ವಾಷಿಂಗ್ಟನ್: ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ಹೆಚ್ಚುತ್ತಿರುವ ಪರಸ್ಪರ ಕಾರ್ಯಸಾಧ್ಯತೆ ಮತ್ತು ಮಾಹಿತಿ ಹಂಚಿಕೆ ಸಾಮರ್ಥ್ಯಗಳಿಗೆ ಪೆಂಟಗನ್ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಅಮೆರಿಕದ ಉನ್ನತ ಜನರಲ್ ತನ್ನ ದೇಶದ ಜನ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಜಂಟಿ ಚೀಫ್ಸ್ ಆಫ್ ಸ್ಟಾಫ್ ಆಗಿ ನಾಮನಿರ್ದೇಶನಗೊಂಡಿರುವ ಜನರಲ್ ಮಾರ್ಕ್ ಎ ಮಿಲ್ಲೆ ಅವರು, ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಕನ್ಫರ್ಮೇಶನ್ ಹಿಯಿರಿಂಗ್ನ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಿದ ವೇಳೆ ಈ ಮಾತನ್ನು ಹೇಳಿದ್ದಾರೆ.
“ನನ್ನ ಆಯ್ಕೆ ದೃಢಪಟ್ಟರೆ, ಪ್ರಸ್ತುತ ಭಾರತ ಮತ್ತು ಅಮೆರಿಕಾದ ನಡುವೆ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಮಿಲಿಟರಿ-ಮಿಲಿಟರಿ ಸಂವಾದಗಳ ಮೂಲಕ ಮತ್ತು 2 + 2 ಮಂತ್ರಿಮಂಡಲದಂತಹ ಹಿರಿಯ ಮಟ್ಟದ ಸಭೆಗಳಲ್ಲಿ ಭಾಗವಹಿಸುವುದರ ಮೂಲಕ ಭಾರತದೊಂದಿಗಿನ ರಕ್ಷಣಾ ಸಂಬಂಧವನ್ನು ಹೆಚ್ಚಿಸುವುದು ಮತ್ತು ನಿರ್ವಹಿಸುವುದು ನನ್ನ ತಂತ್ರವಾಗಿದೆ” ಎಂದು ಜನರಲ್ ಮಿಲ್ಲೆ ಗುರುವಾರ ಹೇಳಿದ್ದಾರೆ.
“ನಿರ್ದಿಷ್ಟವಾಗಿ, ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ನಮ್ಮ ಪರಸ್ಪರ ಕಾರ್ಯಸಾಧ್ಯತೆ ಮತ್ತು ಮಾಹಿತಿ ಹಂಚಿಕೆ ಸಾಮರ್ಥ್ಯಗಳನ್ನು ಹೆಚ್ಚಿಸಲು ನಾನು ಆದ್ಯತೆ ನೀಡುತ್ತೇನೆ” ಎಂದು ಅವರು ಹೇಳಿದರು.
ಸೆನೆಟ್ ದೃಢಪಡಿಸಿದರೆ, ಮಿಲ್ಲೆ ಅವರು ಯುಎಸ್ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಆಗಿ ನೇಮಕವಾಗಲಿದ್ದಾರೆ. ಜನರಲ್ ಜೋಸೆಫ್ ಡನ್ಫೋರ್ಡ್ ಅವರನ್ನು ರಿಪ್ಲೇಸ್ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.