ನವದೆಹಲಿ: ಇಂದು ಕರ್ನಾಟಕದ ಕೇಸರಿ ಎಂದು ಖ್ಯಾತರಾಗಿದ್ದ ಜಗನ್ನಾಥ್ ರಾವ್ ಜೋಶಿ ಅವರ ಪುಣ್ಯತಿಥಿಯಾಗಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವಿಟರ್ ಮೂಲಕ ಜೋಶಿ ಅವರ ಕೊಡುಗೆಯನ್ನು ಸ್ಮರಿಸಿಕೊಂಡಿದ್ದಾರೆ.
“ಅವರು ಮಹಾನ್ ದೇಶಭಕ್ತ ಮತ್ತು ಅಸಾಧಾರಣ ಸಂಘಟನಾ ಕೌಶಲ್ಯಗಳನ್ನು ಹೊಂದಿದ್ದ ವಿಶಿಷ್ಟ ನಾಯಕರಾಗಿದ್ದರು. ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ ನೆಲೆಯನ್ನು ನಿರ್ಮಿಸುವಲ್ಲಿ ಜೋಶಿ ಜಿ ಪ್ರಮುಖ ಪಾತ್ರವಹಿಸಿದ್ದಾರೆ. ಗೋವಾ ವಿಮೋಚನಾ ಚಳವಳಿಯ ಸಂದರ್ಭದಲ್ಲಿ ಜೋಶಿ ಜೀ ಅವರ ಹೋರಾಟವನ್ನು ರಾಷ್ಟ್ರವು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಟ್ವಿಟರ್ನಲ್ಲಿ ಬರೆಯುವ ಮೂಲಕ ಅಮಿತ್ ಶಾ ‘ಕರ್ನಾಟಕ ಕೇಸರಿ ’ಜಗನ್ನಾಥ ಜೋಶಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಇಂದು ಜೋಶಿ ಅವರ 18ನೇ ಪುಣ್ಯತಿಥಿಯಾಗಿದೆ. ಅವರು ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯ, ಬಿಜೆಪಿಯ ಮಾಜಿ ನಾಯಕರಾಗಿದ್ದು, ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಆರ್ ಎಸ್ ಎಸ್ ಪರಿವಾರದ ಉನ್ನತ ನಾಯಕರಲ್ಲಿ ಒಬ್ಬರು. ಗೋವಾ ವಿಮೋಚನಾ ಚಳವಳಿಯಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಗೌರವಾನ್ವಿತ ವಾಗ್ಮಿ. ಕರ್ನಾಟಕದಲ್ಲಿ ಬಿಜೆಎಸ್ ಮತ್ತು ಬಿಜೆಪಿಯನ್ನು ನಿರ್ಮಿಸುವಲ್ಲಿ ಅವರು ನೀಡಿದ ಕೊಡುಗೆಗಾಗಿ ಅವರಿಗೆ ‘ಕರ್ನಾಟಕ ಕೇಸರಿ’ ಎಂಬ ಬಿರುದು ಸಿಕ್ಕಿದೆ.
1920 ರಲ್ಲಿ ಜನಿಸಿದ ಜೋಶಿ, ಪುಣೆಯ ನೂತನ್ ಮರಾಠಿ ವಿದ್ಯಾಲಯದಿಂದ ಮೆಟ್ರಿಕ್ಯುಲೇಷನ್ ಮತ್ತು ಎಸ್. ಪಿ. ಕಾಲೇಜಿನಿಂದ ಇಂಗ್ಲಿಷ್ ಹಾನರ್ಸ್ನಲ್ಲಿ ಪದವಿ ಪಡೆದರು. ಜೋಶಿ ಅವರು ಬಾಲ್ಯದಿಂದಲೂ ಆರ್ ಎಸ್ ಎಸ್ ನಿಂದ ಹೆಚ್ಚು ಪ್ರಭಾವಿತರಾಗಿದ್ದರು. ಪುಣೆಯಲ್ಲಿ ಜನ ಸಂಘದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅವರು 1967 ಮತ್ತು 1971 ರಲ್ಲಿ ಮಧ್ಯಪ್ರದೇಶದ ಭೋಪಾಲ್ ಮತ್ತು ಶಾಜಾಪುರ ಕ್ಷೇತ್ರಗಳಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾದರು. ಜೋಶಿ 1978 ರಿಂದ 1894 ರವರೆಗೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಶ್ರೇಷ್ಠ ಭಾಷಣಕಾರರಾಗಿದ್ದ ಅವರು ವಿವಿಧ ಭಾರತೀಯ ಭಾಷೆಗಳಲ್ಲಿ ರಾಜಕೀಯ ಭಾಷಣವನ್ನು ಮಾಡಬಲ್ಲವರಾಗಿದ್ದರು.
I bow to ‘Karnataka Kesari’ Jagannath Rao Joshi ji on his punyatithi.
He was a great patriot and a distinguished leader with exceptional organizational skills. Joshi ji played an instrumental role in building BJP’s base in the state of Karnataka. pic.twitter.com/T4fW3Ao3WF
— Amit Shah (@AmitShah) July 15, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.