ನವದೆಹಲಿ: ಹಿಂದಿಯಲ್ಲಿ, ‘ಮಾನವ್ ಸೇವಾ ಹಿ ಪ್ರಭು ಸೇವಾ ಹೈ’ಎಂಬ ಮಾತಿದೆ. ಅಂದರೆ ಮಾನವೀಯತೆಯ ಸೇವೆ ದೇವರ ಸೇವೆ ಎಂದರ್ಥ. ಇದಕ್ಕೆ ದೊಡ್ಡ ಉದಾಹರಣೆಯೆಂದರೆ, ಪ್ರಸ್ತುತ ನಡೆಯುತ್ತಿರುವ ಅಮರನಾಥ ಯಾತ್ರೆಯ ಸಂದರ್ಭ ತಮಗೆ ಸಮರ್ಪಿತವಾಗಿ ಸೇವೆ ಮಾಡಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯ ಯೋಧರಿಗೆ ಯಾತ್ರಿಕರು ಆಶೀರ್ವದಿಸುವ ಮತ್ತು ವಂದಿಸುವ ದೃಶ್ಯ. ಎಷ್ಟರ ಮಟ್ಟಿಗೆ ಐಟಿಬಿಪಿ ಯೋಧರು ಯಾತ್ರಿಕರ ಸೇವೆ ಮಾಡುತ್ತಿದ್ದಾರೆಂದರೆ, ಬಾಲ್ಟಾಲ್ ಮಾರ್ಗದಲ್ಲಿ ಯೋಧರು ತಾವೇ ತಡೆಗೋಡೆಗಳಾಗಿ ನಿಂತು ಅಮರನಾಥ ಯಾತ್ರಿಗಳು ಸುರಕ್ಷಿತವಾಗಿ ಸಾಗುವಂತೆ ಮಾಡುತ್ತಿದ್ದಾರೆ. ಪರ್ವತದಿಂದ ಕಲ್ಲುಗಳು, ಬಂಡೆಗಳು ಉರುಳುತ್ತಿದ್ದ ಸಂದರ್ಭ ಐಟಿಬಿಪಿ ಯೋಧರು ಅವುಗಳನ್ನು ತಡೆದು ಪ್ರಯಾಣಿಕರಿಗೆ ಮಾರ್ಗವನ್ನು ಸರಾಗ ಮಾಡಿ ಕೊಡುತ್ತಿದ್ದಾರೆ.
ಬಾಲ್ಟಲ್ ದಾರಿಯ ಸಂಗಮ್ ಪ್ರದೇಶದಲ್ಲಿನ ಮೆಡಿಕಲ್ ಘಟಕಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳಾ ಯಾತ್ರಿಯೊಬ್ಬರನ್ನು ಐಟಿಬಿಪಿ ಯೋಧರು ಹೊತ್ತುಕೊಂಡು ಬಂದು ಚಿಕಿತ್ಸೆ ನೀಡಿದ್ದಾರೆ. ಇದೇ ರೀತಿ ಪ್ರಯಾಣದ ಆಯಾಸದಿಂದ 25 ಕ್ಕೂ ಹೆಚ್ಚು ಯಾತ್ರಿಕರು ಬಳಲಿದ್ದು ಅವರಿಗೆ ಆಕ್ಸಿಜನ್ ನೀಡುವ ಕೆಲವನ್ನೂ ಐಟಿಬಿಪಿ ಯೋಧರು ಮಾಡಿದ್ದಾರೆ.
ಅಮರನಾಥ ಯಾತ್ರೆಯು ಜುಲೈ 1ರಂದು ಆರಂಭಗೊಂಡಿದ್ದು, ಆಗಸ್ಟ್ 15ರವರೆಗೆ ಮುಂದುವರೆಯಲಿದೆ. ಅಂದರೆ ಮಾಸಿಕ ಶಿವರಾತ್ರಿಗೆ ಆರಂಭಗೊಂಡ ಈ ಯಾತ್ರೆ ಶ್ರಾವಣ ಪೂರ್ಣಿಮೆಯಂದು ಸಮಾಪನಗೊಳ್ಳುತ್ತದೆ.
1,174 ಪುರುಷರು, 397 ಮಹಿಳೆಯರು, 15 ಮಕ್ಕಳು, ಮತ್ತು 49 ಸಂತರು ಸೇರಿದಂತೆ ಒಟ್ಟು 1,617 ಯಾತ್ರಿಕರು ಪಹಲ್ಗಮ್ ಮಾರ್ಗದಿಂದ ಮತ್ತು 2,800 ಯಾತ್ರಿಕರು (2,321 ಪುರುಷರು, 463 ಮಹಿಳೆಯರು, ಮತ್ತು 16 ಮಕ್ಕಳು) ಬಾಲ್ಟಾಲ್ ಮಾರ್ಗದಿಂದ ಅಮರನಾಥ ಗುಹೆ ದೇಗುಲಕ್ಕೆ ಪ್ರಯಾಣವನ್ನು ಪ್ರಾರಂಭಿಸಿದರು.
3,888 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹೆಯನ್ನು ಹಿಂದೂಗಳ ಪವಿತ್ರ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ವಾರ್ಷಿಕ ಯಾತ್ರೆಯು ಅನಂತ್ನಾಗ್ ಜಿಲ್ಲೆಯ ಸಾಂಪ್ರದಾಯಿಕ 36 ಕಿಲೋಮೀಟರ್ ಪಹಲ್ಗಮ್ ಮಾರ್ಗದ ಮೂಲಕ ಮತ್ತು ಗಂಡರ್ಬಾಲ್ ಜಿಲ್ಲೆಯ 14 ಕಿಲೋಮೀಟರ್ ಬಾಲ್ಟಾಲ್ ಟ್ರ್ಯಾಕ್ನಿಂದ ಜರುಗುತ್ತದೆ.
ITBP personnel braving shooting stones at a snow slope by placing Shield wall to ensure safe passage of #Amarnath Yatris on Baltal route.#Himveers pic.twitter.com/fVSIYEzn8x
— ITBP (@ITBP_official) July 4, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.