ನವದೆಹಲಿ: ದೇಶದ ಹಲವು ಭಾಗಗಳಲ್ಲಿ ನೀರಿನ ಅಭಾವ ತಲೆದೋರಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ‘ಜಲ ಶಕ್ತಿ ಅಭಿಯಾನ’ ಎಂಬ ಐದು ಅಂಶಗಳ ನೀರು ಸಂರಕ್ಷಣಾ ಅಭಿಯಾನಕ್ಕೆ ಸೋಮವಾರ ಚಾಲನೆಯನ್ನು ನೀಡಿದೆ.
ಬಾಲಿವುಡ್ ದಿಗ್ಗಜರಾದ ಅಮಿತಾಭ್ ಬಚ್ಚನ್ ಮತ್ತು ಅಮೀರ್ ಖಾನ್ ಈ ಅಭಿಯಾನಕ್ಕೆ ಬೆಂಬಲವನ್ನು ನೀಡಿದ್ದು, ಜನತೆಗೆ ನೀರಿನ ಸಂರಕ್ಷಣೆ ಮಾಡುವಂತೆ, ಆ ಮೂಲಕ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಕೈಜೋಡಿಸುವಂತೆ ಕರೆ ನೀಡಿದ್ದಾರೆ. ಇವರಿಬ್ಬರು ನೀರು ಸಂರಕ್ಷಣೆಗೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿರುವ ವೀಡಿಯೋವನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ರಿಟ್ವೀಟ್ ಮಾಡಿದ್ದಾರೆ. ಜಲಶಕ್ತಿ ಸಚಿವಾಲಯವೂ ಇವರಿಬ್ಬರ ಟ್ವೀಟ್ ಅನ್ನು ರಿಟ್ವೀಟ್ ಮಾಡಿದೆ.
ಅಲ್ಲದೇ ಇವರಿಬ್ಬರ ನೀರು ಸಂರಕ್ಷಣೆಯ ಅರಿವು ಮೂಡಿಸುವ ಪ್ರಯತ್ನಕ್ಕೆ ಮೋದಿ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ. ತಳಮಟ್ಟದಿಂದಲೇ ನೀರಿನ ಸಂರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಅಮಿರ್ ಖಾನ್ ಅವರು ವಾಸ್ತವವಾದ ಅಂಶಗಳನ್ನೇ ಉಲ್ಲೇಖಿಸಿದ್ದಾರೆ ಎಂದಿದ್ದಾರೆ. ಅಮಿತಾಭ್ ಬಚ್ಚನ್ ಮಾತುಗಳೂ ಪ್ರೇರಣಾದಾಯಕ ಎಂದಿದ್ದಾರೆ.
ನೀರು ಸಂರಕ್ಷಣಾ ಅಭಿಯಾನವು 256 ಜಿಲ್ಲೆಗಳ 1592 ನೀರಿನ ಅಭಾವವಿರುವ ಬ್ಲಾಕ್ಗಳ ಮೇಲೆ ಕೇಂದ್ರೀಕರಿಸಲಿದೆ. ಈ ಅಭಿಯಾನ ನೀರಿನ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲು, ಸಾಂಪ್ರದಾಯಿಕ ಅಥವಾ ಇತರ ಜಲಮೂಲಗಳ ನವೀಕರಣ, ನೀರಿನ ಮರುಬಳಕೆ ಮತ್ತು ಕೊಳಗಳ ಪುನರ್ಭರ್ತಿ, ಜಲಾನಯನ ಅಭಿವೃದ್ಧಿ ಮುಂತಾದವುಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಲಿದೆ.
ಮಳೆಗಾಲವಾದ ಜುಲೈ 1ರಿಂದ ಸೆಪ್ಟೆಂಬರ್ 15ರವರೆಗೆ ನಾಗರಿಕರ ಭಾಗವಹಿಸುವಿಕೆಯ ಮೂಲಕ ಈ ಅಭಿಯಾನ ನಡೆಯಲಿದೆ. ಹೆಚ್ಚುವರಿ ಹಂತವು ಅಕ್ಟೋಬರ್ 1 ರಿಂದ ನವೆಂಬರ್ 30 ರವರೆಗೆ ಈಶಾನ್ಯ ಹಿಂಗಾರು ಮಳೆ ಪಡೆಯುವ ರಾಜ್ಯಗಳಲ್ಲಿ ನಡೆಯಲಿದೆ.
“It is critical that we save water today for a better tomorrow, for our future generations and nation.” – Mr. @aamir_khan urges everyone to take a step forward and do their bit in conserving water to secure our future. #JanShakti4JalShakti @narendramodi @PMOIndia @gssjodhpur pic.twitter.com/1SH2YBvBUG
— Jal Shakti Abhiyan (@JalShaktiAbhyan) July 1, 2019
.@SrBachchan urges everyone to take a step towards conserving water at their own level during this upcoming monsoon and contribute to a better future. #JanShakti4JalShakti @narendramodi @PMOIndia @gssjodhpur pic.twitter.com/BYaYjbVxkK
— Jal Shakti Abhiyan (@JalShaktiAbhyan) July 1, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.