ನವದೆಹಲಿ: ಅಮರನಾಥ ಯಾತ್ರಿಕರ ಮೊದಲ ತಂಡವು ಸೋಮವಾರ ಬೆಳಿಗ್ಗೆ ಬಾಲ್ಟಲ್ ಬೇಸ್ ಕ್ಯಾಂಪಿನಿಂದ ಯಾತ್ರೆಯನ್ನು ಆರಂಭಿಸಿದೆ. ಪ್ರಸಿದ್ಧ ಹಿಮಾವೃತ ಶಿವಲಿಂಗದ ದರ್ಶನವನ್ನು ಪಡೆಯುವ ನಿಟ್ಟಿನಲ್ಲಿ ಸಾಗುವ ಈ ಯಾತ್ರೆ ಪೂರ್ಣಗೊಳ್ಳಲು 45 ದಿನಗಳಿವೆ. ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಿನ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದ್ದು, ಯಾತ್ರೆ ಸಾಗುವ ಎರಡು ಮಾರ್ಗಗಳಲ್ಲಿ 60 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಬಾಲ್ಟಲ್ ಬೇಸ್ ಕ್ಯಾಂಪ್ನಿಂದ ಯಾತ್ರಿಕರು ‘ಭಂ ಭಂ ಭೋಲೆ’ ಎಂದು ಜಪಿಸುತ್ತಾ ಯಾತ್ರಿಕರು 3,880 ಮೀಟರ್ ಎತ್ತರದಲ್ಲಿರುವ ಈ ದೇವಾಲಯಕ್ಕೆ ಹೊರಟರು. ಯಾತ್ರಾರ್ಥಿಗಳ ಸುರಕ್ಷತೆ ಮತ್ತು ಅನುಕೂಲತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಇಲ್ಲಿನ ಅಧಿಕಾರಿಗಳು ಹೇಳಿದ್ದಾರೆ. CRPF ಮತ್ತು ಜಮ್ಮು ಕಾಶ್ಮೀರ ಪೊಲೀಸರಿಗೆ ಯಾತ್ರಿಕರ ಭದ್ರತೆಯ ಜವಾಬ್ದಾರಿಯನ್ನು ನೀಡಲಾಗಿದೆ. ಭಾರತೀಯ ಸೇನೆ ಮತ್ತು ಗಡಿ ಭದ್ರತಾ ಪಡೆ ಕೂಡ ಸಂಪೂರ್ಣ ಭದ್ರತಾ ಯೋಜನೆಯ ಭಾಗವಾಗಿದೆ.
ಭದ್ರತಾ ಸಿಬ್ಬಂದಿಗಳು ಮಾತ್ರವಲ್ಲದೇ, ಯಾತ್ರೆಯುದ್ದಕ್ಕೂ ಪರಿಸ್ಥಿತಿಯ ಅವಲೋಕನ ನಡೆಸಲು ಡ್ರೋನ್ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಕೂಡ ಬಳಸಲಾಗುತ್ತಿದೆ. ವಾಹನಗಳಿಗೆ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ) ಟ್ಯಾಗ್ಗಳನ್ನು ಅಳವಡಿಸಲಾಗಿದ್ದು, ಇದರಿಂದ ಅವುಗಳು ಯಾವ ಸ್ಥಳದಲ್ಲಿ ಇದೆ ಎಂಬ ಮಾಹಿತಿಯನ್ನು ನಿಖರವಾಗಿ ತಿಳಿಯಬಹುದು.
“ಅಮರನಾಥ ಯಾತ್ರೆ ನಮಗೆ ಒಂದು ದೊಡ್ಡ ಕಾರ್ಯಕ್ರಮವಾಗಿದೆ. ಇದಕ್ಕಾಗಿ ವಿಸ್ತೃತವಾದ ಭದ್ರತಾ ಯೋಜನೆಯನ್ನು ರೂಪಿಸಲಾಗಿದೆ, ಭಾರತೀಯ ಸೇನೆ, ಬಿಎಸ್ಎಫ್, ಪೊಲೀಸ್ ಮತ್ತು ಸಿಆರ್ಪಿಎಫ್ ಒಟ್ಟಾಗಿ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಿವೆ. ಯಾತ್ರಿಕರಿಗೆ ಯಾವುದೇ ತೊಂದರೆ ಅಥವಾ ಬೆದರಿಕೆ ಎದುರಾಗದಂತೆ ನಾವು ಹಗಲು ರಾತ್ರಿ ಕಣ್ಗಾವಲಿನಲ್ಲಿದ್ದೇವೆ” ಎಂದು ಸಿಆರ್ಪಿಎಫ್ ಐಜಿ ರವಿದೀಪ್ ಸಹಾಯ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.