಭಾಷೆಯ ಹೊಸ ಶೈಲಿಯ ಜನಕ ಎಂಬ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಲಯಬದ್ಧತೆ, ಆಶಾವಾದ, ಮತ್ತು ಗೇಯ ಗುಣದಿಂದಾಗಿ ಅವರ ಬರಹಗಳು ಗುರುತಿಸಲ್ಪಟ್ಟಿವೆ. ಜನ ಸಾಮಾನ್ಯರ ಜೀವನದ ಸುಲಭ ಸರಳ ವಿಷಯಗಳಿಂದ ಅವರ ಕಿರುಕಥೆಗಳ ಹಂದರ ನಿರ್ಮಿಸಲಾಗಿದೆ.
ಟಾಗೋರ್ ನಾಟಕ ಶೈಲಿಗಳ ಮತ್ತು ಭಾವನೆಗಳ ವಿಸ್ತಾರವನ್ನು ಅತ್ಯುತ್ಸಾಹದಿಂದ ಹೆಚ್ಚಿಸಿದರು ಹಾಗೂ ಪರಿಷ್ಕರಿಸಿದ ಕೀರ್ತನೆಗಳ ಬಳಕೆ ಮತ್ತು ಸಾಂಪ್ರದಾಯಿಕ ಇಂಗ್ಲೀಷ್ ಮತ್ತು ಐರಿಷ್ ಜಾನಪದ ಮಧುರ ಗೀತಗಳನ್ನು ಕುಡಿತದ ಹಾಡುಗಳಾಗಿ ಪರಿವರ್ತಿಸಿದರು.
ತಿರುಳಿರುವ ಯೋಚನೆಯನ್ನು ಕೇಂದ್ರೀಕರಿಸಿದ ಸಾಹಿತ್ಯದ ಹರಿವು ಮತ್ತು ಭಾವನಾತ್ಮಕ ಲಯಗಳನ್ನು ಹೊಂದಿದ್ದ ಅವರ ಸಾಧನೆಗಳು ಹಿಂದಿನ ಬಂಗಾಳಿ ನಾಟಕಗಳಿಗಿಂತ ಭಿನ್ನ. ಅವರ ಸಾಧನೆಗಳನ್ನು ಟಾಗೋರ್ ಮಾತುಗಳಲ್ಲಿ ಹೇಳುವುದಾದರೆ ‘ಭಾವನೆಗಳಿಂದ ತುಂಬಿರುವ ಅಭಿನಯವಿಲ್ಲದ ನಾಟಕ’ವನ್ನು ಸುಸಂಬದ್ಧವಾಗಿ ನಡೆಸಲು ಮಾಡಿದ ಪ್ರಯತ್ನ. 1890 ರಲ್ಲಿ ಅವರು ವಿಸರ್ಜನ್ (ತ್ಯಾಗ)ವನ್ನು ಬರೆದರು, ಅದು ಅವರ ಅತ್ಯುತ್ತಮ ನಾಟಕ. ಬಂಗಾಳಿ-ಭಾಷೆಯು ಆದಿಕಾಲದಲ್ಲಿ ಸಂಕೀರ್ಣ ಕಥಾವಸ್ತು ಹೊಂದಿದ್ದ ಮತ್ತು ವಿಸ್ತಾರ ಏಕ ಪಾತ್ರಾಭಿನಯವನ್ನು ನಾಟಕ ಒಳಗೊಂಡಿರುತ್ತಿತ್ತು. ನಂತರದ ಅವರ ನಾಟಕಗಳು ಹೆಚ್ಚು ತತ್ವಶಾಸ್ತ್ರದ ಮತ್ತು ಗೂಢಾರ್ಥದ ವಿಷಯಗಳನ್ನು ಒಳಹೊಕ್ಕು ನೋಡಿದವು; ಇವುಗಳಲ್ಲಿ ಡಾಕ್ ಘರ್ ಕೂಡಾ ಒಂದು. ಟಾಗೋರ್ರವರ ಮತ್ತೊಂದು ನಾಟಕ ಚಂಡಾಲಿಕಾ (ಅಸ್ಪೃಶ್ಯ ಹುಡುಗಿ). ಅದು ಗೌತಮ ಬುದ್ಧನ ಅನುಯಾಯಿ ಆನಂದನು ಆದಿವಾಸಿ ಹುಡುಗಿಯಿಂದ ಹೇಗೆ ನೀರನ್ನು ಕೇಳುತ್ತಾನೆ ಎಂಬುದನ್ನು ವಿವರಿಸುವ ಪುರಾತನ ಬೌದ್ಧ ಕಥೆಯ ನಿರೂಪಣೆಯನ್ನು ಹೊಂದಿದೆ. ಕೊನೆಯದಾಗಿ, ಅವರ ಹೆಚ್ಚು ಜನಪ್ರಿಯ ನಾಟಕಗಳಲ್ಲಿ ಒಂದಾದ ರಕ್ತಕಾರವಿಯು (ಕೆಂಪು ಕರವೀರಗಳು) ದರೋಡೆಕೋರ ರಾಜನು ಅವನ ಪ್ರಜೆಗಳಿಗೆ ಗಣಿ ಅಗೆಯುವ ಕೆಲಸಗಳನ್ನು ಹೇರುತ್ತಾ ತಾನು ಶ್ರೀಮಂತನಾದುದನ್ನು ವಿವರಿಸುತ್ತದೆ.ನಾಯಕಿ ನಂದಿನಿಯು ದಾಸ್ಯಕ್ಕೆ ಗುರಿಮಾಡುವಿಕೆಯ ಈ ಕುರುಹುಗಳನ್ನು ನಾಶಪಡಿಸಲು ಅಂತಿಮವಾಗಿ ಸಾಮಾನ್ಯ ಜನರನ್ನು ಒಟ್ಟಗೂಡಿಸುತ್ತಾಳೆ. ಟಾಗೋರ್ರವರ ಇತರ ನಾಟಕಗಳು ಇವು -ಚಿತ್ರಾಂಗದ, ರಾಜ, ಮತ್ತು ಮಾಯರ್ ಖೇಲ. ಟಾಗೋರ್ರವರ ನಾಟಕಗಳನ್ನು ಆಧಾರಿತ ನೃತ್ಯ ನಾಟಕಗಳನ್ನು ಸಾಮಾನ್ಯವಾಗಿ ರವೀಂದ್ರ ನೃತ್ಯ ನಾಟ್ಯಗಳು ಎಂದು ಕರೆಯುತ್ತಾರೆ.
ಬ್ರಿಟಿಷ್ ಆಡಳಿತವನ್ನು ಬಹಿರಂಗವಾಗಿ ಖಂಡಿಸಿದ ಟಾಗೋರ್ ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದರು. ಅವರು ಜಗತ್ತಿಗೆ ನೀಡಿದ ಬಹುದೊಡ್ಡ ಗ್ರಂಥಮಾಲೆ ಮತ್ತು ಅವರು ಸ್ಥಾಪಿಸಿದ ಸಂಸ್ಥೆ ವಿಶ್ವ-ಭಾರತಿ ವಿಶ್ವಾವಿದ್ಯಾ ನಿಲಯ-ಇವು ಅವರ ಪ್ರಮುಖ ಕೊಡುಗೆ. ಭಾರತೀಯ ಸಾಂಪ್ರದಾಯಕ ಶಾಸ್ತ್ರೀಯ ಕಠೋರತೆಯ ಚೌಕಟ್ಟಿನಿಂದ ಹೊರ ಬಂದ ಟಾಗೋರ್ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದರು.
ಎರಡು ವರ್ಷಗಳ ಕಾಲ ದೀರ್ಘ ಕಾಲೀನ ಅಸ್ವಸ್ಥತೆಯಿಂದ ನರಳಿದ ಠಾಗೋರ್ ತಾವು ಬೆಳೆದ ಜೊರಸಂಕೊ ಭವನದ ಮೇಲ್ಮಹಡಿಯಲ್ಲಿ 1941 ರ ಆಗಸ್ಟ್ 7 ರಂದು ಕೊನೆಯುಸಿರೆಳೆದರು.
✍ ವಿ. ರಾಜ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.