ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಅಂಶುಲ ಕಾಂತ್ ಅವರನ್ನು, ವಿಶ್ವ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ (ಎಂಡಿ)ರಾಗಿ ಮತ್ತು ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ಒ) ನೇಮಕ ಮಾಡಲಾಗಿದೆ.
ವಿಶ್ವ ಬ್ಯಾಂಕಿನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರು ಶುಕ್ರವಾರ ಈ ದೊಡ್ಡ ಸುದ್ದಿಯನ್ನು ಜಗತ್ತಿಗೆ ಘೋಷಿಸಿದ್ದಾರೆ. ಎಂಡಿ ಮತ್ತು ಸಿಎಫ್ಒ ಆಗಿ, ಅಂಶುಲ ಅವರು ಇಡೀ ವಿಶ್ವಬ್ಯಾಂಕ್ ಸಮೂಹದ ಫಿನಾನ್ಶಿಯಲ್ ಮತ್ತು ರಿಸ್ಕ್ ಮ್ಯಾನೇಜ್ಮೆಂಟ್ ಅನ್ನು ನೋಡಿಕೊಳ್ಳಲಿದ್ದಾರೆ.
ಅಂಶುಲ ಅವರು, ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್ನಿಂದ ಎಕನಾಮಿಕ್ ಹಾನರ್ಸ್ ಪದವಿ ಪಡೆದುಕೊಂಡಿದ್ದಾರೆ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.
“ಅಂಶುಲ ಕಾಂತ್ ಅವರನ್ನು ವಿಶ್ವ ಬ್ಯಾಂಕ್ ಸಮೂಹ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಸಿಎಫ್ಒ ಆಗಿ ನೇಮಕ ಮಾಡಲು ನನಗೆ ತುಂಬಾ ಸಂತೋಷವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಎಫ್ಒ ಆಗಿ ಅಂಶುಲ ಅವರು, ಹಣಕಾಸು, ಬ್ಯಾಂಕಿಂಗ್ ಮತ್ತು ತಂತ್ರಜ್ಞಾನದ ನವೀನ ಬಳಕೆಯಲ್ಲಿ 35 ವರ್ಷಗಳ ಪರಿಣತಿಯನ್ನು ಹೊಂದಿದ್ದಾರೆ” ಎಂದು ಮಾಲ್ಪಾಸ್ ಘೋಷಣೆಯ ವೇಳೆ ಹೇಳಿಕೊಂಡಿದ್ದಾರೆ.
ಎಸ್ಬಿಐನ ಸಿಎಫ್ಒ ಆಗಿ, ಅಂಶುಲ ಅವರು $ 38 ಬಿಲಿಯನ್ ಆದಾಯ ಮತ್ತು $500 ಬಿಲಿಯನ್ ಆಸ್ತಿಯನ್ನು ನಿರ್ವಹಿಸುತ್ತಿದ್ದರು ಎಂಬುದು ಗಮನಾರ್ಹ ವಿಷಯವಾಗಿದೆ. ಬಂಡವಾಳದ ನೆಲೆಯನ್ನು ಬಹಳವಾಗಿ ಸುಧಾರಿಸಿದ್ದು ಮತ್ತು ತನ್ನ ಅಧಿಕಾರ ವ್ಯಾಪ್ತಿಯೊಳಗೆ ಎಸ್ಬಿಐನ ದೀರ್ಘಾವಧಿಯ ಸುಸ್ಥಿರತೆಯನ್ನು ಕಾಪಾಡಿಕೊಂಡಿದ್ದು ಅವರ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.