ನವದೆಹಲಿ: ಭಾರತೀಯ ನೌಕಾಪಡೆಯು, ತನ್ನ ಹಡಗುಗಳ ನಡುವೆ ಸಂವಹನಕ್ಕೆ ಅನುಕೂಲ ಮಾಡಿಕೊಡುವಂತಹ ಮೀಸಲು ಮಿಲಿಟರಿ ಉಪಗ್ರಹವನ್ನು ಇಸ್ರೋದಿಂದ ಖರೀದಿ ಮಾಡಲು ಮುಂದಾಗಿದೆ. ಇದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ 1,589 ಕೋಟಿ ರೂಪಾಯಿಗಳ ಆರ್ಡರ್ ನೀಡಿದೆ. ವರದಿಯ ಪ್ರಕಾರ ಜೂನ್ 11 ರಂದು ಈ ಉಪಗ್ರಹಗಳಿಗೆ ಆರ್ಡರ್ ನೀಡಲಾಗಿದೆ.
ಇನ್ನು ಒಂದು ವರ್ಷದೊಳಗೆ ಈ ಉಪಗ್ರಹ ಉಡಾವಣೆಯಾಗಲಿದೆ. ಅಲ್ಲದೇ ಇದು ಆರು ವರ್ಷಗಳ ಹಿಂದೆ 2013 ರಲ್ಲಿ ಉಡಾವಣೆಯಾದ ಜಿಸ್ಯಾಟ್ -7 ಅನ್ನು ರಿಪ್ಲೇಸ್ ಮಾಡಲಿದೆ. ಜಿಸ್ಯಾಟ್ 7 ಪ್ರಸ್ತುತ ನೌಕಾಪಡೆಯಲ್ಲಿ ಮಿಲಿಟರಿ ಸಂವಹನ ಉಪಗ್ರಹವಾಗಿ ಬಳಕೆಯಲ್ಲಿದೆ.
ಕಳೆದ ಕೆಲವು ವರ್ಷಗಳಿಂದ ಹಲವಾರು ಉಪಗ್ರಹಗಳನ್ನು ಉಡಾವಣೆಗೊಳಿಸಿದ ಮತ್ತು ಈ ವರ್ಷದ ಆರಂಭದಲ್ಲಿ ಆ್ಯಂಟಿ ಸ್ಯಾಟಲೈಟ್ ಟೆಸ್ಟ್ ಅನ್ನು ನಡೆಸಿದ ನಂತರ ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ಇಸ್ರೋ ಕೊಡುಗೆ ಏರುತ್ತಲೇ ಇದೆ.
ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಗೆ ಅನುಕೂಲವಾಗುವಂತೆ ಇಸ್ರೋ ಕಳೆದ ವರ್ಷ ಜಿಸ್ಯಾಟ್ -7 ಎ ಅನ್ನು ಉಡಾವಣೆಗೊಳಿಸಿತ್ತು. ರಾಡಾರ್ ಸಂಕೇತಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪಡೆಗಳಿಗೆ ಗುಪ್ತಚರ ಮಾಹಿತಿ ಸಂಗ್ರಹಿಸಲು ಸಹಾಯ ಮಾಡುವ ಸಲುವಾಗಿ ಇಸ್ರೋ 2019 ರಲ್ಲಿ ಎಮಿಸ್ಯಾಟ್ ಅನ್ನು ಉಡಾವಣೆಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.