ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ನಂತಹ ಹಲವಾರು ರಾಜ್ಯಗಳಿಗೆ ವಿಧಾನಸಭಾ ಚುನಾವಣೆಗಳು ಶೀಘ್ರದಲ್ಲೇ ಘೋಷಣೆಯಾಗಲಿವೆ. ಇದಕ್ಕಾಗಿ ಇಡೀ ದೇಶವೇ ಮುಂದೆ ನೋಡುತ್ತಿದೆ. ಈ ಸಂದರ್ಭದಲ್ಲಿ ಅದೇ ಹಳೆಯ ‘ಅಸಹಿಷ್ಣುತೆ ಏರುತ್ತಿದೆ’ ಥಿಯರಿಯನ್ನು ಮುಂದಿಟ್ಟುಕೊಂಡು ವಿವಾದವನ್ನು ಹುಟ್ಟುಹಾಕಲು ಅಸಹಿಷ್ಣುತೆ ಗ್ಯಾಂಗ್ ಮತ್ತೆ ಮುನ್ನಲೆಗೆ ಬಂದಿದೆ. ಬುಧವಾರ ಮಾಧ್ಯಮ ಮತ್ತು ಸಿನೆಮಾ ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು 49 ಮಂದಿ ಪ್ರಧಾನಿ ನರೇಂದ್ರ ಮೋದಿಯವರಿಗೆ “ಗುಂಪು ಹಲ್ಲೆಯ ಘಟನೆ’ಗಳ ಬಗ್ಗೆ ಪತ್ರವೊಂದನ್ನು ಬರೆದಿದೆ. ಈ ಪತ್ರದಲ್ಲಿ ಹಿಂದೂ ಧಾರ್ಮಿಕ ಘೋಷಣೆಯಾದ ‘ಜೈ ಶ್ರೀ ರಾಮ್’ ಅನ್ನು “ಯುದ್ಧದ ಕೂಗು” ಎಂದು ಹೇಳಲಾಗಿದೆ. 49 ವ್ಯಕ್ತಿಗಳ ಈ ಪಟ್ಟಿಯಲ್ಲಿ ಅಡೂರ್ ಗೋಪಾಲಕೃಷ್ಣನ್, ಮಣಿರತ್ನಂ, ಅನುರಾಗ್ ಕಶ್ಯಪ್, ಅಪರ್ಣ ಸೇನ್, ರಾಮ್ ಚಂದ್ರ ಗುಹಾ, ದೇಶದ್ರೋಹ ಮತ್ತು ಮಾವೋವಾದಿಗಳಿಗೆ ಸಹಾಯ ಮಾಡಿದ ಗಂಭೀರ ಆರೋಪದ ಮೇಲೆ ಶಿಕ್ಷೆಗೊಳಗಾದ ಬಿನಾಯಕ್ ಸೇನ್ ಮುಂತಾದವರು ಇದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) (ದೇಶದ್ರೋಹ) ಮತ್ತು 120-ಬಿ ಭಾರತೀಯ ದಂಡ ಸಂಹಿತೆ (ಪಿತೂರಿ) ಯ ಸೆಕ್ಷನ್ 124 ಎ ಅಡಿಯಲ್ಲಿ ಈತನ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸುವುದು ಅನಿವಾರ್ಯ.
ಎನ್ಸಿಆರ್ಬಿ ದತ್ತಾಂಶವನ್ನು ಉಲ್ಲೇಖಿಸಿರುವ ಈ ಪತ್ರದಲ್ಲಿ, “2018ರ ಅಕ್ಟೋಬರ್ 29 ಮತ್ತು 2019 ರ ಜನವರಿ 1ರ ನಡುವೆ 254 ಧರ್ಮ ಆಧಾರಿತ ದ್ವೇಷ ಅಪರಾಧಗಳು ವರದಿಯಾಗಿದ್ದು, ಇದರಲ್ಲಿ 91 ಜನರು ಸಾವನ್ನಪ್ಪಿದ್ದಾರೆ ಮತ್ತು 579 ಮಂದಿ ಗಾಯಗೊಂಡಿದ್ದಾರೆ. ಸಿಟಿಜನ್ಸ್ ರಿಲಿಜಿಯಸ್ ಹೇಟ್ ಕ್ರೈಮ್ ವಾಚ್ ಪ್ರಕಾರ, ಶೇ.62ರಷ್ಟು ಪ್ರಕರಣಗಳಲ್ಲಿ ಮುಸ್ಲಿಮರು (ಜನಸಂಖ್ಯೆಯ 14%) ಬಲಿಪಶುಗಳು ಮತ್ತು ಶೇ.14ರಷ್ಟು ಪ್ರಕರಣಗಳಲ್ಲಿ ಕ್ರಿಶ್ಚಿಯನ್ನರು ಬಲಿಪಶುಗಳು” ಎನ್ನಲಾಗಿದೆ.
ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವ ಇಂತಹ ಜನರ ವಿಧ್ವಂಸಕ ತಂತ್ರಗಳ ಬಗ್ಗೆ ಈ ರಾಷ್ಟ್ರವು ಈಗಾಗಲೇ ಜಾಗರೂಕವಾಗಿದೆ, ರಾಜಕೀಯವಾಗಿ ಪ್ರೇರಿತವಾದ ಈ ಪ್ರಯತ್ನದ ವಿರುದ್ಧ ಎಲ್ಲಾ ಭಾಗಗಳಿಂದಲೂ ಖಂಡನೆಗಳು ಹರಿದು ಬರುತ್ತಿವೆ. ಕೆಲವು ಸಮುದಾಯಗಳ ವಿರುದ್ಧದ ಅಪರಾಧ ಘಟನೆಗಳನ್ನು ಮಾತ್ರ ಆಯ್ಕೆ ಮಾಡುವ ಮತ್ತು ಅವುಗಳಿಗೆ ಕೋಮು ಬಣ್ಣವನ್ನು ನೀಡಲು ಪ್ರಯತ್ನಿಸುವ ಪ್ರಯತ್ನ ಇದೇ ಮೊದಲಲ್ಲ, ಈ ಹಿಂದೆಯೂ ಅನೇಕ ಬಾರಿ ನಡೆದಿದೆ. ಸರಣಿಯಾಗಿ ಇಂತಹ ಪ್ರಯತ್ನಗಳನ್ನು ನಡೆಸುತ್ತಲೇ ಬರಲಾಗುತ್ತಿದೆ.
ರಿಪಬ್ಲಿಕ್ ಟಿವಿ ಸಂಪಾದಕ ಮತ್ತು ಮುಖ್ಯಸ್ಥರಾಗಿರುವ ಅರ್ನಾಬ್ ಗೋಸ್ವಾಮಿ ಈ ವ್ಯಕ್ತಿಗಳ ಅಪರಾಧ ಹಿನ್ನಲೆಗಳನ್ನು ಬಹಿರಂಗಪಡಿಸುವ ಕಾರ್ಯವನ್ನು ಒಂದು ಹೆಜ್ಜೆ ಮುಂದಕ್ಕೆ ತೆಗದುಕೊಂಡು ಹೋಗಿದ್ದಾರೆ. ಮಾಧ್ಯಮ ವಿವರಣೆಯಲ್ಲಿ ಈ ವ್ಯಕ್ತಿಗಳು ತಮ್ಮ ನಕಲಿ ಕಳವಳಗಳನ್ನು ಪ್ರಚಾರ ಮಾಡುತ್ತಿದ್ದ ವೇಳೆ ಅರ್ನಬ್ ಇವರುಗಳ ಮುಖವಾಡವನ್ನು ಕಳಚಿ ಹಾಕಿದ್ದಾರೆ. ‘ನೀವು ಯಾಕೆ ಇತರ ಸಮುದಾಯದವರು ಬಲಿಪಶುಗಳಾದ ಘಟನೆಯನ್ನು ಉಲ್ಲೇಖ ಮಾಡಿಲ್ಲ, ಅಂತಹ ಪ್ರಕರಣಗಳ ಬಗ್ಗೆ ಯಾಕೆ ಮೌನವಾಗಿದ್ದೀರಿ?’ ಎಂದು ಅರ್ನಬ್ ಮಾಧ್ಯಮ ಸಂವಾದದ ವೇಳೆ ಅಪರ್ಣಾ ಸೇನ್ ಮತ್ತು ಇತರರಿಗೆ ನೇರವಾಗಿ ಪ್ರಶ್ನಿಸಿದ್ದಾರೆ.
