ನವದೆಹಲಿ: ಸಾಧಿಸುವ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಎತ್ತರದ ಗುರಿ ಸಾಧಿಸಿರುವ ಭಾರತೀಯ ಸೇನಾಪಡೆಗಳು ಜನಸಾಮಾನ್ಯರಿಗೆ ಒಂದು ದೊಡ್ಡ ಪ್ರೇರಣಾಶಕ್ತಿಯಾಗಿವೆ. ಸೈನಿಕರ ಉತ್ಸಾಹಭರಿತ ಮತ್ತು ಸ್ಪೂರ್ತಿದಾಯಕ ಉದಾಹರಣೆಗಳಿಗೆ ಹೊಸ ಸೇರ್ಪಡೆ ವಿಂಗ್ ಕಮಾಂಡರ್ ತರುಣ್ ಚೌಧರಿ. ವಿಂಗ್ ಸೂಟ್ ಸ್ಕೈಡೈವ್ ಜಂಪ್ ಮಾಡಿದ ಭಾರತೀಯ ಸೇನಾಡಪೆಯ ಮೊದಲ ಪೈಲಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ
ಸೇನೆಯ ಮಿ -17 ಹೆಲಿಕಾಪ್ಟರ್ನಿಂದ 8500 ಅಡಿ ಎತ್ತರದಿಂದ ವಿಂಗ್ ಸೂಟ್ ಸ್ಕೈಡೈವ್ ಜಂಪ್ ಮಾಡುವ ಮೂಲಕ ಚೌಧರಿ ಇತಿಹಾಸ ನಿರ್ಮಾಣ ಮಾಡಿದ್ದಾರೆ.
ಜನಸಮೂಹದ ಮುಂದೆ ಮಾಡಿದ ಮೊದಲ ಫ್ಲೈಯಿಂಗ್ ವಿಂಗ್ ಸೂಟ್ ಸ್ಕೈಡೈವ್ ಜಂಪ್ ಪ್ರದರ್ಶನವಾಗಿದೆ. ಜುಲೈ 21-22ರಂದು ಜೋಧಪುರದ ವಾಯುಪಡೆಯ ನಿಲ್ದಾಣದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಸಂದರ್ಭದಲ್ಲಿ ಈ ಜಂಪ್ ಮಾಡಲಾಗಿದೆ. ತಾನು ಕ್ಯಾಪ್ಟನ್ ಆಗಿ ಚಲಾಯಿಸುವ ಯುದ್ಧ ಹೆಲಿಕಾಪ್ಟರ್ ಮೂಲಕ ಸ್ಕೈಡೈವ್ ಮಾಡಿದ ಭಾರತೀಯ ವಾಯುಪಡೆಯ ಮೊದಲ ಯೋಧ ಎಂಬ ಹೆಗ್ಗಳಿಕೆ ಇವರದ್ದಾಗಿದೆ ಎಂದು ಟ್ವೀಟ್ ಮೂಲಕ ಭಾರತೀಯ ವಾಯುಸೇನೆ ತಿಳಿಸಿದೆ.
ಟ್ವಿಟ್ ಮಾಡಿರುವ ವಾಯುಸೇನೆ, “ಜುಲೈ 21 ರಂದು ವಿಂಗ್ಸೂಟ್ ಸ್ಕೈಡೈವ್ ಜಂಪ್ ಮಾಡುವ ಮೂಲಕ ವಿಂಗ್ ಕಮಾಂಡರ್ ತರುಣ್ ಚೌಧರಿ ಎಸ್ಸಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಾರೆ” ಎಂದಿದೆ.
“ಈ ಸಾಧನೆ ಭಾರತೀಯ ವಾಯುಪಡೆಯ ಗುಣಲಕ್ಷಣಗಳು ಮತ್ತು ವೃತ್ತಿಪರತೆ ಹಿಡಿದ ಕೈಗನ್ನಡಿ. ಅದು ಯಾವುದೇ ಕಾರ್ಯಾಚರಣೆಯಾಗಿರಲಿ ಅಥವಾ ಸಾಹಸ ಪ್ರದರ್ಶನವೇ ಆಗಿರಲಿ ಎಲ್ಲರಿಗಿಂತಲೂ ಮಿಗಿಲಾದ ಪ್ರದರ್ಶನ ನೀಡುವುದು ವಾಯುಪಡೆಯ ಗುಣ. ಇಂಥ ಸಾಧನೆ ಮಾಡಿದ್ದಕ್ಕಾಗಿ ಅಭಿನಂದನೆಗಳು ಮತ್ತು ಇನ್ನಷ್ಟು ಉನ್ನತ ಸಾಧನೆ ಮಾಡಿ” ಎಂದು ಹೇಳಿದೆ.
Chronicles of IAF Adventure: Wg Cdr Tarun Chaudhri SC achieved a milestone by accomplishing WINGSUIT SKYDIVE JUMP on 21 July 19. This is the First IAF Wing Suit Skydive Jump by a pilot who has flown and captained the same type of helicopter.
— Indian Air Force (@IAF_MCC) July 30, 2019
Chronicles of IAF Adventure: Wg Cdr Tarun Chaudhri SC achieved a milestone by accomplishing WINGSUIT SKYDIVE JUMP on 21 July 19. This is the First IAF Wing Suit Skydive Jump by a pilot who has flown and captained the same type of helicopter.
— Indian Air Force (@IAF_MCC) July 30, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.