ಬೆಂಗಳೂರು: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ (ವಿಐಟಿಎಂ)ನಲ್ಲಿ ಸೋಮವಾರ ‘ವಿಜ್ಞಾನ ಸಮಾಗಮ್’ ಮೆಗಾ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಾಗಿದೆ. ವಿಜ್ಞಾನ ಉತ್ಸಾಹಿಗಳು ಮತ್ತು ಶಾಲಾ ಮಕ್ಕಳು ಬಹುಸಂಖ್ಯೆಯ ಆಗಮಿಸಿ ವಿಜ್ಞಾನಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಈ ವಿಜ್ಞಾನ ಪ್ರದರ್ಶನ ಜರುಗಲಿದೆ.
11 ತಿಂಗಳುಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ‘ವಿಜ್ಞಾನ ಸಮಾಗಮ್’ ನಡೆಯಲಿದ್ದು, 2019ರ ಮೇ ತಿಂಗಳಲ್ಲಿ ಮುಂಬಯಿಯಲ್ಲಿ ಇದಕ್ಕೆ ಚಾಲನೆಯನ್ನು ನೀಡಲಾಗಿತ್ತು. ಇದೀಗ ಅಲ್ಲಿಂದ ಬೆಂಗಳೂರಿಗೆ ಬಂದಿದೆ. ಸೆಪ್ಟೆಂಬರ್ 28ರವರೆಗೆ ವಿಐಟಿಎಂನಲ್ಲಿ ನಡೆಯಲಿದೆ. ಈ ಪ್ರದರ್ಶನವು ಪೋಸ್ಟರ್ಗಳು, ಕ್ರಿಯಾ ಮಾದರಿಗಳು, ಪ್ರದರ್ಶನಗಳು, ಮಾಹಿತಿಯುಳ್ಳ ಆಡಿಯೊ-ದೃಶ್ಯ, ಎಲೆಕ್ಟ್ರಾನಿಕ್ ಪ್ರದರ್ಶನಗಳು ಮತ್ತು ಸಂವಾದಾತ್ಮಕ ಕಿಯೋಸ್ಕ್ ಮುಂತಾದ ಥೀಮ್ ಆಧಾರಿತ ಗ್ಯಾಲರಿಗಳನ್ನು ಹೊಂದಿದೆ.
‘ವಿಜ್ಞಾನ ಸಮಾಗಮ್’ ಪ್ರದರ್ಶನವನ್ನು ಡಿಪಾರ್ಟ್ಮೆಂಟ್ ಆಫ್ ಅಟೋಮಿಕ್ ಎನರ್ಜಿ (ಡಿಎಇ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ), ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ತು (ಎನ್ಸಿಎಸ್ಎಂ) ಮತ್ತು ಸಂಸ್ಕೃತಿ ಸಚಿವಾಲಯ ಜಂಟಿಯಾಗಿ ಆಯೋಜನೆಗೊಳಿಸುತ್ತಿದೆ.
ಈ ಪ್ರದರ್ಶನವು ಜಾಗತಿಕ ಸಹಯೋಗ ಮತ್ತು ಮೆಗಾ ವಿಜ್ಞಾನ ಯೋಜನೆಗಳನ್ನು ಒಂದೇ ಸೂರಿನಡಿ ತಂದು ಅದನ್ನು ಸಮಾಜಕ್ಕೆ ನಿಕಟವನ್ನಾಗಿಸುವ ಉದ್ದೇಶವನ್ನು ಹೊಂದಿದೆ. ಇದು ಅಂತಾರಾಷ್ಟ್ರೀಯ ಸಹಯೋಗಗಳಿಗೆ ಭಾರತದ ಕೊಡುಗೆಯನ್ನು ಪ್ರತಿಬಿಂಬಿಸಲಿದೆ ಮತ್ತು ಮೂಲಭೂತ ವಿಜ್ಞಾನ ಮತ್ತು ಸಂಶೋಧನೆಯನ್ನು ವೃತ್ತಿಯಾಗಿ ಮುಂದುವರಿಸಲು ಬಯಸುವ ಶಾಲಾ ಮಕ್ಕಳು, ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿಗಳಿಗೆ ಗುರಿಯನ್ನು ತೋರಿಸಲಿದೆ.
CERN ಎಂದು ಕರೆಯಲ್ಪಡುವ ಯುರೋಪಿಯನ್ ಆರ್ಗನೈಝೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ನಂತಹ ಸಂಸ್ಥೆಗಳು, ಫೆಸಿಲಿಟಿ ಫಾರ್ ಆಂಟಿಪ್ರೋಟಾನ್ ಆ್ಯಂಡ್ ಅಯಾನ್ ರಿಸರ್ಚ್ (FAIR), ಭಾರತ ಮೂಲದ ನ್ಯೂಟ್ರಿನೊ ವೀಕ್ಷಣಾಲಯ (ಐಎನ್ಒ),ಮತ್ತು ಇತರರು ಪ್ರದರ್ಶನದಲ್ಲಿ ಮಾದರಿಗಳನ್ನು ಪ್ರದರ್ಶಿಸಲಿದ್ದಾರೆ.
ಇಲ್ಲಿ ಜರಗುವ ಸಂವಾದ ಮತ್ತು ಉಪನ್ಯಾಸಗಳನ್ನು ವಿಐಟಿಎಂನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಪ್ರದರ್ಶನವು ರಜಾದಿನಗಳು ಸೇರಿದಂತೆ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6ರ ತನಕ ತೆರೆದಿರುತ್ತದೆ. ಶಾಲಾ ಮಕ್ಕಳಿಗೆ ಪ್ರವೇಶ ಉಚಿತವಾಗಿದೆ.
ಬೆಂಗಳೂರಿನ ನಂತರ, ಪ್ರದರ್ಶನವು ಕೋಲ್ಕತಾದಲ್ಲಿ ನಡೆಯಲಿದೆ. ಕೊನೆಯ ಪ್ರದರ್ಶನವು ನವದೆಹಲಿಯಲ್ಲಿ ಜರುಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.