ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ನೀಡಲಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ದಾಖಲಿಸಿದ ಬಳಿಕ ಇದು ವಾರಣಾಸಿಗೆ ಅವರು ನೀಡುತ್ತಿರುವ ಎರಡನೇಯ ಭೇಟಿಯಾಗಿದೆ. ದೇಶವ್ಯಾಪಿಯಾಗಿ ಇಂದೇ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭಗೊಳ್ಳಲಿದೆ.
“ನಮ್ಮ ಸ್ಪೂರ್ತಿಯಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜಯಂತಿಯ ಅಂಗವಾಗಿ ಬಿಜೆಪಿ ಫಾರ್ ಇಂಡಿಯಾ ಸದಸ್ಯತ್ವ ಅಭಿಯಾನ ಆರಂಭವಾಗಲಿದೆ, ಈ ಕಾರ್ಯಕ್ರಮಕ್ಕೆ ನಾನು ಕಾಶಿಯಲ್ಲಿ ಚಾಲನೆ ನೀಡಲಿದ್ದೇನೆ. ಈ ಅಭಿಯಾನ ಎಲ್ಲಾ ಸ್ಥರದ ಜನರನ್ನು ಬಿಜೆಪಿ ಕುಟುಂಬದೊಂದಿಗೆ ಬೆಸಯಲಿದೆ. ಇದು ನಮ್ಮ ಪಕ್ಷವನ್ನು ಬಲಪಡಿಸಲಿದೆ” ಎಂದು ಮೋದಿ ಟ್ವಿಟ್ ಮೂಲಕ ತಿಳಿಸಿದ್ದಾರೆ.
ವಾರಣಾಸಿಗೆ ಭೇಟಿ ನೀಡಲಿರುವ ಮೋದಿಯವರು, ಅಲ್ಲಿನ ವಿಮಾನನಿಲ್ದಾಣದಲ್ಲಿ ಸ್ಥಾಪನೆ ಮಾಡಲಾದ ಲಾಲ್ ಬಹದ್ದೂರ್ ಶಾಸ್ತ್ರೀ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಲಿದ್ದಾರೆ. ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯ್ಕ್, ಕಾರ್ಯನಿರತ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವ ಮಹೇಂದ್ರ ನಾಥ ಪಾಂಡೆ ಮೋದಿಗೆ ಸಾಥ್ ನೀಡಲಿದ್ದಾರೆ. ಬಳಿಕ ಗಿಡ ನೆಡುವ ಅಭಿಯಾನಕ್ಕೂ ಚಾಲನೆಯನ್ನು ನೀಡಲಿದ್ದಾರೆ.
ವಾರಣಾಸಿಯಲ್ಲಿನ ದಶಶ್ವಮೇಧ ಘಾಟ್ನಲ್ಲಿರುವ ವರ್ಚುವಲ್ ಮ್ಯೂಸಿಯಂ ಮನ್ ಮಹಲ್ ಗೂ ಅವರು ಭೇಟಿ ನೀಡಲಿದ್ದಾರೆ.
ಶ್ಯಾಮ ಪ್ರಸಾದ್ ಮುಖರ್ಜಿಯವರ ಜನ್ಮದಿನದಂದೇ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.