ನವದೆಹಲಿ: ಸೇನೆಯಿಂದ ಸೈನಿಕನನ್ನು ಹೊರತರಬಹುದು, ಆದರೆ ಸೈನಿಕನಿಂದ ಸೇನೆಯನ್ನು ಹೊರ ತರಲು ಸಾಧ್ಯವಿಲ್ಲ ಎಂಬ ಮಾತು ಅಕ್ಷರಶಃ ನಿಜ. ಭಾರತೀಯ ವಾಯುಪಡೆಯಿಂದ ನಿವೃತ್ತರಾಗಿ 40 ವರ್ಷಗಳೇ ಸಂದರೂ ಸೇನೆಯ ಬಗ್ಗೆ ಅಪಾರವಾದ ಗೌರವವನ್ನು ಹೊಂದಿರುವ ವ್ಯಕ್ತಿ 1.08 ಕೋಟಿ ರೂಪಾಯಿಗಳನ್ನು ರಕ್ಷಣಾ ಸಚಿವಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
74 ವರ್ಷದ ಸಿಬಿಆರ್ ಪ್ರಸಾದ್ ಅವರು, 1.08 ಕೋಟಿ ರೂಪಾಯಿಗಳ ಚೆಕ್ ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರ ಮಾಡಿದ್ದಾರೆ.
9 ವರ್ಷಗಳ ಕಾಲ ವಾಯುಸೇನೆಯಲ್ಲಿ ದುಡಿದಿದ್ದ ಪ್ರಸಾದ್ ಅವರು, ಭಾರತೀಯ ರೈಲ್ವೇಯಲ್ಲಿ ಉತ್ತಮ ಉದ್ಯೋಗದ ಆಫರ್ ಬಂತೆಂದು ಸೇನೆಯನ್ನು ತೊರೆದಿದ್ದರು. ದುರಾದೃಷ್ಟವಶಾತ್ ಅವರಿಗೆ ರೈಲ್ವೇಯಲ್ಲೂ ಉದ್ಯೋಗ ಸಿಗಲಿಲ್ಲ. ಕೊನೆಗೆ ಜೀವನ ಸಾಗಿಸಲು ಕುಕ್ಕುಟೋದ್ಯಮವನ್ನು ಆರಿಸಿಕೊಂಡರು. ಅದು ಅವರಿಗೆ ಲಾಭವನ್ನು ತಂದುಕೊಟ್ಟಿತು.
ಆದರೆ ವಾಯುಸೇನೆಯ ಋಣವನ್ನು ಒಂದಲ್ಲ ಒಂದು ದಿನ ತೀರಿಸಬೇಕೆಂಬ ಪಣ ತೊಟ್ಟಿದ್ದ ಅವರು, ಹಣವನ್ನು ಕೂಡಿಟ್ಟು ರಕ್ಷಣಾ ಸಚಿವಾಲಯಕ್ಕೆ ಸೇನಾಪಡೆಗಳ ಕಲ್ಯಾಣಕ್ಕಾಗಿ ಹಸ್ತಾಂತರ ಮಾಡಿದ್ದಾರೆ.
30 ವರ್ಷಗಳಿಂದ ಕುಕ್ಕುಟೋದ್ಯಮವನ್ನು ಮಾಡಿಕೊಂಡು ಬರುತ್ತಿರುವ ಅವರು, 50 ಎಕರೆ ಪ್ರದೇಶದಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಕೂಡ ಸ್ಥಾಪನೆ ಮಾಡಿದ್ದಾರೆ. ಒಲಿಂಪಿಯನ್ ಆಗಬೇಕೆಂಬ ಕನಸನ್ನು ನನಸು ಮಾಡಲು ಸಾಧ್ಯವಾಗದ ಕಾರಣ ಅವರು, ಇತರ ಕ್ರೀಡಾಪಟುಗಳಿಗೆ ನೆರವಿನ ಹಸ್ತವನ್ನು ನೀಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.