ಬಂಗಾಳಿ ಚಲನಚಿತ್ರ ನಿರ್ಮಾಪಕಿಯಾಗಿರುವ ಅಪರ್ಣಾ ಸೇನ್ ಅವರು ಅರ್ನಾಬ್ ಗೋಸ್ವಾಮಿ ಅವರು ಕೇಳಿದ ಪ್ರಶ್ನೆಗಳನ್ನು ಅರ್ಥ ಹೀನ ಎಂದು ಟೀಕಿಸಿದ್ದಾರೆ.
“ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಹೋಗುವುದಿಲ್ಲ. ಪ್ರಸ್ತುತ ಸಂಗತಿಗಳಿಗೆ ನಾವು ಸೀಮಿತವಾಗೋಣ” ಎನ್ನುವ ಮೂಲಕ ಅಪರ್ಣಾ ಸೇನ್ ಅವರು ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಇತರ 48 ವ್ಯಕ್ತಿಗಳೊಂದಿಗೆ ರಾಷ್ಟ್ರವನ್ನು ಕೆಣಕುವ ಕೆಟ್ಟ ಪ್ರಯತ್ನವನ್ನು ಮಾಡಿದ ನಂತರ ಎಲ್ಲಾ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಅವರು ಯಶಸ್ವಿಯಾಗಿಯೇ ಮಾಡಿದ್ದಾರೆ.
ಜೈರಾ ವಾಸಿಮ್ ಅವರನ್ನು ಟಾರ್ಗೆಟ್ ಮಾಡಿದಾಗ ನೀವು ಎಲ್ಲಿ ಹೋಗಿದ್ದಿರಿ?
ಶ್ರೀನಗರದ ಜಮಾ ಮಸೀದಿಯ ಹೊರಗೆ ಅಯೂಬ್ ಪಂಡಿತ್ನನ್ನು ಕೊಂದಾಗ ನೀವು ಎಲ್ಲಿದ್ದಿರಿ?
ಜೈ ಶ್ರೀ ರಾಮ್ ಎಂದು ಹೇಳಿದ್ದಕ್ಕಾಗಿ 26 ವರ್ಷದ ವ್ಯಕ್ತಿ ಕೊಲ್ಲಲ್ಪಟ್ಟಾಗ ನೀವು ಎಲ್ಲಿದ್ದಿರಿ?
ಮುಸ್ಲಿಂ ಧರ್ಮಗುರುಗಳು ಅಲ್ಪಸಂಖ್ಯಾತರಿಗೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತೆ ಆದೇಶ ನೀಡಿದಾಗ ನೀವು ಎಲ್ಲಿದ್ದಿರಿ?
ದೆಹಲಿಯಲ್ಲಿ ದೇವಾಲಯದ ಮೇಲೆ ದಾಳಿ ನಡೆದಾಗ ನೀವು ಎಲ್ಲಿದ್ದಿರಿ?
ಅರ್ನಬ್ ಕೇಳಿದ ಈ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ಅವರಿಂದ ಬಂದಿಲ್ಲ.
