ನವದೆಹಲಿ: ಕೋಮು ದ್ವೇಷ ಹರಡುವಂತಹ ವೀಡಿಯೋವನ್ನು ಟಿಕ್ಟಾಕ್ ಮೂಲಕ ಹರಿಬಿಟ್ಟ ವಿವಾದಾತ್ಮಕ ನಟ ಅಜಾಝ್ ಖಾನ್ನನ್ನು ಮುಂಬಯಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೋದ ವಿರುದ್ಧ ಸೈಬರ್ ಪೊಲೀಸರಿಗೆ ದೂರು ಬಂದ ಹಿನ್ನಲೆಯಲ್ಲಿ ಆತ ಮತ್ತು ಆತನ ಗ್ಯಾಂಗ್ ಅನ್ನು ಬಂಧಿಸಲಾಗಿದೆ.
ಝಾರ್ಖಾಂಡಿನಲ್ಲಿ ನಡೆದ ತಬ್ರೇಝ್ ಖಾನ್ ಗುಂಪು ಹಲ್ಲೆಗೆ ಸಂಬಂಧಿಸಿದಂತೆ, ದ್ವೇಷ ಸಾಧನೆಯನ್ನು ಪ್ರಚೋದಿಸುವಂತಹ ವೀಡಿಯೋವನ್ನು ಮಾಡಿ ಇವರು ಹರಿಬಿಟ್ಟಿದ್ದರು. “ನೀವು ತಬ್ರೇಝ್ ಅನ್ನು ಕೊಂದಿರಿ, ನಾಳೆ ಆತನ ಮಗ ನಿಮ್ಮ ಮೇಲೆ ದ್ವೇಷ ಸಾಧಿಸಿದರೆ, ಮುಸ್ಲಿಮರು ಭಯೋತ್ಪಾದಕರು ಎನ್ನಬೇಡಿ” ಎಂಬ ಸಂದೇಶವುಳ್ಳ ವೀಡಿಯೋ ಇದಾಗಿತ್ತು.
ಇದರ ವಿರುದ್ಧ ಪೊಲೀಸರು ಎಫ್ಐಆರ್ ಅನ್ನು ದಾಖಲು ಮಾಡಿದ್ದರು. ಇದಕ್ಕಾಗಿ ಪೊಲೀಸರನ್ನೂ ಕೂಡ ಅಜಾಝ್ ವ್ಯಂಗ್ಯವಾಡಿದ್ದ.
ಭಾರತೀಯ ದಂಡ ಸಂಹಿತೆ, 1860 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಖಾನ್ ವಿರುದ್ಧ ಐದು ವರ್ಷಗಳ ಅವಧಿಯವರೆಗೆ ಜೈಲು ಶಿಕ್ಷೆ ಮತ್ತು ರೂ. 5,00,000. ದಂಡ ವಿಧಿಸಲಾಗಿದೆ.
ಅಜಾಝ್ ಖಾನ್ ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. 2018 ರಲ್ಲಿ ಈತನನ್ನು ಮುಂಬೈ ಹೋಟೆಲ್ನಿಂದ ಮಾದಕವಸ್ತು ವಿರೋಧಿ ಪ್ರಕರಣದಡಿಯಲ್ಲಿ ಬಂಧಿಸಲಾಗಿತ್ತು. ಅಜಾಝ್ ಖಾನ್ ನಿಷೇಧಿತ ಸೈಕೋಟ್ರೋಪಿಕ್ ವಸ್ತುಗಳನ್ನು ಹೊಂದಿದ್ದನೆಂದು ಆರೋಪಿಸಲಾಗಿದೆ. ಬ್ಯೂಟಿಷಿಯನ್ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆಯೂ ಈತನನ್ನು 2016 ರಲ್ಲಿ ಬಂಧಿಸಲಾಗಿತ್ತು.
ಅಲ್ಲದೇ ಟ್ವಿಟರಿನಲ್ಲಿ ಈತ, ತಾನು ಭಾರತೀಯ ಸಂವಿಧಾನ ಬದಲು ಖುರಾನ್ ಅನ್ನೇ ಆಯ್ಕೆ ಮಾಡುತ್ತೇನೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ.
Mumbai Police cyber cell has registered an FIR against a group of people allegedly circulating a video on TikTok, related to mob lynching of Tabrez Ansari in Jharkhand. Matter is being investigated. TikTok has removed the video and suspended the accounts of the group of people. pic.twitter.com/YCs6xX8sJs
— ANI (@ANI) July 9, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.