ನವದೆಹಲಿ: ಲಿಂಗ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಮತ್ತು ಸಾರ್ವಜನಿಕ ಆರೋಗ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದ ಖ್ಯಾತ ವೈದ್ಯೆ, ದೇಶದ ಮೊಟ್ಟ ಮೊದಲ ಶಾಸಕಿ, ಸಾಮಾಜಿಕ ಹೋರಾಟಗಾರ್ತಿ ಡಾ. ಮುತ್ತುಲಕ್ಷ್ಮೀ ರೆಡ್ಡಿ ಅವರ 133ನೇ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗೂಗಲ್ ಅವರಿಗೆ ಡೂಡಲ್ ಮೂಲಕ ಗೌರವವನ್ನು ಸಮರ್ಪಣೆ ಮಾಡಿದೆ.
ಡಾ. ಮುತ್ತುಲಕ್ಷ್ಮೀ ಅವರ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷ ‘ಆಸ್ಪತ್ರೆ ದಿನ’ ಎಂದು ಆಚರಿಸುವಂತೆ ತಮಿಳುನಾಡು ಸರ್ಕಾರ ಸೋಮವಾರ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಆದೇಶವನ್ನು ಹೊರಡಿಸಿದೆ.
1886 ರಲ್ಲಿ ತಮಿಳುನಾಡಿನ ಪುದುಕ್ಕೋಟೈನಲ್ಲಿ ಜನಿಸಿದ ಡಾ. ಮತ್ತುಲಕ್ಷ್ಮೀ ಅವರು, ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಾ ವಿಭಾಗದ ಮೊದಲ ಭಾರತೀಯ ಮಹಿಳಾ ವಿದ್ಯಾರ್ಥಿನಿಯಾಗಿದ್ದರು. ಇದು ಅವರ ಅನೇಕ ಪ್ರಥಮಗಳಲ್ಲಿ ಒಂದಾಗಿದೆ. ಅವರು 1912 ರಲ್ಲಿ ಭಾರತದ ಮೊದಲ ಮಹಿಳಾ ವೈದ್ಯರುಗಳಲ್ಲಿ ಒಬ್ಬರಾದರು ಮತ್ತು ಮದ್ರಾಸ್ನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮೊದಲ ವುಮೆನ್ ಹೌಸ್ ಸರ್ಜನ್ ಆದರು.
ಅವರು 1918 ರಲ್ಲಿ ಮಹಿಳಾ ಭಾರತೀಯ ಸಂಘವನ್ನು ಸ್ಥಾಪಿಸಿದರು ಮತ್ತು ಮದ್ರಾಸ್ ವಿಧಾನ ಪರಿಷತ್ತಿನ ಮೊದಲ ಮಹಿಳಾ ಸದಸ್ಯರಾಗಿ ಮತ್ತು ಉಪಾಧ್ಯಕ್ಷರಾದರು. ಬಳಿಕ ಭಾರತದ ಮೊದಲ ಮಹಿಳಾ ಶಾಸಕರಾಗಿ ಆರಿಸಿ ಬಂದರು. ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು ಹೆಚ್ಚಿಸಲು ಸಹಾಯ ಮಾಡಿದರು ಮತ್ತು ಅಕ್ರಮ ಸಂಚಾರ ನಿಯಂತ್ರಣ ಕಾಯ್ದೆಯನ್ನು ಅಂಗೀಕರಿಸಲು ಮತ್ತು ದೇವದಾಸಿ ವ್ಯವಸ್ಥೆಯನ್ನು ರದ್ದುಪಡಿಸುವಲ್ಲಿಯೂ ಮಹತ್ವದ ಪಾತ್ರವನ್ನು ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.