ನವದೆಹಲಿ: ಪ್ರಯಾಣಿಕರಿಗೆ ವೇಗದ ರೈಲು ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿರುವ ಭಾರತೀಯ ರೈಲ್ವೆಯ ‘ಮಿಷನ್ ರಫ್ತಾರ್’ ನಡಿಯಲ್ಲಿ ವಿವಿಧ ವಲಯಗಳ 261 ರೈಲುಗಳ ವೇಗವನ್ನು 110 ನಿಮಿಷಗಳವರೆಗೆ ಹೆಚ್ಚಳಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರ ಕನಿಷ್ಠ 2 ಗಂಟೆಗಳು ಉಳಿತಾಯವಾಗುತ್ತಿವೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
‘ಮಿಷನ್ ರಫ್ತಾರ್’ ಅನ್ನು 2016-17ರ ರೈಲ್ವೆ ಬಜೆಟಿನಲ್ಲಿ ಘೋಷಿಸಲಾಗಿದೆ. ಸರಕು ರೈಲುಗಳ ಸರಾಸರಿ ವೇಗವನ್ನು ದ್ವಿಗುಣಗೊಳಿಸುವ ಗುರಿಯನ್ನು ಇದು ಹೊಂದಿದೆ ಮತ್ತು ಐದು ವರ್ಷಗಳ ಅವಧಿಯಲ್ಲಿ ಎಲ್ಲಾ ಉಪನಗರವಲ್ಲದ ಪ್ರಯಾಣಿಕ ರೈಲುಗಳ ಸರಾಸರಿ ವೇಗವನ್ನು 25 ಕಿ.ಮೀ ವೇಗದಲ್ಲಿ ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಅಲ್ಲದೇ, ಭಾರತೀಯ ರೈಲ್ವೆ 49 ಹೊಸ ರೈಲುಗಳನ್ನು ಹೊಸ ಟೈಮ್ ಟೇಬಲ್ಗೆ ಸೇರ್ಪಡೆಗೊಳಿಸಿದೆ, ಇದರಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ನ ಎರಡನೇ ರೇಕ್ ಕೂಡ ಸೇರಿದೆ. 34 ಹಮ್ಸಫರ್ ಎಕ್ಸ್ಪ್ರೆಸ್ ರೈಲುಗಳು, 11 ಅಂತ್ಯೋದಯ ಎಕ್ಸ್ಪ್ರೆಸ್ ರೈಲುಗಳು, ಎರಡು ತೇಜಸ್ ಎಕ್ಸ್ಪ್ರೆಸ್ ರೈಲುಗಳು ಮತ್ತು ಒಂದು ಉದಯ್ ಎಕ್ಸ್ಪ್ರೆಸ್ ರೈಲುಗಳು ಕೂಡ ಇವೆ.
ಭಾರತೀಯ ರೈಲ್ವೆಯು 2018-2019ರಲ್ಲಿ 141 ಅಲ್ಪ ದೂರ ಪ್ರಯಾಣಿಕ ರೈಲುಗಳನ್ನು ಮೇನ್ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಎಂಇಎಂಯು) ಮತ್ತು ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಡಿಎಂಯು) ಗಳಿಗೆ ಬದಲಾಯಿಸಿದೆ, ಇದರಿಂದಾಗಿ ರೈಲು ವ್ಯವಸ್ಥೆಯ ಒಟ್ಟು ಚಲನಶೀಲತೆಯು ವೇಗವನ್ನು ಪಡೆದುಕೊಂಡಿದೆ.
ವರದಿಯ ಪ್ರಕಾರ, ಪ್ರಯಾಣಿಕರ ಪ್ರಯಾಣದ ಅನುಭವವನ್ನು ಸುಧಾರಿಸಲು, ಒಟ್ಟು 411 ಪ್ರಮುಖ ದೂರದ ಪ್ರಯಾಣಿಕ ರೈಲುಗಳನ್ನು ಈಗ ಎಲ್ಎಚ್ಬಿ ಕೋಚ್ಗಳೊಂದಿಗೆ ಓಡಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.