ರಾಂಚಿ: 19 ವರ್ಷದ ಯುವತಿ ರಿಚಾ ಭಾರ್ತಿಗೆ ಖುರಾನ್ ಅನ್ನು ಹಂಚುವ ಶಿಕ್ಷೆಯನ್ನು ವಿಧಿಸಿದ ನ್ಯಾಯಾಧೀಶ ಮನೀಶ್ ಕುಮಾರ್ ಸಿಂಗ್ ಅವರನ್ನು ಬಹಿಷ್ಕರಿಸಲು ರಾಂಚಿ ಜಿಲ್ಲಾ ಬಾರ್ ಅಸೋಸಿಯೇಶನ್ ಸರ್ವಾನುಮತದಿಂದ ನಿರ್ಧರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದ್ದು, ಅಸಮಂಜಸವಾದ ತೀರ್ಪನ್ನು ಪ್ರಕಟಿಸಿರುವ ನ್ಯಾಯಾಧೀಶರು ವರ್ಗಾವಣೆಯಾಗುವವರೆಗೂ ನಾವು ಅವರು ಕಾರ್ಯನಿರ್ವಹಿಸುವ ನ್ಯಾಯಾಲಯದ ಯಾವುದೇ ವಿಚಾರಣೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಬಾರ್ ಅಸೋಸಿಯೇಶನ್ ಸದಸ್ಯರು ಹೇಳಿದ್ದಾರೆ.
ಜೀವನದಲ್ಲಿ ಇದುವರೆಗೆ ಇಂತಹ ತೀರ್ಪನ್ನು ನಾವು ನೋಡಿಲ್ಲ ಎಂದು ವಕೀಲರುಗಳು ಹೇಳಿಕೊಂಡಿದ್ದಾರೆ.
ತೀರ್ಪನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ವಕೀಲರು ಒತ್ತಾಯಿಸಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳಲು ಜಂಟಿ ಕಲೆಕ್ಟರ್ (ಜೆಸಿ) 48 ಗಂಟೆಗಳ ಕಾಲಾವಧಿಯನ್ನು ಕೋರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬಾರ್ ಅಸೋಸಿಯೇಷನ್ ಇತರ ಎಲ್ಲಾ ಕಾನೂನು ಕರ್ತವ್ಯಗಳನ್ನು ನಿರ್ವಹಿಸಲಿದೆ ಎಂದು ಈ ವೇಳೆ ಸ್ಪಷ್ಟಪಡಿಸಿದ್ದಾರೆ.
Commendable steps taken by Ranchi bar association
They are United and will boycott Manish Singh’s Court
And Thanks to Social Media
Now No Judge will give such tughlaq farmaan pic.twitter.com/wRZuoh6Wgv— Intrepid Saffron (@IntrepidSaffron) July 17, 2019
ಇನ್ನೊಂದೆಡೆ ರಿಚಾ ಭಾರ್ತಿಯ ಕಾನೂನು ಹೋರಾಟಕ್ಕೆ ದೇಣಿಗೆಯನ್ನು ಸಂಗ್ರಹ ಮಾಡಲಾಗುತ್ತಿದ್ದು, 8 ಗಂಟೆಗಳಲ್ಲಿ ರೂ 7.28 ಲಕ್ಷ ಸಂಗ್ರಹವಾಗಿದೆ.
‘ಹಿಂದೂ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ’ ಅಥವಾ ಎಚ್ಐಪಿಎಸಿನ ಪರವಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರಾದ ವಿಕಾಸ್ ಪಾಂಡೆ ಮತ್ತು ರಿತು ರಾಥೌರ್ ಅವರು ದೇಣೀಗೆ ಸಂಗ್ರಹ ಪ್ರಾರಂಭಿಸಿದ್ದಾರೆ. ಈ ತಂಡ ರಿಚಾ ಭಾರ್ತಿಯ ತಂದೆಯನ್ನು ಸಂಪರ್ಕಿಸಿ, ಕಾನೂನು ಹೋರಾಟಕ್ಕೆ ಅಗತ್ಯವಾದ ಹಣವನ್ನು ಸಂಗ್ರಹಿಸುವ ಅಭಿಯಾನವನ್ನು ಆರಂಭಿಸಿತು.
ಮುಸ್ಲಿಂ ಸಮುದಾಯದ ವಿರುದ್ಧ ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ರಿಚಾ ಭಾರ್ತಿಯನ್ನು ಬಂಧಿಸಲಾಗಿದ್ದು, ಆಕೆಗೆ ನ್ಯಾಯಾಧೀಶರು ಖುರಾನ್ ಹಂಚುವ ಶಿಕ್ಷೆಯನ್ನು ವಿಧಿಸಿದ್ದಾರೆ. ಇದನ್ನು ತಾನು ಪಾಲನೆ ಮಾಡುವುದಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ.
A BIG THANK YOU to all of you 🙏🙏🙏. We reached the target of 6 lakh Rs in almost 7-8 hours flat. Will request you all to stop the contribution.
Tomorrow we will finish rest of the formalities with @ketto and transfer the amount to #RichaBharti‘s father’s account. GN now 😴 https://t.co/IKRccPsLcy pic.twitter.com/mwoa1ddL2b— Vikas Pandey (@MODIfiedVikas) July 16, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.