ನವದೆಹಲಿ: ಭಾರತವು ಶ್ರೇಷ್ಠ ಕಾನೂನು ಮತ್ತು ರಾಜಕೀಯ ಪರಿಣತಿಯನ್ನು ಹೊಂದಿರುವ ಬೀಡಾಗಿದೆ. ಭಾರತದ ಅನೇಕ ಕಾನೂನು ತಜ್ಞರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಭಾರತವನ್ನು ಹೆಮ್ಮೆ ಪಡಿಸುತ್ತಿದ್ದಾರೆ. ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಅವರನ್ನು ಸಿಂಗಾಪುರ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯದ (Singapore International Commercial Court-SICC) ಅಂತಾರಾಷ್ಟ್ರೀಯ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ.
ನ್ಯಾಯಮೂರ್ತಿ ಸಿಕ್ರಿ ಆಗಸ್ಟ್ 1 ರಂದು ಅಂತರಾಷ್ಟ್ರೀಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಅವಧಿ 2021 ರ ಜನವರಿ 4 ರಂದು ಮುಕ್ತಾಯಗೊಳ್ಳಲಿದೆ. ಅರೆಕಾಲಿಕ ನ್ಯಾಯಾಧೀಶರಾಗಿ ಅವರು ಕಾರ್ಯನಿರ್ವಹಣೆ ಮಾಡಲಿದ್ದಾರೆ. “ಇದು ಪೂರ್ಣ ಸಮಯದ ಕೆಲಸವಲ್ಲ. ನಾನು ವರ್ಷದಲ್ಲಿ 3-4 ವಾರಗಳ ಕಾಲ ಸಿಂಗಪುರಕ್ಕೆ ಹೋಗಬೇಕಾಗುತ್ತದೆ ಮತ್ತು ಪ್ರತಿ ಬಾರಿ ಕೆಲವು ಅಂತಾರಾಷ್ಟ್ರೀಯ ವಾಣಿಜ್ಯ ಪ್ರಕರಣಗಳನ್ನು ವಿಚಾರಣೆಗೊಳಪಡಿಸಬೇಕಾಗುತ್ತದೆ. ಹೀಗಾಗಿ ಇಲ್ಲಿ ಮೊದಲಿನಂತೆ ಸೇವೆಯನ್ನು ಮುಂದುವರಿಸುತ್ತೇನೆ” ಎಂದು ಸಿಕ್ರಿ ಹೇಳಿದ್ದಾರೆ.
SICC ಸಿಂಗಾಪುರ್ ಹೈಕೋರ್ಟ್ನ ಒಂದು ವಿಭಾಗ ಮತ್ತು ಸಿಂಗಾಪುರದ ಸುಪ್ರೀಂ ಕೋರ್ಟ್ನ ಒಂದು ಭಾಗವಾಗಿದೆ, ಅಂತಾರಾಷ್ಟ್ರೀಯ ವಾಣಿಜ್ಯ ವಿವಾದಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಇದನ್ನು ಸ್ಥಾಪನೆ ಮಾಡಲಾಗಿದೆ. ಇದು ಪ್ರಸ್ತುತ ತನ್ನ ಸಮಿತಿಯ ಭಾಗವಾಗಿ 16 ಅಂತಾರಾಷ್ಟ್ರೀಯ ನ್ಯಾಯಾಧೀಶರನ್ನು ಹೊಂದಿದೆ. ಈ ಅಂತಾರಾಷ್ಟ್ರೀಯ ನ್ಯಾಯಾಧೀಶರಲ್ಲಿ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಕೂಡ ಈಗ ಸೇರಿದ್ದಾರೆ
ನ್ಯಾಯಮೂರ್ತಿ ಎ. ಕೆ. ಸಿಕ್ರಿ ಅವರನ್ನು ಇತ್ತೀಚೆಗೆ News Broadcasting Standards Authority (NBSA)ನ ಅಧ್ಯಕ್ಷರನ್ನಾಗಿ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಶನ್ (ಎನ್ಬಿಎ) ನೇಮಕ ಮಾಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.