ಬೀರತ್: ಇರಾಕ್ ಮತ್ತು ಸಿರಿಯಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಇಸಿಸ್ ಉಗ್ರರು ಅಲ್ಲಿನ ಪ್ರಾಚೀನ ಅಮೂಲ್ಯ ಶಿಲ್ಪಕಲೆಗಳನ್ನು ನಾಶ ಮಾಡುತ್ತಿದ್ದಾರೆ. ಈಗಾಗಲೇ ಹಲವು ವಿಶ್ವ ಪಾರಂಪರಿಕ ತಾಣಗಳನ್ನು ಧ್ವಂಸ ಮಾಡಿರುವ ಅವರು ಇದೀಗ ಸಿರಿಯಾದ ಪಲ್ಮೈರಾ ನಗರದಲ್ಲಿದ್ದ ಪ್ರಸಿದ್ಧ ಸಿಂಹದ ಪ್ರತಿಮೆಯನ್ನು ಒಡೆದು ಹಾಕಿದ್ದಾರೆ.
ಈ ಪ್ರತಿಮೆ ಲಯನ್ ಆಫ್ ಅಲ್-ಲಾತ್ ಎಂದೇ ಪ್ರಸಿದ್ಧವಾಗಿತ್ತು, 10 ಫೀಟ್ ಉದ್ದ ಮತ್ತು 15 ಟನ್ ಭಾರವಿದ್ದ ಇದನ್ನು 1977ರಲ್ಲಿ ಪತ್ತೆ ಹಚ್ಚಲಾಗಿತ್ತು, ಅಲ್-ಲಾತ್ ಎಂಬುದು ಇಸ್ಲಾಂಗಿಂತ ಮೊದಲು ಅರೇಬಿಯನ್ನರ ದೇವತೆಯಾಗಿತ್ತು, ಈ ದೇವತೆಯ ಮಂದಿರದಲ್ಲೇ ಸಿಂಹದ ಪ್ರತಿಮೆ ಇತ್ತು. ಮೊದಲ ಶತಮಾನ ಬಿಸಿಯಲ್ಲಿ ಇದನ್ನು ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ.
ಈ ಪ್ರತಿಮೆಯ ರಕ್ಷಣೆಗಾಗಿ ಮೆಟಲ್ ಪ್ಲೇಟ್ಗಳನ್ನು, ಇಟ್ಟಿಗೆ ಕಲ್ಲುಗಳನ್ನು ಕವರ್ ಮಾಡಲಾಗಿತ್ತು, ಆದರೂ ಇಸಿಸ್ ಉಗ್ರರ ವಕ್ರ ದೃಷ್ಟಿಯಿಂದ ಇದನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.