ನವದೆಹಲಿ: ರೋಹಿಂಗ್ಯಾ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತ, 2017ರಲ್ಲಿ ಮಯನ್ಮಾರಿಗೆ ನೀಡಿದ ಭರವಸೆಯಂತೆ ವಸತಿಗಳನ್ನು ಹಸ್ತಾಂತರ ಮಾಡಿದೆ. ಹಿಂಸಾಚಾರದಿಂದಾಗಿ ಮಯನ್ಮಾರ್ ಬಿಟ್ಟು ಹೊರ ಬಂದು ನಿರಾಶ್ರಿತರಾಗಿರುವ ರೊಹಿಂಗ್ಯಾಗಳಿಗೆ ಪುನರ್ವಸತಿಯನ್ನು ಕಲ್ಪಿಸಿಕೊಡುವ ಸಲುವಾಗಿ ರಾಖೈನ್ ಪ್ರದೇಶದಲ್ಲಿ ವಸತಿಗಳನ್ನು ಭಾರತ ನಿರ್ಮಾಣ ಮಾಡಿದ್ದು, ಇದೀಗ ಅದನ್ನು ಮಯನ್ಮಾರಿಗೆ ಹಸ್ತಾಂತರ ಮಾಡಿದೆ.
ಉತ್ತರ ರಾಖೈನ್ ಪ್ರದೇಶದ ಮೂರು ಹಳ್ಳಿಗಳಲ್ಲಿ 250 ಮನೆಗಳನ್ನು ಭಾರತ ಹಸ್ತಾಂತರ ಮಾಡಿದೆ. 250 ಮನೆಗಳ ಪೈಕಿ, ಶ್ವೆ ಜಾರ್ ಗ್ರಾಮದಲ್ಲಿ 148, ಕೈನ್ ಚೌಂಗ್ ಗ್ರಾಮದಲ್ಲಿ 60 ಮತ್ತು ನ್ಯಾನ್ ಥಾರ್ ಟೌಂಗ್ನಲ್ಲಿ 42 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮೂರೂ ಗ್ರಾಮಗಳು ಮಾಂಗ್ಡಾವ್ ಜಿಲ್ಲೆಯಲ್ಲಿವೆ. 2018 ರ ಡಿಸೆಂಬರ್ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 50 ಮನೆಗಳನ್ನು ಹಸ್ತಾಂತರಿಸಿದ್ದರು. ಉಳಿದ ವಸತಿಗಳನ್ನು ರಾಯಭಾರಿ ಸೌರಭ್ ಕುಮಾರ್ ಹಸ್ತಾಂತರಿಸಿದ್ದಾರೆ.
25 ಮಿಲಿಯನ್ ಡಾಲರ್ ವೆಚ್ಚದ ರಾಖೈನ್ ರಾಜ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಭಾರತ ಹಮ್ಮಿಕೊಂಡಿದ್ದು, ಇದು ಹಿಂಸಾಚಾರದಿಂದ ಹಾನಿಗೊಳಗಾದ ರಾಖೈನ್ ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಸುಸ್ಥಿರ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ. 2017 ರ ಸೆಪ್ಟೆಂಬರ್ ತಿಂಗಳಲ್ಲಿ ರಾಖೈನ್ ರಾಜ್ಯದ ಪರಿಸ್ಥಿತಿಯ ಕುರಿತು ವಿದೇಶಾಂಗ ಸಚಿವಾಲಯವು, “ರಾಖೈನ್ ರಾಜ್ಯದ ಪರಿಸ್ಥಿತಿಯನ್ನು ಸಂಯಮ ಮತ್ತು ಪ್ರಬುದ್ಧತೆಯಿಂದ ನಿಭಾಯಿಸಬೇಕೆಂದು ನಾವು ಒತ್ತಾಯಿಸುತ್ತೇವೆ, ನಾಗರಿಕರ ಮತ್ತು ಭದ್ರತಾ ಪಡೆಗಳ ಕಲ್ಯಾಣವನ್ನು ಕೇಂದ್ರೀಕರಿಸುವುದು ಅತ್ಯಗತ್ಯ” ಎಂದು ಪ್ರತಿಪಾದಿಸಿತ್ತು.
ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ಭಾರತ ಇಷ್ಟೆಲ್ಲಾ ಕಾಳಜಿಯನ್ನು ವಹಿಸಿದರೂ ಕೂಡ, ಗಡೀಪಾರು ಮಾಡುವ ಸುಪ್ರೀಂಕೋರ್ಟ್ ನಿಲುವಿಗೆ ಬದ್ಧತೆಯನ್ನು ತೋರಿಸಿದ್ದಕ್ಕಾಗಿ ಅಮ್ನೆಸ್ಟಿ ಇಂಟರ್ನ್ಯಾಷನಲ್ನಂತಹ ಮಾನವ ಹಕ್ಕುಗಳಿಂದ ಸರ್ಕಾರ ಟೀಕೆಗಳನ್ನು ಎದುರಿಸುತ್ತಿರುವುದು ನಿಜಕ್ಕೂ ದುರಾದೃಷ್ಟಕರ. ಸುಮಾರು 40,000 ರೋಹಿಂಗ್ಯಾ ನಿರಾಶ್ರಿತರು ಭಾರತದಲ್ಲಿ ನೆಲೆಸಿದ್ದಾರೆ, ಅದರಲ್ಲಿ 16,000 ಜನರು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.
Commitment to neighborhood.
India handed over 250 pre-fabricated houses for use of displaced returnees, under its Rakhine State Development Programme worth US$ 25 million, at a ceremony in Maung Daw, Rakhine State. https://t.co/4wjErcqjNH pic.twitter.com/2LpIWS8Qup
— Raveesh Kumar (@MEAIndia) July 9, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.