ನವದೆಹಲಿ: ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳುವ ಸಲುವಾಗಿ ಥಾಯ್ಲೆಂಡ್ ಪ್ರಸ್ತುತ ಭಾರತದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಾತುಕತೆ ಕಾರ್ಯರೂಪಕ್ಕೆ ಬಂದರೆ, ಭಾರತವು ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ರಫ್ತು ಮಾಡಲಿದೆ.
ಕೆಲ ಸಮಯಗಳಿಂದ ಥಾಯ್ಲೆಂಡ್ ಈ ಕ್ಷಿಪಣಿಗಳ ಬಗ್ಗೆ ತೀವ್ರ ಆಸಕ್ತಿಯನ್ನು ತೋರಿಸುತ್ತಿದೆ, ಥಾಯ್ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ರುಡ್ಡಿಟ್ ಅವರ ಭೇಟಿಯ ನಂತರ ಉಭಯ ದೇಶಗಳ ನಡುವಣ ಈ ಬಗೆಗಿನ ಚರ್ಚೆ 2018 ರ ಡಿಸೆಂಬರ್ನಿಂದ ವೇಗವನ್ನು ಪಡೆದುಕೊಂಡಿವೆ. ಮುಂದಿನ ವರ್ಷ ಮಾತುಕತೆ ಫಲಪ್ರದವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ಈ ಹಿಂದೆಯೂ ಇತರ ಕೆಲವು ದೇಶಗಳು ಬ್ರಹ್ಮೋಸ್ ಕ್ಷಿಪಣಿಯ ಬಗ್ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದವು ಆದರೆ ಇನ್ನೂ ಈ ಬಗ್ಗೆ ಅಂತಿಮ ನಿರ್ಧಾರಗಳು ಕಾರ್ಯರೂಪಕ್ಕೆ ಬಂದಿಲ್ಲ.
ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿ ಮಾಡುವುದರ ಜೊತೆಗೆ, ಥಾಯ್ಲೆಂಡ್ ತನ್ನ ಡಾರ್ನಿಯರ್ ಪೆಟ್ರೋಲ್ ಏರ್ಕ್ರಾಫ್ಟ್ನ ದುರಸ್ತಿ ಮತ್ತು ನವೀಕರಣಕ್ಕೂ ಭಾರತದ ಸಹಾಯವನ್ನು ಕೋರಿದೆ. ಹೆಚ್ಚಿನ ನೌಕಾ ಹಡಗುಗಳನ್ನು ಹೊಂದಲು ಪ್ರಯತ್ನಿಸುತ್ತಿರುವ ಥಾಯ್ಲೆಂಡ್ ಹಡಗು ವಿನ್ಯಾಸದಲ್ಲಿ ಭಾರತೀಯ ನೌಕಾಪಡೆಯು ಸಹಾಯವನ್ನು ಪಡೆಯಲು ಬಯಸುತ್ತಿದೆ ಮತ್ತು ಭಾರತದ ವಿವಿಧ ಶಿಪ್ಯಾರ್ಡ್ಗಳಲ್ಲಿ ಅದನ್ನು ನಿರ್ಮಿಸಲು ಸಹಾಯ ಕೇಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.