ನವದೆಹಲಿ: ಕೇಂದ್ರ ಕ್ರೀಡಾ ಮತ್ತು ಯುವ ಜನ ಸಚಿವ ಕಿರಣ್ ರಿಜ್ಜು ಅವರನ್ನು ಟ್ವಿಟರ್ ಮೂಲಕ ಶೋಧಿಸಲು ಆರಂಭಿಸಿದರೆ ನಮ್ಮ ಮುಂದೆ ಅವರ ಅಧಿಕೃತ ಖಾತೆಗೆ ಹೆಚ್ಚುವರಿಯಾಗಿ ಮತ್ತೊಂದು ಆಯ್ಕೆ ತೆರೆದುಕೊಳ್ಳುತ್ತದೆ. ಅದುವೇ ‘ಕಿರಣ್ ರಿಜ್ಜು ಆಫೀಸ್” ಟ್ವಿಟರ್ ಹ್ಯಾಂಡಲ್. ಸಚಿವರು ಈ ಹೆಸರಿನಲ್ಲಿ ತಮ್ಮ ಮತ್ತೊಂದು ಅಧಿಕೃತ ಖಾತೆಯನ್ನು ತೆರೆದಿದ್ದಾರೆ.
ನಿನ್ನೆಯಿಂದ ‘2020 ಟೋಕಿಯೋ ಒಲಿಂಪಿಕ್ಸ್’ಗೆ ಒಂದು ವರ್ಷಗಳ ಕೌಂಟ್ ಡೌನ್ ಆರಂಭಗೊಂಡಿದೆ. ಜುಲೈ 24, 2020ರಿಂದ ಒಲಿಂಪಿಕ್ಸ್ ಆರಂಭಗೊಳ್ಳಲಿದೆ. ಈ ಪ್ರಮುಖ ಸಂದರ್ಭದಲ್ಲಿ ಕ್ರೀಡಾ ಸಚಿವರು ಅಧಿಕೃತ ಖಾತೆಯನ್ನು ತೆರೆದಿದ್ದಾರೆ. ಭಾರತವನ್ನು ಗ್ಲೋಬಲ್ ಸ್ಪೋರ್ಟಿಂಗ್ ಸೂಪರ್ಪವರ್ ಆಗಿ ಹೊರಹೊಮ್ಮಿಸುವ ನಿಟ್ಟಿನಲ್ಲಿ ಸದಾ ಸಲಹೆ ಸೂಚನೆಗಳನ್ನು ಈ ಖಾತೆಯ ಮೂಲಕ ಹಂಚಿಕೊಳ್ಳುವಂತೆ ಅವರು ಜನರಿಗೆ ಕರೆ ನೀಡಿದ್ದಾರೆ.
ಈ ಟ್ವಿಟರ್ ಖಾತೆಯ ಮೂಲಕ ಮಾಡಲಾದ ಮೊದಲ ಟ್ವಿಟ್, “ಯಾರಿಗೆ ಕ್ರೀಡೆ ಇಷ್ಟ ಇಲ್ಲ? ಸ್ಪೂರ್ತಿ, ಬಲಿಷ್ಠತೆ, ಕೌಶಲ್ಯ ಮತ್ತು ಸಾಮರ್ಥ್ಯಗಳು ಕ್ರೀಡಾ ಲೋಕದಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಈ ನಾಲ್ಕು ಗುಣಗಳು ವೈಯಕ್ತಿಕ ಗೆಲುವು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅತ್ಯಗತ್ಯವಾಗಿವೆ. ದೇಶದ ಯುವ ಜನತೆ ಈ ಗುಣಗಳನ್ನು ಹೊಂದಿದಾಗ, ದೇಶವು ವಿಜ್ಞಾನ, ಆರ್ಥಿಕತೆ, ತಂತ್ರಜ್ಞಾನದಲ್ಲಿ ಮಾತ್ರವಲ್ಲ ಕ್ರೀಡೆಯಲ್ಲೂ ಉತ್ತುಂಗಕ್ಕೇರುತ್ತದೆ” ಎಂಬ ಪ್ರಧಾನಿ ನರೇಂದ್ರ ಮೋದಿಯವರ ಸಂದೇಶವನ್ನು ಒಳಗೊಂಡಿದೆ.
On the occasion of #1YearToGo for @Tokyo2020 Union Minister of Youth Affairs and Sports and MOS Minority Affairs has launched his Official Twitter handle. Interact with him here and share your suggestions to make India a global sporting superpower. @KirenRijiju pic.twitter.com/YElYVw8FBS
— Kiren Rijiju Office (@RijijuOffice) July 24, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.