ಹೈದರಾಬಾದ್: ಕೋಟ್ಯಾಂತರ ಭಾರತೀಯರ ಹಾರೈಕೆ ಫಲಿಸಿದೆ. ಹೆಮ್ಮೆಯ ಇಸ್ರೋ ಚಂದ್ರಯಾನ-2 ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಇನ್ನು 48 ದಿನಗಳಲ್ಲಿ ಇದು ಚಂದ್ರನ ದಕ್ಷಿಣ ಧ್ರುವವನ್ನು ತಲುಪಲಿದೆ. ಈ ಮೂಲಕ ಭಾರತ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸಂಪೂರ್ಣ ದೇಶೀ ನಿರ್ಮಿತ ಮಿಶನ್ ಇದಾಗಿದೆ.
ಇಂದು ಮಧ್ಯಾಹ್ನ 2.43ರ ಸುಮಾರಿಗೆ ಆಂಧ್ರದ ಶ್ರೀಹರಿಕೋಟಾದ ಸತಿಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ವಿ ಮಾರ್ಕ್ III ವಾಹಕದ ಮೂಲಕ ಚಂದ್ರಯಾನ-2 ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ. ಇದು ದಕ್ಷಿಣ ಧ್ರುವದಲ್ಲಿ ಚಂದ್ರನ ಮೇಲೆ ಇಳಿಯಲು ಸುಮಾರು 48 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
640 ಟನ್ ತೂಕದ ಈ ವಾಹಕಕ್ಕೆ ‘ಬಾಹುಬಲಿ’ ಎಂದೂ ಹೆಸರಿಸಲಾಗಿದೆ.
“ಜಿಎಸ್ಎಲ್ವಿ ಮಾರ್ಕ್ III ಚಂದ್ರಯಾನ್ 2 ಅನ್ನು ಕಕ್ಷೆಗೆ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಇದು ಭಾರತಕ್ಕೆ ಒಂದು ಐತಿಹಾಸಿಕ ಪ್ರಯಾಣದ ಪ್ರಾರಂಭವಾಗಿದೆ. ನಾವು ಗಂಭೀರವಾದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದ್ದೇವೆ ಮತ್ತು ಇಸ್ರೋ ಪುಳಕಿತಗೊಂಡಿದೆ” ಎಂದು ಇಸ್ರೋ ಅಧ್ಯಕ್ಷ ಕೆ ಸಿವನ್ ಅವರು ಕೇಂದ್ರದಲ್ಲಿ ಅವರ ಸುತ್ತಲೂ ನೆರೆದಿದ್ದ ವಿಜ್ಞಾನಿಗಳು ಜೋರಾದ ಚಪ್ಪಾಳೆ ನಡುವೆ ಹೇಳಿದರು.
ಚಂದ್ರಯಾನ್ -2 ಚಂದ್ರನಲ್ಲಿನ ಪ್ರದೇಶವನ್ನು ಅನ್ವೇಷಿಸಲಿದೆ, ಇದುವರೆಗೆ ಯಾರೂ ತಲುಪದ ಚಂದ್ರನ ಭಾಗವನ್ನು ಈ ಮಿಷನ್ ತಲುಪಲಿದೆ. ಮಿಷನ್ನ ಲ್ಯಾಂಡಿಂಗ್ ಸೈಟ್ ಸುಮಾರು 70 ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿದೆ, ಇಲ್ಲಿಯವರೆಗೆ ಯಾವುದೇ ಮಿಷನ್ ದಕ್ಷಿಣದ ತುದಿಯನ್ನು ತಲುಪಿಲ್ಲ. ಈ ಮೊದಲು ಯಾವುದೇ ದೇಶವೂ ಈ ಪ್ರಯತ್ನವನ್ನು ಮಾಡಿಲ್ಲ.
ಇಸ್ರೋ ಮುಖ್ಯಸ್ಥ ಕೆ. ಸಿವನ್ ಅವರ ಪ್ರಕಾರ, ಈ ಮಿಷನ್ ಲೂನಾರ್ ಸೈನ್ಸ್ ಕ್ಷೇತ್ರದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಬಹಿರಂಗಪಡಿಸುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.