ನವದೆಹಲಿ: ಸರ್ಕಾರಿ ಸ್ವಾಮ್ಯದ ಪ್ರಸಾರಕ ಪ್ರಸಾರ ಭಾರತಿಯು ಅವಳಿ ಕಾರ್ಯಕ್ರಮದ ಮೂಲಕ ಭಾರತದ ಕಥೆಯನ್ನು ಜಾಗತಿಕವಾಗಿ ಹೇಳಲು ಸಿದ್ಧವಾಗಿದೆ. ಡಿಡಿ ಇಂಡಿಯಾ ಟೆಲಿವಿಷನ್ ಚಾನೆಲ್ ಮತ್ತು ಸುದ್ದಿ ಪ್ರಸಾರ ಮಾಡುವ, ಟಿವಿ ಹಾಗೂ ರೇಡಿಯೊದಿಂದ ವಿಶೇಷ ವೈಶಿಷ್ಟ್ಯಗಳನ್ನು ಸಂಯೋಜಿಸುವ ಡಿಜಿಟಲ್ ಆ್ಯಪ್ ನ್ಯೂಸೊನೇರ್ ಮೂಲಕ ಈ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.
ಈ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡಿರುವ ಕಾರ್ಯಕಾರಿ ಅಧಿಕಾರಿಗಳ ಪ್ರಕಾರ, ಕಾರ್ಯಕ್ರಮದ ವಿಷಯವನ್ನು ಬಲಪಡಿಸುವ ಮತ್ತು ಎರಡೂ ವೇದಿಕೆಗಳಿಗೆ ಮಾನವ ಸಂಪನ್ಮೂಲ ನಿಯೋಜನೆಯನ್ನು ಹೆಚ್ಚಿಸುವ ಕಾರ್ಯ ಪ್ರಸ್ತುತ ನಡೆಯುತ್ತಿದೆ, ಇದು ಮುಂಬರುವ ದಿನಗಳಲ್ಲಿ ವಿಶಾಲ ಭೌಗೋಳಿಕ ವಲಯದ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ಪ್ರಸಾರ ಭಾರತಿಯು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಇರುವ ಸ್ವಾಯತ್ತ ಸಂಸ್ಥೆಯಾಗಿದ್ದು, ದೂರದರ್ಶನ (ಡಿಡಿ) ಮತ್ತು ಆಲ್ ಇಂಡಿಯಾ ರೇಡಿಯೋ (ಎಐಆರ್) ಅದರ ಪ್ರಸಾರ ಅಂಗಗಳಾಗಿವೆ
ಭಾರತೀಯ ದೃಷ್ಟಿಕೋನದಿಂದ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸುದ್ದಿ ಮತ್ತು ಅಭಿಪ್ರಾಯಗಳನ್ನು ಪ್ರಸಾರ ಮಾಡುವ ವೇದಿಕೆಯನ್ನು ಪ್ರಾರಂಭಿಸುವ ಪ್ರಸ್ತಾಪವನ್ನು 2017 ರಲ್ಲಿ ಪ್ರಸಾರ ಭಾರತಿ ಅಧ್ಯಕ್ಷ ಎ ಸೂರ್ಯ ಪ್ರಕಾಶ್ ನೇತೃತ್ವದ ಸಮಿತಿಯು ರೂಪಿಸಿತ್ತು.
ಅನಿವಾಸಿ ಭಾರತೀಯರ ಹೊರತಾಗಿಯೂ ಇಂಗ್ಲಿಷ್ ಮಾತನಾಡುವ ಪ್ರೇಕ್ಷಕರನ್ನು, ಜಾಗತಿಕ ಅಭಿಪ್ರಾಯ ತಯಾರಕರನ್ನು ಮತ್ತು ಪ್ರಭಾವಿಗಳನ್ನು ತಲುಪುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ವಿದೇಶಿ ಮಾಧ್ಯಮಗಳು ಭಾರತವನ್ನು ನಕಾರಾತ್ಮಕವಾಗಿ ಪ್ರಸ್ತುತಪಡಿಸುವುದಕ್ಕೆ ಕೌಂಟರ್ ನೀಡುವಂತಹ ವಿಷಯಗಳನ್ನು ಇದು ಪ್ರಸಾರಗೊಳಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.