ನವದೆಹಲಿ: ಇದೇ ಮೊದಲ ಬಾರಿಗೆ ಭಾರತದ ಜಲಮಾರ್ಗವು ಭೂತಾನ್ ಮತ್ತು ಬಾಂಗ್ಲಾದೇಶವನ್ನು ಪರಸ್ಪರ ಸಂಪರ್ಕಿಸುತ್ತಿದೆ. ಎರಡು ದೇಶಗಳ ನಡುವೆ ಸರಕುಗಳನ್ನು ಸಾಗಾಣೆ ಮಾಡಲು ಭಾರತದ ಜಲಮಾರ್ಗವನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಹಡಗು ಎಂವಿ ಎಎಐ ಮೂಲಕ ಬ್ರಹ್ಮಪುತ್ರ ನದಿಯನ್ನು ಬಳಸಿಕೊಂಡು ಭೂತಾನ್ ಬಾಂಗ್ಲಾಗೆ 1000 ಮೆಟ್ರಿಕ್ ಟನ್ ಕಲ್ಲುಗಳನ್ನು ಪೂರೈಕೆ ಮಾಡುತ್ತಿದೆ. ಅಸ್ಸಾಂನ ದುಬ್ರಿ ಮೂಲಕ ಇದು ಬಾಂಗ್ಲಾಗೆ ತಲುಪಲಿದೆ.
ಹಡಗು ಇನ್ಲ್ಯಾಂಡ್ ವಾಟರ್ವೇಸ್ ಆಫ್ ಇಂಡಿಯಾ (IWAI)ಗೆ ಸೇರಿದ್ದಾಗಿದ್ದು, ಭೂತಾನ್ ಸರಕುಗಳನ್ನು ಹೊತ್ತುಕೊಂಡು ಬಾಂಗ್ಲಾದೇಶದ ನಾರಾಯಣಗಂಜ್ ಅನ್ನು ತಲುಪಲಿದೆ ಎಂದು ಮೂಲಗಳು ತಿಳಿಸಿವೆ.
ಶಿಪ್ಪಿಂಗ್ ಸಚಿವಾಲಯದ ರಾಜ್ಯಖಾತೆ ಸಚಿವ ಮನ್ಸೂಕ್ ಮಾಂಡವೀಯ ಅವರು ಡಿಜಿಟಲ್ ಆಗಿ ಈ ಹಡಗಿಗೆ ಚಾಲನೆಯನ್ನು ನೀಡಿದ್ದಾರೆ, ಭಾರತ ಬಾಂಗ್ಲಾದೇಶದ ಶಿಷ್ಟಾಚಾರ ಮಾರ್ಗವನ್ನು ಇದು ಬಳಕೆ ಮಾಡಿಕೊಳ್ಳಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಈ ಮಾರ್ಗದ ಮೂಲಕ ಸರಕು ಸಾಗಣೆಯ ಮಾಡುವುದರಿಂದ ಸಮಯವನ್ನು 8ರಿಂದ 10 ದಿನಗಳವರೆಗೆ ಕಡಿತಗೊಳಿಸಬಹುದಾಗಿದೆ ಮತ್ತು ಇದು ಸಾರಿಗೆ ವೆಚ್ಚವನ್ನು ಶೇ. 30 ರಷ್ಟು ಕಡಿಮೆ ಮಾಡುತ್ತದೆ ಮತ್ತು ಲಾಜಿಸ್ಟಿಕ್ಸ್ ವೆಚ್ಚವನ್ನು ಕೂಡ ತಗ್ಗಿಸುತ್ತದೆ” ಎಂದು ಹೇಳಿದ್ದಾರೆ.
ಭೂತಾನ್ನ ಫ್ಯುಯೆಂಟ್ಶೋಲಿಂಗ್ನಿಂದ ಅಸ್ಸಾಂನ ಧುಬ್ರಿಗೆ ಕಲ್ಲುಗಳನ್ನು ಟ್ರಕ್ಗಳು ಸಾಗಿಸುತ್ತಿವೆ, ಈ ಎರಡು ಪ್ರದೇಶಗಳ ನಡುವಿನ ಒಟ್ಟು ಅಂತರ 160 ಕಿ.ಮೀ. ಅದೇ 1000 ಮೆ.ಟನ್ ಕಲ್ಲುಗಳನ್ನು ರಸ್ತೆ ಮೂಲಕ ಸಾಗಿಸಿದರೆ, 70 ಟ್ರಕ್ಗಳು ಬೇಕಾಗುತ್ತವೆ.
ಇತರ ಕನಿಷ್ಠ 10 ರಾಷ್ಟ್ರೀಯ ಜಲಮಾರ್ಗಗಳು ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿವೆ. ಬ್ರಹ್ಮಪುತ್ರ ನದಿ ರಾಷ್ಟ್ರೀಯ ಜಲಮಾರ್ಗ ಸಂಖ್ಯೆ 2 ಆಗಿದೆ.
ಸುಮಾರು 14,500 ಕಿ.ಮೀ ಸಂಚರಿಸಬಹುದಾದ ಜಲಮಾರ್ಗಗಳಲ್ಲಿ ನದಿಗಳು, ಕಾಲುವೆಗಳನ್ನು ಒಳಗೊಂಡಿವೆ. ಪ್ರಸ್ತುತ ಒಳನಾಡಿನ ಜಲ ಸಾರಿಗೆ ವ್ಯವಸ್ಥೆಗಳಿಂದ ವಾರ್ಷಿಕವಾಗಿ ಸುಮಾರು 55 ದಶಲಕ್ಷ ಟನ್ ಸರಕುಗಳನ್ನು ಸಾಗಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.