#ArnabExposesLobby | Lobby refuses to answer on LIVE TV as Arnab Goswami confronts them with over 10 questions
Watch LIVE here – https://t.co/LGCyJUEBn5 pic.twitter.com/KFSUDgmpCg
— Republic (@republic) July 24, 2019
ಅರ್ನಾಬ್ ಗೋಸ್ವಾಮಿ ಮಾತ್ರವಲ್ಲ, ಕೋಮು ಉದ್ವಿಗ್ನತೆಯನ್ನು ಏರಿಸುವ ಈ 48 ಮಂದಿಯ ಸೌಮ್ಯ ಪ್ರಯತ್ನಗಳಿಗೆ ಖಂಡನೆಗಳು ಎಲ್ಲಾ ಕಡೆಗಳಿಂದಲೂ ಹರಿದು ಬರುತ್ತಿವೆ. ‘ಅರ್ಬನ್ ನಕ್ಸಲ್’ ಪುಸ್ತಕದ ಪ್ರಕಾಶಕ ಗರುಡಾ ಪ್ರಕಾಶನ್ ಎಂಡಿ ಸಂಕ್ರಂತ್ ಸಾನು ಅವರು ಈ ವ್ಯಕ್ತಿಗಳನ್ನು ಟೀಕಿಸಿದ್ದು, “ಅಸಹಿಷ್ಣುತೆ ಲಾಬಿ ಒಂದು ಪ್ರೇರಿತ ರಾಜಕೀಯ ದುರುದ್ದೇಶಕ್ಕಾಗಿ ಮತ್ತೆ ಮರಳಿದೆ, ಅದು ಸಮಸ್ಯೆಯನ್ನು ಪರಿಹರಿಸುವ ಬದಲು ಸಂಘರ್ಷವನ್ನು ಹೆಚ್ಚಿಸುತ್ತಿದೆ. ಇದು ಸಂಪೂರ್ಣವಾಗಿ ಸಂಬಂಧವಿಲ್ಲದ ಸಮಸ್ಯೆಗಳನ್ನು ಪರಸ್ಪರ ಬೆರೆಸುವ ಕೃತ್ಯವನ್ನು ನಡೆಸುತ್ತಿದೆ. ಬಲಿಪಶುಗಳು ಮತ್ತು ಅಪರಾಧಿಗಳನ್ನು ಇಲ್ಲಿ ಮೊದಲೇ ನಿರ್ಧರಿಸಲಾಗುತ್ತದೆ ಮತ್ತು ಅವರ ನಿರೂಪಣೆಗೆ ಹೊಂದಿಕೆಯಾಗದ ಯಾವುದೇ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಉದಾಹರಣೆಗೆ, ಇಂಡಿಯಾಫ್ಯಾಕ್ಟ್ಸ್ ಹಿಂದೂ ಮಾನವ ಹಕ್ಕುಗಳ ವರದಿಯಲ್ಲಿ, ಮುಸ್ಲಿಮರಿಂದ ದಲಿತರ ವಿರುದ್ಧ 25 ಕ್ಕೂ ಹೆಚ್ಚು ಹಿಂಸಾಚಾರ ಪ್ರಕರಣಗಳು ಆಗಿದ್ದನ್ನು ನಾವು ದಾಖಲಿಸಿದ್ದೇವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಎಡಪಂಥೀಯ ಭಯೋತ್ಪಾದನೆ ಭಾರತದ ಅತಿದೊಡ್ಡ ಕೊಲೆಗಾರ. 2010 ರಲ್ಲಿ 1,005 ಮಂದಿ ನಕ್ಸಲರ ಕೈಯಲ್ಲಿ ಕೊಲ್ಲಲ್ಪಟ್ಟಿದ್ದರು. 2015 ರಲ್ಲಿ, 226 ಜನರು ನಕ್ಸಲರಿಂದ ಕೊಲ್ಲಲ್ಪಟ್ಟಿದ್ದಾರೆ. ಈ ಕುಸಿತದಿಂದ ನಗರ ನಕ್ಸಲರು ಅಸಮಾಧಾನಗೊಂಡಿದ್ದಾರೆ, ಹೀಗಾಗಿ ಅವರಲ್ಲಿ ‘ಅಸಹಿಷ್ಣುತೆ’ ಹೆಚ್ಚಾಗುತ್ತಿರುವುದರಲ್ಲಿ ಆಶ್ಚರ್ಯವಿಲ್ಲ” ಎಂದಿದ್ದಾರೆ.
ತನ್ನ ರಾಜಕೀಯ ಭದ್ರತೆಯನ್ನು ಕಳೆದುಕೊಳ್ಳುತ್ತಿರುವ ಒಂದು ಗುಂಪು, ಕೇವಲ ನಿರ್ದಿಷ್ಟ ಘಟನೆಗಳನ್ನು ಹಿಡಿದುಕೊಂಡು ಇಡೀ ದೇಶವೇ ಅಸಹಿಷ್ಣುತೆಯಲ್ಲಿದೆ ಎಂದು ಪ್ರತಿಪಾದಿಸುತ್ತಿದೆ. ವಿಶ್ವದ ಮುಂದೆ ದೇಶದ ಗೌರವವನ್ನು ತಗ್ಗಿಸುತ್ತಿದೆ. ಆದರೆ ಬುದ್ಧಿವಂತ ನಾಗರಿಕರು ಎಂದಿಗೂ ಇಂತಹವರಿಗೆ ಸೊಪ್ಪು ಹಾಕುವುದಿಲ್ಲ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.