ಶಾರ್ಜಾ: ಯುಎಇ ಮೂಲದ ಭಾರತೀಯ ಉದ್ಯಮಿ ಲಾಲು ಸ್ಯಾಮ್ಯುಯೆಲ್ ಅವರು ಗೋಲ್ಡ್ ಕಾರ್ಡ್ ಪರ್ಮನೆಂಟ್ ರೆಸಿಡೆನ್ಸಿಯನ್ನು ಪಡೆದ ಶಾರ್ಜಾದ ಮೊದಲ ವಲಸಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಶಾರ್ಜಾದ ವಸತಿ ಮತ್ತು ವಿದೇಶಿ ವ್ಯವಹಾರಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬ್ರಿಗೇಡಿಯರ್ ಆರಿಫ್ ಮೊಹಮ್ಮದ್ ಅಲ್ ಶಮ್ಸಿ ಅವರು ಮಂಗಳವಾರ ಶಾರ್ಜಾದಲ್ಲಿ ಸ್ಯಾಮ್ಯುಯೆಲ್ ಅವರಿಗೆ ಮೊದಲ ಗೋಲ್ಡ್ ಕಾರ್ಡ್ ರೆಸಿಡೆನ್ಸಿಯನ್ನು ಹಸ್ತಾಂತರಿಸಿದರು.
ಲಾಲು ಸ್ಯಾಮ್ಯುಯೆಲ್ ಅವರು ಹಾರ್ಡ್ವೇರ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ ‘ಕಿಂಗ್ಸ್ಟನ್ ಹೋಲ್ಡಿಂಗ್ಸ್’ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಎರಡು ದಿನಗಳ ಹಿಂದೆ, ಫೋರ್ಬ್ಸ್ ಮಿಡಲ್ ಈಸ್ಟ್ ಅವರನ್ನು ಸತತ ಆರನೇ ಬಾರಿಗೆ ‘ಅರಬ್ ಜಗತ್ತಿನ 100 ಅತ್ಯಂತ ಪ್ರಭಾವಶಾಲಿ ಭಾರತೀಯ ನಾಯಕರಲ್ಲಿ ಒಬ್ಬರು’ ಎಂದು ಘೋಷಿಸಿತ್ತು. ಈಗ ಅವರು ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಘೋಷಿಸಿದ ಯೋಜನೆಯಡಿಯಲ್ಲಿ ಗೋಲ್ಡ್ ಕಾರ್ಡ್ ಸ್ವೀಕರಿಸಿದ 27 ಬಿಲಿಯನ್ ಯುಎಸ್ ಡಾಲರ್ ಗಿಂತಲೂ ಹೆಚ್ಚು ಹೂಡಿಕೆ ಮಾಡಿದ 6,800 ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ.
ಸಾಮಾನ್ಯವಾಗಿ, 5-10 ವರ್ಷಗಳ ದೀರ್ಘಾವಧಿಯ ವೀಸಾವನ್ನು ಉದ್ಯಮಿಗಳು ಮತ್ತು ಪ್ರತಿಭಾವಂತ ವ್ಯಕ್ತಿಗಳಿಗೆ ಯುಎಇನಲ್ಲಿ ನೀಡಲಾಗುತ್ತದೆ. ಆದರೆ, ಗೋಲ್ಡ್ ಕಾರ್ಡ್ ಅನ್ನು ಯುಎಇಯ ಶಾಶ್ವತ ನಿವಾಸವನ್ನು ಹೊಂದಿರುವವರಿಗೆ ಮಾತ್ರ ನೀಡಲಾಗುತ್ತದೆ. ಈ ಕಾರ್ಡ್ ಹೊಂದಿರುವವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಯಾವುದೇ ಪ್ರಾಯೋಜಕರು ಇಲ್ಲದೆಯೇ ರೆಸಿಡೆನ್ಸಿ ವೀಸಾ ಸೇರಿದಂತೆ ವಿವಿಧ ಸವಲತ್ತುಗಳು ಮತ್ತು ಸೌಲಭ್ಯಗಳನ್ನು ಹೊಂದುವ ಅರ್ಹತೆ ಇದೆ. ಅಲ್ಲದೇ, ಅವರು ಮೂರು ಕಾರ್ಮಿಕರಿಗೆ ಪ್ರಾಯೋಜಕತ್ವ ನೀಡಬಹುದು ಮತ್ತು ತಮ್ಮ ಹಿರಿಯ ಉದ್ಯೋಗಿಯೊಬ್ಬರಿಗೆ ರೆಸಿಡೆನ್ಸಿ ವೀಸಾ ನೀಡಬಹುದು.
ಆಭರಣ ಕಂಪನಿ ಮಲಬಾರ್ ಗ್ರೂಪ್ನ ಸಹ-ಅಧ್ಯಕ್ಷ ಮತ್ತು ಪೇಸ್ ಸಮೂಹದ ಅಧ್ಯಕ್ಷರಾದ ಡಾ.ಪಿ.ಎ.ಇಬ್ರಾಹಿಂ ಹಾಜಿ ಅವರು ಕೂಡ ನಿನ್ನೆ ತಮ್ಮ ಗೋಲ್ಡ್ ಕಾರ್ಡ್ ಸ್ವೀಕರಿಸಿದರು.
Brigadier Arif Mohammed Al Shamsi, Executive Director of Residency & Foreigners Affairs in Sharjah, handed over the #first #GoldCard Permanent Residence in #Sharjah to Mr. Lalu Samuel, #Chairman & Managing Director of the Kingston Holdings Group.#10yearshttps://t.co/ynDWOexF0D pic.twitter.com/ARSXiOIH53
— Kingston Holdings (@KingstonGroup) July 8, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.